ಕೋವಿಡ್ ಕೇರ್ ಸೆಂಟರ್ ಗೆ ಅಪರ ಜಿಲ್ಲಾಧಿಕಾರಿ

ಹರಪನಹಳ್ಳಿ    ತಾಲೂಕು ಭಾರತೀಯ ವೈದ್ಯಕೀಯ ಸಂಘದ ಸಹಬಾಗಿತ್ವದಲ್ಲಿ ಪಟ್ಟಣದ ಹಡಗಲಿ ರಸ್ತೆಯಲ್ಲಿರುವ ಆರೋಗ್ಯ ಮಾತಾ ಅಸ್ಪತ್ರೆಯಲ್ಲಿ ಸಿದ್ದಗೊಂಡಿರುವ ಜಿಲ್ಲೆಯ ಮೊದಲ ಖಾಸಗಿಯ ಕೋವಿಡ್ ಕೇರ್ ಸೆಂಟರ್ ಆಸ್ಪತ್ರೆ ಸಿದ್ದತೆಗಳನ್ನು ಶುಕ್ರವಾರ ಅಪಾರ ಜಿಲ್ಲಾಧಿಕಾರಿ ಮಂಜುನಾಥ ಪರಿಶೀಲಿಸಿದರು.

    ನಂತರ ಖಾಸಗಿ ವೈದ್ಯರೊಂದಿಗೆ ಮಾತನಾಡಿದ ಅವರು ಕೋವಿಡ್-19ನಂತಹ ತುರ್ತು ಸಂದರ್ಭದಲ್ಲಿ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಐಎಂಎ ಹಾಗೂ ಆರೋಗ್ಯ ಮಾತಾ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಹರಪನಹಳ್ಳಿ ಖಾಸಗಿ ವೈದ್ಯರು ಸ್ವಯಂಪ್ರೇರಿತರಾಗಿ ಕೋವಿಡ್ ಆಸ್ಪತ್ರೆ ಆಗಿ ಸಿದ್ದತೆ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಯಾವುದೇ ರೀತಿಯ ತೊಂದರೆಗಳಾದಲ್ಲಿ ಉಪವಿಭಾಗಾಧಿಕಾರಿಗಳ ಗಮನಕ್ಕೆ ತನ್ನಿ, ನಾವು ಕೂಡ ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

    ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನ ಕುಮಾರ್, ಕರೋನಾ ವೈರಸ್ ನಿಂದ ಉಸಿರಾಟ ತೊಂದರೆ ಇರುವ ತುರ್ತು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಮತ್ತು ಹಾಲಿ ಇರುವ 15 ಆಕ್ಸಿಜನ್ ಸೌಲಭ್ಯ ವಾರ್ಡ್ ಗಳನ್ನು ಹೆಚ್ಚಿಸುವಂತೆ ತಿಳಿಸಿದರು. ಐಎಂಇನ ಡಾ.ಮಹೇಶ್ ಮಾತನಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದ ನಿರ್ದೇಶನದಂತೆ ಕೋವಿಡ್ ಚಿಕಿತ್ಸೆ ನೀಡಬೇಕಾಗಿರುವುದರಿಂದ ಎರಡು ವೈದ್ಯಕೀಯವನ್ನು ಒಂದೇ ಕಡೆ ಮಾಡುವುದರಿಂದ ರೋಗ ಹೆಚ್ಚುವ ಸಂಭವ ಇದ್ದು ಇದನ್ನು ಮನಗಂಡು ತಾಲೂಕು ಭಾರತೀಯ ವೈದ್ಯಕೀಯ ಸಂಘ ಹಾಗು ಆರೋಗ್ಯ ಮಾತಾ ಆಸ್ಪತ್ರೆಯೊಂದಿಗೆ ಚರ್ಚಿಸಿ ಕೋವಿಡ್ ಕೇರ್ ಅನ್ನು ತೆರೆಯಲಾಗಿದ್ದು ಪ್ರಸ್ತುತ 30 ಬೆಡ್‍ಗಳನ್ನು ಸಿದ್ದಪಡಿಸಲಾಗಿದೆ, ಮುಂದಿನ ದಿನಗಳಲ್ಲಿ ಲಭ್ಯತೆ ಆದಾರದಲ್ಲಿ 20 ಬೆಡ್‍ಗಳನ್ನು ಹೆಚ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.

    ಈ ಸಂದರ್ಭಧಲ್ಲಿ ತಹಶೀಲ್ದಾರ ಜಿ.ಅನಿಲ್ ಕುಮಾರ್, ಟಿಹೆಚ್‍ಓ ಡಾ.ಶಿವಕುಮಾರ್, ವೈದ್ಯರಾದ ಡಾ.ಹರ್ಷ ಜಿ.ವಿ, ಡಾ.ಶೇಕ್ ನಫ್ತಾರ್, ಆರೋಗ್ಯ ಮಾತಾ ಆಸ್ಪತ್ರೆಯ ಸಿಸ್ಟರ್ ಸುಂದರಿ, ಸಿಸ್ಟರ್ ಮರಲೀನ್ ಹಾಗೂ ಖಾಸಗಿ ಆಸ್ಪತ್ರೆ ವೈದ್ಯರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ