ಬೆಂಗಳೂರು
ವಿಮಾನ ನಿಲ್ದಾಣಕ್ಕೆ ಕೆಲವೇ ನಿಮಿಷಗಳಲ್ಲಿ ತಲುಪಲು ಅತಿ ವೇಗವಾಗಿ ಹೋಗುತ್ತಿದ್ದ ಬಿಎಂಡಬ್ಲ್ಯು ಕಾರು ಮುಂದೆ ಹೋಗುತ್ತಿದ್ದ ಕ್ಯಾಬ್‌ಗೆ ಗುದ್ದಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿ ಮುಂದಿನ ಲಾರಿಗೆ ಕಳೆಗೆ ನುಗ್ಗಿ ದುಬೈನ ಇಂಜಿನಿಯರೊಬ್ಬರು ಮೃತಪಟ್ಟು, ಅವರ ಪತ್ನಿ ಗಾಯಗೊಂಡಿರುವ ದುರ್ಘಟನೆ ಹೆಬ್ಬಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಪಟ್ಟವರನ್ನು ದುಬೈನಲ್ಲಿ ಇಂಜಿನಿಯರ್ ಆಗಿದ್ದ ಕುಕ್‌ಸ್ಟೋನ್‌ನ ಗೋಪಿ ಶೆಟ್ಟಿ ವಾಸುದೇವರಾವ್ (58) ಎಂದು ಗುರುತಿಸಲಾಗಿದೆ ಅಪಘಾತದಲ್ಲಿ ಗಾಯಗೊಂಡಿರುವ ಅವರ ಪತ್ನಿ ಚಾರುಮತಿ (48) ಪ್ರಾಣಾಪಾಯದಿಂದ ಪಾರಾಗಿದ್ದಾರೆ.ದುಬೈಗೆ ಹೋಗುತ್ತಿದ್ದ ಪತಿಯನ್ನು ವಿಮಾನ ನಿಲ್ದಾಣಕ್ಕೆ ಶನಿವಾರ ಮುಂಜಾನೆ 4.45ರ ವೇಳೆ ಕರೆದುಕೊಂಡು ಬಿಎಂಡಬ್ಲ್ಯು ಕಾರನ್ನು ಚಲಾಯಿಸಿಕೊಂಡು ಅತಿ ವೇಗವಾಗಿ ಚಾರುಮತಿ ಹೋಗುತ್ತಿದ್ದರು.
ಮಾರ್ಗಮಧ್ಯೆ ಬ್ಯಾಟರಾಯನಪುರದ ಮೇಲ್ಸೇತುವೆ ರಸ್ತೆಯಲ್ಲಿ ಮುಂದೆ ಹೋಗುತ್ತಿದ್ದ ಡಿಕ್ಕಿ ಹೊಡೆದು, ನಂತರ ರಸ್ತೆ ವಿಭಜಕಕ್ಕೆ ಗುದ್ದಿ ಮುಂದಿನ ಲಾರಿಗೆ ಡಿಕ್ಕಿ ಹೊಡೆದು ಅದರ ಕೆಳಗೆ ಸಿಲುಕಿದ್ದಾರೆ.ಗಂಭೀರವಾಗಿ ಗೋಪಿಶೆಟ್ಟಿ ವಾಸುದೇವರಾವ್, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟರೆ, ಚಾರುಮತಿ ಗಾಯಗೊಂಡು ಪಾರಾಗಿದ್ದಾರೆ.
ಅಪಘಾತದ ರಭಸಕ್ಕೆ ಕಾರು ಹಾಗೂ ಕ್ಯಾಬ್ ಜಖಂಗೊಂಡಿದ್ದು, ಪ್ರಕರಣ ದಾಖಲಿಸಿರುವ ಹೆಬ್ಬಾಳ ಸಂಚಾರ ಪೊಲೀಸರು ಮುಂದಿನತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
