ಹುಳಿಯಾರು
ಹುಳಿಯಾರಿನ ಮಸೀದಿ ರಸ್ತೆಯಲ್ಲಿ ಸನತ್ ಅವರು ಗಿನ್ನಿಸ್ ದಾಖಲೆಗೆ ಸೇರಲಿರುವ ಎಂಐ ಕಂಪನಿಯ ಎಂಐ ಸ್ಟೋರ್‍ಅನ್ನು ಸೋಮವಾರ ಮಧಾಹ್ನ 12 ಗಂಟೆಗೆ ಆರಂಭಿಸಲಾಯಿತು.
ಕೇರಳ, ಆಂಧ್ರ ಹಾಗೂ ಕರ್ನಾಟಕ ರಾಜ್ಯದಲ್ಲಿ ಒಟ್ಟು 555 ಎಂಐ ಸ್ಟೋರ್‍ಅನ್ನು ಒಂದೇ ದಿನ ಒಂದೇ ಸಮಯಕ್ಕೆ ಆರಂಭಿಸುವ ಮೂಲಕ ಎಂಐ ಕಂಪನಿ ಗಿನ್ನಿಸ್ ದಾಖಲೆಗೆ ಸೇರಲಿದೆ. ಇದರಲ್ಲಿ ಕರ್ನಾಟಕದ 106 ಕಡೆ ಎಂಐ ಸ್ಟೋರ್ ಇಂದು ಆರಂಭಿಸಲಾಗಿದ್ದು ಇದರಲ್ಲಿ ಹುಳಿಯಾರಿನ ಸನತ್ ಅವರ ಸ್ಟೋರ್ ಸಹ ಒಂದಾಗಿದೆ.
ಆರ್ಯವೈಶ್ಯ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಥಿಯಾಸಫಿಕಲ್ ಸೊಸೈಟಿ ಮಾಜಿ ಅಧ್ಯಕ್ಷ ಜಿ.ಎಸ್.ಸತ್ಯನಾರಾಯಣ ಶೆಟ್ಟಿ ಅವರು ಮಧ್ಯಾಹ್ನ ಸರಿಯಾಗಿ 12 ಗಂಟೆಗೆ ಹುಳಿಯಾರಿನ ಎಂಐ ಸ್ಟೋರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ, ವಾಸವಿ ಶಾಲೆಯ ಮುಖ್ಯ ಶಿಕ್ಷಕ ಗಂಗಾಧರ್, ಕೆನರಾ ಬ್ಯಾಂಕ್ ಕ್ಯಾಷಿಯರ್ ವೇಣು ಗೆಜೆಟೆಡ್ ಅಧಿಕಾರಿಗಳಾಗಿ ಉಪಸ್ಥಿತರಿದ್ದು ಸಾಕ್ಷೀಕರಿಸಿದರು.
ಆರ್ಯವೈಶ್ಯ ಮಂಡಳಿ ಗೌರವ ಅಧ್ಯಕ್ಷ ಎಂಎಸ್‍ಆರ್ ನಟರಾಜ್, ಆರ್ಯವೈಶ್ಯ ಬ್ಯಾಂಕ್ ಅಧ್ಯಕ್ಷ ಟಿ.ಜಿ.ರಮಾಕಾಂತ್, ವಾಸವಿ ಕ್ಲಬ್ ಕಾರ್ಯದರ್ಶಿ ಸುಧೀರ್, ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಡಿ.ಜೆ.ಗಾಯಿತ್ರಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








