ರೆಡ್ಡಿ ವಿರುದ್ಧ ಸ್ವಪಕ್ಷೀಯ ನಾಯಕರಿಂದಲೇ ತೀವ್ರ ಅಸಮಾಧಾನ

ಬೆಂಗಳೂರು

        ಪುತ್ರನ ಸಾವಿನ ವಿಷಯ ಪ್ರಸ್ತಾಪಿಸಿ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಟೀಕಿಸಿದ ಮಾಜಿ ಸಚಿವ ಜನಾರ್ಧನ ರೆಡ್ಡಿ ವಿರುದ್ಧ ಇದೀಗ ಸ್ವಪಕ್ಷೀಯ ನಾಯಕರಿಂದಲೇ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಚುನಾವಣಾ ಪ್ರಚಾರಕ್ಕೆ ಇಂತಹ ವಿಷಯ ಬಳಸಿಕೊಂಡಿರುವುದಕ್ಕೆ ಕಿಡಿಕಾರಿದ್ದಾರೆ.

        ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನದ ಅಂಗವಾಗಿ ಬಿಜೆಪಿಯಿಂದ ನಗರದ ಮೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏಕತಾ ಓಟ ನಡೆಸಲಾಯಿತು. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಏಕತಾ ಓಟಕ್ಕೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಚಾಲನೆ ನೀಡಲಾಯಿತು.

      ಸಂಸದ ಪಿ.ಸಿ ಮೋಹನ್, ಮಾಜಿ ಸಚಿವರಾದ ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ನಡೆದ ಏಕತಾ ಓಟದಲ್ಲಿ ನೂರಾರು ಕಾರ್ಯಕರ್ತರು ರಾಷ್ಟ್ರಧ್ವಜವನ್ನು ಹಿಡಿದು ಭಾಗಿಯಾದರು. ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಓಟ ವಸಂತನಗರದಲ್ಲಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಭವನದಲ್ಲಿ ಕೊನೆಗೊಂಡಿತು.

      ಏಕತಾ ಓಟದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಸುರೇಶ್ ಕುಮಾರ್, ಜರ್ನಾರ್ಧನ್ ರೆಡ್ಡಿ ಹೇಳಿಕೆಗೆ ಕೆಂಡಾಮಂಡಲರಾದರು. ಸಾವಿನ ವಿಚಾರದಲ್ಲಿ ಯಾರೂ ಹಗುರವಾಗಿ ಮಾತನಾಡಬಾರದು. ಅದು ನಮ್ಮ ಸಾವು ಅಷ್ಟೆ, ಬೇರೆಯವರ ಸಾವಾದ್ರೂ ಅಷ್ಟೆ.

       ಸಾವಾದವರ ಮನೆಯಲ್ಲಿ ಮಾತ್ರ ಕಳೆದುಕೊಂಡವರ ದುಃಖ ಗೊತ್ತಿರುತ್ತದೆ ಎಂದು ರೆಡ್ಡಿ ವಿರುದ್ಧ ಕಿಡಿಕಾರಿದರು.ನನ್ನ ಪ್ರಕಾರ ರಾಜಕೀಯ ವಿಶೇಷವಾಗಿ ಚುನಾವಣಾ ಭಾಷಣದ ಮಟ್ಟವನ್ನ ಮತ್ತೊಮ್ಮೆ ಅವಲೋಕಿಸಬೇಕಿದೆ.ಯಾವುದೇ ರೀತಿ ಯಿಂದ ಕೆಳಗೆ ಬೀಳದಂತೆ,ತಪ್ಪು ಸಂದೇಶ ಹೋಗದಂತೆ ನೋಡಿಕೊಳ್ಳೋದು ಎಲ್ಲರ ಕರ್ತವ್ಯ.ಜನಾರ್ಧನ ರೆಡ್ಡಿ ಖುದ್ದು ಸ್ಪಷ್ಟನೆ ನೀಡಿದ್ದಾರೆ. ಆದರೂ ಇಂತಹ ಹೇಳಿಕೆ ಸಲ್ಲದು ಎಂದರು.

        ಸಿದ್ದರಾಮಯ್ಯ ಪುತ್ರ ಸಾವಿನ ವಿಚಾರ ಕುರಿತ ಜನಾರ್ಧನ ರೆಡ್ಡಿ ಹೇಳಿಕೆಗೆ ಸಂಸದ ಪಿ.ಸಿ.ಮೋಹನ್ ಕೂಡ ಗರಂ ಆದರು. ಚುನಾವಣೆಯಲ್ಲಿ ಸಾಧನೆ ಬಗ್ಗೆ ಚರ್ಚೆ ಆಗಲಿ.ಅದು ಬಿಟ್ಟು ಕುಟುಂಬದ ಸಾವಿನ ಕುರಿತು ನೋವಾಗುವ ರೀತಿ ಭಾಷಣ ಮಾಡೋದು ತಪ್ಪು. ಇದರಿಂದ ರಾಜಕಾರಣಿಗಳ ಮೇಲೆ ಜನ ನಂಬಿಕೆ ಕಳೆದುಕೊಳ್ಳುತ್ತಾರೆ. ಜನಾರ್ಧನ ರೆಡ್ಡಿ ಆ ಪದವನ್ನ ಉಪಯೋಗಿಸಬಾರದಿತ್ತು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap