ಹಂಗರಹಳ್ಳಿ ಶ್ರೀಮಠದಲ್ಲಿ ಮಹಾಚಂಡಿಕ ಹೋಮ

ಕುಣಿಗಲ್

          ಸಮಾಜ ಧರ್ಮ-ಸಂಸ್ಕೃತಿಯನ್ನ ಹಾಗೂ ಮಾನವೀಯತೆಯನ್ನ ಬಿಟ್ಟು ಹಣ ಮಾಡುವ ದುರುದ್ದೇಶದಿಂದ ಪರಸ್ಪರ ಮನುಷ್ಯರೆ ನಂಬಿಕೆಯನ್ನೇ ಕಳೆದುಕೊಂಡು ಅಧೋಗತಿಯತ್ತ ಸಾಗುತ್ತಿರುವ ಸಮಾಜದ ಸ್ಥಿತಿಯನ್ನು ತಪ್ಪಿಸಿ ದೇಶದ ಹಿಂದೂ ಸಂಸ್ಕøತಿಯ ಉಳುವಿಗಾಗಿ ಶ್ರೀ ಮಹಾ ಚಂಡಿಕಾ ಹೋಮವನ್ನ ನೆರವೇರಿಸಲಾಯಿತು ಎಂದು ಹಂಗರಹಳ್ಳಿ ಶ್ರೀ ಮಠದ ಬಾಲಮಂಜುನಾಥಸ್ವಾಮೀಜಿ ತಿಳಿಸಿದರು.

         ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಬೆಣಚಕಲ್ಲು ರಸ್ತೆಯ ಹಂಗರಹಳ್ಳಿ ಶ್ರೀಮಠದಲ್ಲಿ ಶ್ರೀ ವಿದ್ಯಾಚೌಡೇಶ್ವರಿ ಮತ್ತು ಶನೇಶ್ವರ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಪ್ರವಚನ ನೀಡಿದರು. ಹಿಂದಿನ ಕಾಲದಲ್ಲಿ ಸಾಮಾನ್ಯ ಮನುಷ್ಯರು ಸಹ ಲಕ್ಷ ದುಡಿಯುತ್ತಿರಲಿಲ್ಲ, ಆದರೆ ಬಿಕ್ಷೆ ಬೇಡುತ್ತಿರಲಿಲ್ಲ. ಆದರೆ ಇಂದಿನ ಸಮಾಜ ಮನುಷ್ಯ ಬದಲಾಗುತ್ತ ಲಕ್ಷದುಡಿದರೂ ಬಿಕ್ಷೆ ಬೇಡುತ್ತಿದ್ದಾರೆ.

             ಜೊತೆಗೆ ಹೇಳಹೆಸರಿಲ್ಲದ ರೋಗಗಳನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ. ಹಿಂದೆ ತೊರೆಹಳ್ಳಗಳಲ್ಲಿ ಹರಿಯುತ್ತಿದ್ದ ನೀರನ್ನು ಕುಡಿದು ದಕ್ಕಿಸಿಕೊಳ್ಳುತ್ತಿದ್ದರು. ಈಗ ಫಿಲ್ಟರ್ ನೀರು ಕುಡಿಯುತ್ತಿದ್ದರೂ ಕಿಡ್ನಿಯಲ್ಲಿ ಕಲ್ಲು ತುಂಬಿಸಿಕೊಳ್ಳುತ್ತಿದ್ದಾರೆ. ಹಿಂದಿನ ಗೃಹಿಣಿಯರು ಸೂರ್ಯ ಹುಟ್ಟುವ ಮೊದಲೇ ಮನೆಯ ಮುಂದೆ ಸಗಣಿ ನೀರನ್ನು ಹಾಕಿ ರಂಗೋಲಿ ಬಿಟ್ಟು ಒಳಿತನ್ನು ಬಯಸಿ ಸೂರ್ಯನನ್ನ ಸ್ವಾಗತಿಸುತ್ತಿದ್ದರು. ಆದರೆ ಈಗ ಬಿಡುವಿಲ್ಲದ ಸಮಯದಲ್ಲಿ ಸೂರ್ಯ ಹುಟ್ಟಿದ ಮೇಲೆ ಏಳುವುದನ್ನ ಕಲಿತು ಕಷ್ಟಗಳನ್ನ ಮನೆ ತುಂಬಿಸಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಧರ್ಮ ಮತ್ತು ಸಂಸ್ಕತಿಯನ್ನು ಬಿಟ್ಟು ನಡೆಯುತ್ತಿರುವುದೆ ಆಗಿದೆ ಎಂದು ಗೃಹಿಣಿಯರಿಗೆ ಕಿವಿಮಾತು ಹೇಳಿದರು.

         ಸರ್ವೇಜನ ಸುಖಿನೋಭವಂತು ಎಂಬುದು ಹಿಂದೂ ಧರ್ಮದಲ್ಲಿ ಮಾತ್ರ ಇದೆ. ಬೇರಾವ ಧರ್ಮದಲ್ಲಿಯೂ ಮಾನವ ಜನ್ಮ ಸುಖವಾಗಿರಲಿ ಎಂದು ಪ್ರಾರ್ಥಿಸುವುದಿಲ್ಲ. ಆದ್ದರಿಂದ ಹಿಂದೂ ಧರ್ಮ ಶ್ರೇಷ್ಠವಾಗಿದ್ದು ಧರ್ಮವನ್ನು ಕಟ್ಟುವ ಕೆಲಸವನ್ನ ಪ್ರತಿಯೊಬ್ಬರೂ ಮಾಡಬೇಕೆಂದು ಕರೆ ನೀಡಿದರು. .

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap