ಭಾರತ್ ಬಚಾವೋ ಆಂದೋಲನ

ದಾವಣಗೆರೆ :

      ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಎನ್‍ಆರ್‍ಸಿ ಮತ್ತು ಎನ್‍ಪಿಆರ್ ವಿರೋಧಿಸಿ  ಮಾರ್ಚ್ 13 ರಂದು ಭಾರತೀಯ ಜನತಾ ವೇದಿಕೆಯಿಂದ ನಗರದಲ್ಲಿ ಭಾರತ್ ಬಚಾವೋ ಆಂದೋಲನ ಏರ್ಪಡಿಸಲಾಗಿದೆ ಎಂದು ವೇದಿಕೆಯ ಸಂಚಾಲಕ ಜೆ.ಅಮಾನುಲ್ಲಾ ಖಾನ್ ತಿಳಿಸಿದರು.

    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಸಂಜೆ 5 ಗಂಟೆಗೆ ನಗರದ ಮಾಗಾನಹಳ್ಳಿ ರಸ್ತೆಯ ಮಿಲಾದ್ ಮೈದಾನದಲ್ಲಿ ನಡೆಯುವ ಭಾರತ್ ಬಚಾವೋ ಆಂದೋಲನದಲ್ಲಿ ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಮಾಜಿ ಸಭಾಪತಿ, ಹಾಲಿ ಶಾಸಕ ರಮೇಶ್ ಕುಮಾರ್, ಪ್ರೋ.ಸುಷ್ಮಾ ಆಂದ್ರೆ, ಜ್ಞಾನಪ್ರಕಾಶ್ ಸ್ವಾಮೀಜಿ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಹೆಚ್.ಆಂಜನೇಯ, ಹರಿಹರ ಶಾಸಕ ಎಸ್.ರಾಮಪ್ಪ, ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಎನ್.ಎಂ.ನಬೀಸಾಬ್, ನಸೀರ್ ಆಹಮದ್, ಮಾಜಿ ಶಾಸಕ ಶಿವಶಂಕರ್, ಸೈಯದ್ ಸೈಫುಲ್ಲಾ ಸಾಬ್, ಸಾಧಿಕ್ ಪೈಲ್ವಾನ್, ಮೌಲಾನ್ ಮಹಮದ್ ಹನೀಫ್ ರಜ್ಹಾ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

    ಕೇಂದ್ರ ಸರ್ಕಾರ ಸಿಎಎ, ಎನ್‍ಆರ್‍ಸಿ ಮತ್ತು ಎನ್‍ಆರ್‍ಪಿಗಳನ್ನು ಜಾರಿಗೆ ತರುವ ಮೂಲಕ ದೇಶದ ಜನರ ನೆಮ್ಮದಿಯನ್ನು ಹಾಳುಗೆಡವಿದ್ದು, ಒಂದು ರೀತಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ರೀತಿಯಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಹೋರಾಟ ನಡೆಯುತ್ತಿದೆ. ಹಿಂದೆ ಪ್ರತಿವರ್ಷಕ್ಕೊಮ್ಮೆ ನಡೆಸುತ್ತಿದ್ದ ಸಾಮಾನ್ಯ ಜನಗಥಿಯ ಜೊತೆಗೆ ಏಪ್ರಿಲ್ 1ರಿಂದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‍ಪಿಆರ್) ನಡೆಸಲಿದ್ದು, ಜನಗಣತಿಯ ಕಾಲಂ ಜೊತೆಗೆ ಇನ್ನೂ ಆರು ಕಾಲಂಗಳನ್ನು ಸೇರಿಸಿ, ನಮ್ಮ ತಂದೆ-ತಾಯಿ ಹುಟ್ಟಿದ ದಿನಾಂಕ ಸೇರಿದಂತೆ ಪೂರ್ವಜರ ಮಾಹಿತಿ ಪಡೆಯಲಿದೆ.

     ಒಂದು ವೇಳೆ ಸೂಕ್ತ ಮಾಹಿತಿ ನೀಡದ ವ್ಯಕ್ತಿಯ ಮಾಹಿತಿಯು ಅನುಮಾನಸ್ಪದಿಂದ ಕೂಡಿದೆ ಎಂಬ ಮಾಹಿತಿಯನ್ನು ಗಣತಿದಾರರು ಸರ್ಕಾರಕ್ಕೆ ನೀಡಲಿದ್ದಾರೆ. ಸರ್ಕಾರ ಕೇಳುವ ಮಾಹಿತಿ ಮತ್ತು ದಾಖಲೆಯನ್ನು ದೇಶದ ಶೇ.25 ರಷ್ಟು ಜನರು ಸಹ ಕೊಡಲು ಸಾಧ್ಯವಿಲ್ಲ ಎಂದರು.

   ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತರಾತೂರಿಯಲ್ಲಿ ರಾಜ್ಯದಲ್ಲಿ ಎನ್‍ಪಿಆರ್ ಜಾರಿ ಗೊಳಿಸದೆ, ಜನಾಭಿಪ್ರಾಯ ಸಂಗ್ರಹಿಸಬೇಕು. ಹಿಂದೆ ನಡೆಯುತ್ತಿದ್ದಂತೆ ಸಾಮಾನ್ಯ ಜನಗಣತಿ ನಡೆಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕ್ಫ್ ಬೋರ್ಡ್‍ನ ಮೊಹಮ್ಮದ್ ಸಿರಾಜ್, ಪಾಲಿಕೆ ಸೈಯದ್ ಚಾರ್ಲಿ, ಯು.ಎಂ.ಮನ್ಸೂರು ಅಲಿ, ಇಸ್ಮಾಯಿಲ್ ಪೈಲ್ವಾನ್, ಶೇಕ್ ದಾದಾಪೀರ್, ದಾದಾಪೀರ್, ಖಾದರ್‍ಭಾಷಾ, ಸುಲೇಮಾನ್, ಶೌಕತ್ ಅಲಿ, ಅಕ್ತರ್ ಮುನ್ನಾ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap