ಬೆಂಗಳೂರು
ನಗರದಲ್ಲಿ ಕಾರ್ಯಾಚರಣೆ ನಡೆಸಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಮಾದಕ ವಸ್ತು ನಿಗ್ರಹದಳ)ದ ಅಧಿಕಾರಿಗಳು ಹೆಮ್ಮಿಗೇಪುರದ ಮನೆಯೊಂದರ ಮೇಲೆ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ 27 ಕೆಜಿ ಕೆಟಮಿನ್ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಹೆಮ್ಮಿಗೇಪುರದ ರುಫ್ಲೆಕ್ಸ್ ಲೇಔಟ್‍ನ ಮನೆಯೊಂದರ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಸತತ 6 ಗಂಟೆ ಪರಿಶೀಲನೆ ನಡೆಸಿ ಕೆಟಮಿನ್ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ 1 ವರ್ಷದಿಂದ ಬಾಡಿಗೆಗೆ ಮನೆ ಪಡೆದುಕೊಂಡು ಮೂವರು ಮಕ್ಕಳೊಂದಿಗೆ ದಂಪತಿ ವಾಸವಾಗಿದ್ದರು ಖಚಿತ ಮಾಹಿತಿ ಅಧರಿಸಿ ಅಧಿಕಾರಿಗಳು ದಾಳಿ ನಡೆಸಿದಾಗ ಅಡುಗೆ ಕೊಣೆಯಲ್ಲಿಯೇ ಕೆಜಿಗಟ್ಟಲೆ ಮಾದಕ ವಸ್ತುಗಳನ್ನ ಸಂಗ್ರಹ ಮಾಡಿದ್ದರು.
ವಾಸನೆ ಹೊರಹೋಗದಂತೆ ತಡೆಯಲು ಪ್ರತ್ಯೇಕ ಫ್ಯಾನ್ ವ್ಯವಸ್ಥೆ ಕೂಡ ಮಾಡಿದ್ದರು ನಸುಕಿನ ವೇಳೆ ಮನೆಯಿಂದ ಬ್ಯಾರಲ್‍ಗಳಲ್ಲಿ ಮಾದಕವಸ್ತುವನ್ನು ಪಾರ್ಸಲ್ ಕಳುಹಿಸುತ್ತಿದ್ದ ಮಾಹಿತಿ ಲಭ್ಯವಾಗಿದ್ದು ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಬೆಂಗಳೂರು ಸೇರಿದಂತೆ ಹೈದರಾಬಾದ್‍ನಲ್ಲಿಯೂ ಮಾದಕ ವಸ್ತು ನಿಗ್ರಹದಳದ ಅಧಿಕಾರಿಗಳು ದಾಳಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








