ಮತದಾರರ ಸಹಾಯವಾಣಿ 1950 ಕೇಂದ್ರ : ಜಿಲ್ಲಾಧಿಕಾರಿಗಳಿಂದ ಚಾಲನೆ

ದಾವಣಗೆರೆ 

       ಜಿಲ್ಲಾಡಳಿತ ಭವನದಲ್ಲಿ ಮತದಾರರ ಸಹಾಯವಾಣಿಗೆಂದೇ ಪ್ರತ್ಯೇಕವಾಗಿ ಸ್ಥಾಪಿಸಲಾಗಿರುವ ‘ಮತದಾರರ ಸಹಾಯವಾಣಿ 1950’ ಕೇಂದ್ರಕ್ಕೆ ಫೆ.1 ರ ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಇವರು ಮಾತನಾಡಿ, ಭಾರತೀಯ ಚುನಾವಣಾ ಆಯೋಗದ ಆದೇಶದ ಮೇರೆಗೆ ಇಂದು ಬೆಳಿಗ್ಗೆ ಉಚಿತ (ಟೋಲ್‍ಫ್ರೀ) ಸಹಾಯವಾಣಿಯನ್ನು ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ 1950 ಆಗಿರುತ್ತದೆ.

          ಈ ಟೋಲ್‍ಫ್ರೀ ಸಹಾಯವಾಣಿ ಮೂಲಕ ಜಿಲ್ಲೆಯ ಮತ್ತು ಹೊರ ಜಿಲ್ಲೆಯ ನಾಗರೀಕರು ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಮೊಬೈಲ್ ಮತ್ತು ಸ್ಥಿರ ದೂರವಾಣಿ ಮೂಲಕ ಪಡೆಯಬಹುದು.ಮತದಾರರ ಸಹಾಯವಾಣಿ 1950 ರಲ್ಲಿ ಮತದಾರರ ನೋಂದಣಿ, ಅರ್ಜಿಗಳ ಬಗ್ಗೆ ಪರಿಶೀಲನೆ, ಮತಗಟ್ಟೆ ವಿವರ, ಮತಗಟ್ಟೆ ಅಧಿಕಾರಿಗಳ ಬಗ್ಗೆ, ಚುನಾವಣೆ ಕುರಿತು ಮಾಹಿತಿ, ದೂರುಗಳಿದ್ದಲ್ಲಿ ಸಲ್ಲಿಸಬಹುದು. ವಿದ್ಯುನ್ಮಾನ ಮತಯಂತ್ರದ ಬಗ್ಗೆಯೂ ತಿಳಿಯಬಹುದು.

        ಒಟ್ಟಾರೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಈ ಸಹಾಯವಾಣಿ ಮೂಲಕ ಮಾಹಿತಿ ಪಡೆಯಬಹುದು, ಫೀಡ್‍ಬ್ಯಾಕ್ ಪಡೆಯಬಹುದು, ಸಲಹೆ ನೀಡಬಹುದು ಮತ್ತು ದೂರುಗಳನ್ನು ಸಲ್ಲಿಸಬಹುದಾಗಿದೆ.

         ಬಿಎಸ್‍ಎನ್‍ಎಲ್‍ನಿಂದ ಪಿಆರ್‍ಐ ಗೇಟ್‍ವೇ ದೊರೆತಿದ್ದು, ಯಾವುದೇ ಅಡಚಣೆ ಇಲ್ಲದೇ ಸಾರ್ವಜನಿಕರು ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಪ್ರಸ್ತುತ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಸಹಾಯವಾಣಿ ಲಭ್ಯವಿರುತ್ತದೆ. ಚುನಾವಣಾ ಘೋಷಣೆಯಾದ ನಂತರ ದಿನದ 24 ಗಂಟೆ (24*7) ಕಾರ್ಯ ನಿರ್ವಹಿಸಲಿದೆ. ಪ್ರಸ್ತುತ ನಾಲ್ಕು ಸಿಬ್ಬಂದಿಗಳನ್ನು ಸಹಾಯವಾಣಿ ಕೇಂದ್ರಕ್ಕೆ ನಿಯೋಜಿಸಲಾಗಿದೆ. ಚುನಾವಣೆ ಘೋಷಣೆಯಾದ ನಂತರ ಹೆಚ್ಚಿನ ಸಿಬ್ಬಂದಿಗಳ ಅವಶ್ಯಕತೆ ಇದ್ದರೆ ನಿಯೋಜಿಸಲಾಗುವುದು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶಿವಾನಂದ ಕುಂಬಾರ್ ಇವರು ಈ ಸಹಾಯವಾಣಿಗೆ ನೋಡಲ್ ಅಧಿಕಾರಿಯಾಗಿರುತ್ತಾರೆ ಎಂದು ಮಾಹಿತಿ ನೀಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap