ವಿಶ್ವ ವಿದ್ಯಾನಿಲಯದಲ್ಲಿ ಹೊಸ ವರ್ಷ ಕಾರ್ಯಕ್ರಮ

ಹೊಳಲ್ಕೆರೆ:

       ಪ್ರಮಾತ್ಮನನ್ನು ನೆನೆಯುತ್ತಾ ಸದಾ ಕಾಲ ಸಂತೊಷವಾಗಿ ಜೀವನ ನಡೆಸಲು ಈ ಹೊಸ ವರ್ಷ ಆಚರಿಸುತ್ತೇವೆ. ಕೇವಲ ಒಂದು ದಿನಕ್ಕೆ ಈ ದಿನ ಸೀಮಿತವಾಗಬಾರದು ಎಂದು ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿ ವಿಶ್ವ ವಿದ್ಯಾನಿಲಯ ಸಂಚಾಲಕಿ ಸುಮಿತ್ರಕ್ಕಾ ತಿಳಿಸಿದರು.

       ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾನಿಲಯದಲ್ಲಿ ಹಮ್ಮಿಕೊಂಡಿದ್ದ ಹೊಸ ವರ್ಷ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.

        ಪ್ರತಿಯೊಬ್ಬರಲ್ಲೂ ಜ್ಞಾನದ ಹೊಳಪು ಇರಲಿ, ಮುಖದಲ್ಲಿ ದೈವಿಗುಣದ ತೇಜಸ್ಸು ತುಂಬಿರಲಿ, ಆರೋಗ್ಯ ಸಂಪತ್ತು ಸದಾ ಜೊತೆಯಲ್ಲಿರಲಿ, ಕೀರ್ತಿ, ಸಂತೋಷ_ಆನಂದದ ಮುಗುಳ್ನಗೆ ನಿಮ್ಮ ಪ್ರಭಾವಳಿಯಾಗಲಿ, ವರ್ಷ ಪೂರ್ತಿ ಭಗವಂತನ ವರದಾನದ ರಕ್ಕಾ ಕವಚ ಸದಾ ನಮ್ಮೆಲರ ಮೇಲೆ ಇರಲಿ ಎಂದು ಹಿತ ವಚನ ನೀಡಿದರು.

       ರಾಜ್ಜೋತ್ಸವ ಪ್ರಶಸ್ತಿ ಪುರಸ್ಕøತರಾದ ಚಂದ್ರಶೇಕರ್ ತಾಳ್ಯ ಮಾತನಾಡಿ ಬ್ರಟೀಷರು 250 ವರ್ಷ ಆಳಿ ಗುಲಾಮಗಿರಿ ಮಾಡಿಸಿ ಬಿಟ್ಟು ಹೋಗಿರುವ ಭಾಷೆ ಇಂಗ್ಲೀಷ್ ಭಾಷೆ. ಅಧ್ಯಾತ್ಮಿಕ ಜೀವನವನ್ನು ರೂಪಿಸಿಕೊಳ್ಳಬೇಕು. ಹೆಚ್ಚು ಪುಸ್ತಕಗಳನ್ನು ಓದಬೇಕು. ನಮ್ಮ ಭಾಷೆಯನ್ನು ಕಲಿಸಿದರೆ, ಬೇರೆಯವರ ಸಂಸ್ಕತಿಯನ್ನು ನಾಶ ಮಾಡುವಂತೆ ಎಂದು ಕವಿ ಹೇಳಿರುವುದು ಸತ್ಯ ಎಂದರು. ಇಂಗ್ಲೀಷ್ ಭಾಷೆಯಾಗಿ ಕಲಿಯಬೇಕು. ಮಾಧ್ಯಮವಾಗಬಾರದು ಎಂದರು.

         ಮಕ್ಕಳು ಹಿರಿಯರನ್ನು ಗೌರವಿಸಬೇಕು. ಹಿರಿಯರು ಮಕ್ಕಳನ್ನು ಪ್ರೀತಿಯಿಂದ ಕಾಣಬೇಕು. ಅಧ್ಯಾತ್ಮಿಕವಾಗಿ ಕೇವಲ ಕೇಳಿ ಹೊರಗೆ ಹೋಗಿ ಬಿಡುವುದು ಅಲ್ಲಾ. ತಪ್ಪು ಎಲ್ಲರು ಮಾಡಿರುತ್ತಾರೆ ಆದರೆ ಪದೇ ಪದೇ ಮಾಡದೇ ತಿದ್ದಿಕೊಂಡು ನಡೆಯುವುದೇ ಮನಷ್ಯನ ಧರ್ಮ ಎಂದರು.

       ಈ ಸಂದರ್ಭದಲ್ಲಿ ದೊಗ್ಗನಾಳ್ ಡಾ.ವಿಶ್ವೇಶ್ವರಯ್ಯ, ಕಾಂಗ್ರೆಸ್ ಮುಖಂಡ ಬಿ.ಎಸ್.ರುದ್ರಪ್ಪ, ತಾ.ಪಂ ಸದಸ್ಯೆ ಗಿರಿಜ ಅಜ್ಜಯ್ಯ, ಮಾಜಿ ತಾ.ಪಂ ಅಧ್ಯಕ್ಷರುಗಳಾದ ಮೋಹನ್ ನಾಗರಾಜ್, ಶರತ್ ಕುಮಾರ್ ಪಾಟೀಲ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಶಿವಮೂರ್ತಿ, ಕ.ಸಾ.ಪ ಅಧ್ಯಕ್ಷ ಲೋಕೇಶ್, ಪತ್ರಕರ್ತರಾದ ಶಿವರುದ್ರಪ್ಪ, ವೇದಮೂರ್ತಿ, ನಷೇಮನ್‍ಆರಾ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link