ಬಳ್ಳಾರಿ:
ಜಿಲ್ಲೆಯ ಸಂಡೂರು ತಾಲ್ಲೂಕು ದೇವಲಾಪುರ ಗ್ರಾಮದಲ್ಲಿ ಜೈಸುಧಾ ತಂದೆ ಪಂಪಾಪತಿ ಮಗನಿಗೆ ರಜೆ ಇದ್ದ ಕಾರಣ ಇಂದು ತಂದೆ ತಾಯಿ ಜೊತೆ ಹೊಲಕ್ಕೆ ಹೋಗಿದ್ದ ಅಲ್ಲಿ ಆಟ ಆಡುತ್ತಿದ್ದ ಸಮಯದಲ್ಲಿ ಮೊಗುವನ್ನು ಚಿರತೆ ಹೊತ್ತೊಯ್ಯಲು ನೋಡಿದಾಗ ಮಗು ಸಹಾಯಕ್ಕಾಗಿ ಕಿರುಚಿದೆ ಅದನ್ನು ಕೇಳಿ ಸ್ಥಳಕ್ಕೆ ಬಂದ ಎಲ್ಲರೂ ಸೇರಿ ಚಿರತೆಯನ್ನು ಓಡಿಸಿ ಮೊಗುವನ್ನು ರಕ್ಷಿಸಿ ಸಮೀಪದ ಕಂಪ್ಲಿ ಆಸ್ಪತ್ರೆಗೆ ಬೈಕ್ ಮೇಲೆ ಗ್ರಾ ಪಂ ಸದಸ್ಯ ರಾಮನಗೌಡ ಕರೆದುಕೊಂಡು ಹೋಗಲಾಯಿತಾದರು ಮಗು ಬದುಕುಳಿಯಲಿಲ್ಲ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಹಾಗೂ ಜಿಲ್ಲೆ ಜನಪ್ರತಿನಿಧಿಗಳು ಭೇಟಿ ನೀಡಲಿದ್ದಾರೆಂದು ಮೂಲಗಳು ತಿಳಿಸಿವೆ ಮತ್ತು ಗ್ರಾಮದಲ್ಲಿ ಇನ್ನು ಮೂರನಾಲ್ಕು ಚಿರತೆಗಳು ಬೀಡುಬಿಟ್ಟಿದ್ದು ಗ್ರಾಮಸ್ಥರು ಆತಂಕ ಗೊಂಡಿದ್ದು ಅರಣ್ಯಾಧಿಕಾರಿಗಳು ಕೂಡಲೆ ಕ್ರಮ ತೆಗೆದುಕೊಳ್ಳಬೇಕಾಗಿ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ