ಚಿತ್ರದುರ್ಗ;
ಶರಣ ಸಂಸ್ಕತಿ ಉತ್ಸವದ ಅಂಗವಾಗಿ ಶ್ರೀಮಠದ ಆವರಣದಲ್ಲಿ ಜಯದೇವ ಜಂಗೀ ಕುಸ್ತಿ ಪಂದ್ಯಾವಳಿಗೆ ಡಾ.ಶಿವಮೂರ್ತಿ ಮುರುಘಾ ಶರಣರು ಚಾಲನೆ ನೀಡಿದರು.
ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಸುಮಾರು 100ಕ್ಕು ಹೆಚ್ಚು ಕುಸ್ತಿಪಟುಗಳು ಬೆಳಗಾವಿ, ಧಾರವಾಡ, ಶಿವಮೊಗ್ಗ, ದಾವಣಗೆರೆ, ವಿಜಯಪುರ, ಜಮಖಂಡಿ, ಹಾಗು ಮಹಾರಾಷ್ಟ್ರ ಕೊಲ್ಲಾಪುರದ ಕುಸ್ತಿಪಟುಗಳು ಭಾಗವಹಿದ್ದರುಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಐಮಂಗಲ ಶ್ರೀ ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಸ್ವಾಮೀಜಿ, ಕುಸ್ತಿ ದೈಹಿಕ ಮತ್ತು ಮಾನಸಿಕ ಬಲ ನೀಡುತ್ತದೆ ಮೊದಲಿನಿಂದಲೂ ಮೈಸೂರಿನಲ್ಲಿ ಈ ಕ್ರೀಢೆಗೆ ಪ್ರೋತ್ಸಾಹವಿತ್ತು. ಅದರಂತೆ ಶ್ರೀಮಠವು ಈ ಕುಸ್ತಿ ಪಂದ್ಯಾವಳಿಗಳನ್ನು ನಡೆಸುತ್ತಿರುವುದು ಸ್ವಾಗತಾರ್ಹ ಎಂದು ನುಡಿದರು.
ಈ ಸಂಧರ್ಭದಲ್ಲಿ ಬಿ.ಕೋಡಿಹಳ್ಳಿ ಶ್ರೀ ಹೆಳವ ಗುರುಪೀಠದ ಶ್ರೀ ಬಸವ ಭೃಂಗೇಶ್ವರ ಸ್ವಾಮಿಗಳು, ಹೆಬ್ಬಾಳು ಶ್ರೀ ರುದ್ರೇಶ್ವರ ವಿರಕ್ತ ಮಠದ ಶ್ರೀ.ಮ.ನಿ.ಪ್ರ.ಮಹಾಂತ ರುದ್ರೇಶ್ವರ ಸ್ವಾಮಿಗಳು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಫಾತ್ಯರಾಜನ್, ಶರಣ ಸಂಸ್ಕತಿ ಉತ್ಸವದ ಕಾರ್ಯಾದ್ಯಕ್ಷರಾದ ಪಟೇಲ್ ಶಿವಕುಮಾರ್, ಕಾರ್ಯದರ್ಶಿ ಡಿ.ಎಸ್.ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
