ಭಕ್ತ ಕನಕದಾಸರು ಎಲ್ಲಾ ಸಮುದಾಯದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವಲ್ಲಿ ಯಶಸ್ಸಿಯಾದವರು.

ಚಳ್ಳಕೆರೆ

          ಸಮಾಜದಲ್ಲಿ ಹಾಳಾವಾಗಿ ಬೇರುಬಿಟ್ಟಿದ್ದ ಜಾತಿಯತೆಯ ಕಂದಕವನ್ನು ದೂರ ಮಾಡಲು ತಮ್ಮದೇಯಾದ ಕೀರ್ತನೆಗಳ ಮೂಲಕ ಇಡೀ ಮಾನವ ಸಮುದಾಯದ ಎಲ್ಲಾ ಜಾತಿಗಳು ಒಂದೇ ಎಂಬ ಸಂದೇಶದ ಮೂಲಕ ಎಲ್ಲರಲ್ಲೂ ಜಾಗೃತಿ ಮೂಡಿಸಿದ ಮಹಾನ್ ಭಕ್ತಶ್ರೇಷ್ಠ ಕನಕದಾಸರ ಮಹಾನ್ ಸೇವೆ ಈ ಸಮಾಜದಲ್ಲಿ ದಾರಿದೀಪವಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಸನ್ನಕುಮಾರ್ ಬಾಲನಾಯಕ ತಿಳಿಸಿದರು.

         ಅವರು, ಬುಧವಾರ ಇಲ್ಲಿನ ಸಾರಿಗೆ ಸಂಸ್ಥೆಯ ಘಟಕದಲ್ಲಿ ಕನಕದಾಸರ 531ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕನಕದಾಸ ಕೇವಲ ಒಂದೇ ಸಮುದಾಯಕ್ಕೆ ಸೀಮಿತವಾಗದೆ ಇಡೀ ಮಾನವ ಸಮುದಾಯದ ಐಕ್ಯತೆಗಾಗಿ ಶ್ರಮಿಸಿದ ಮಹಾನ್ ಶ್ರೇಷ್ಠ ಕವಿಎಂದು ಅವರು ತಿಳಿಸಿದರು.

         ಆಡಳಿತಾಧಿಕಾರಿ ರಾಜಶೇಖರಕುಂಬಾರ ಮಾತನಾಡಿ, ಕನಕದಾಸರು 500 ವರ್ಷಗಳ ಹಿಂದೆಯೇ ಸಮಸ್ತ ಮಾನವ ಜನಾಂಗ ನಡೆಯಬೇಕಾದ ದಾರಿಯ ಬಗ್ಗೆ ಚಿಂತನೆ ನಡೆಸಿದ್ದರು. ಅವರು ಪ್ರತಿಯೊಂದು ಹಂತದಲ್ಲೂ ಸಮಾಜದ ಕೆಟ್ಟ ಆಲೋಚನೆಗಳು ಮನಸ್ಸಿನಿಂದ ದೂರವಾಗಿಸಲು ತಮ್ಮದೇಯಾದ ಕೀರ್ತನೆಯ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಮಹಾನುಭಾವರು ಎಂದರು.

         ಕಾರ್ಯಕ್ರಮದಲ್ಲಿ ಘಟಕದ ವ್ಯವಸ್ಥಾಪಕ ಪ್ರಭು, ಸತೀಶ್‍ಗೋಪನಹಳ್ಳಿ, ಸಂಗಪ್ಪಚೌಧರಿ, ಎಂ.ಶಿವಲಿಂಗಪ್ಪ, ಇ.ಪ್ರದೀಪ್, ಸುಭಾóಷ್, ಚಾಮರಾಜ, ಸೋಮ್ಲನಾಯ್ಕ, ತಿಪ್ಪೇಸ್ವಾಮಿ, ಕುಮಾರನಾಯಕ ಮುಂತಾದವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap