ಬೆಂಗಳೂರು
ಅಂಗಡಿಗಳು, ಬ್ಯಾಂಕ್‍ಗಳು, ಕಚೇರಿಗಳ ಮುಂಭಾಗ ಕೀ ಬಿಟ್ಟು ಹೋಗುವ ಸ್ಕೂಟರ್‍ಗಳನ್ನು ಕಳವು ಮಾಡಿ ಪೆಟ್ರೋಲ್ ಮುಗಿಯುವವರೆಗೆ ಓಡಾಡಿಸಿ ನಂತರ ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಿದ್ದ ಐನಾತಿ ಕಳ್ಳನನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರು ಜಿಲ್ಲೆಯ ಬನ್ನೂರಿನ ಸುರೇಶ್ ಅಲಿಯಾಸ್ ಸೂರಿ(45)ಬಂಧಿತ ಆರೋಪಿಯಾಗಿದ್ದಾನೆ,ಬಂಧಿತನಿಂದ 3ಲಕ್ಷ 56 ಸಾವಿರ ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬನ್ನೂರಿನಿಂದ ಬಂದು ಮೆಜೆಸ್ಟಿಕ್ ಬಸ್ ನಿಲ್ದಾಣ ಇನ್ನಿತರ ಕಡೆಗಳಲ್ಲಿ ಮಲಗುತ್ತಿದ್ದ ಸೂರಿ ಅಂಗಡಿಗಳು ಕಚೇರಿಗಳ ಮುಂಭಾಗ ಅತುರವಾಗಿ ಸ್ಕೂಟರ್‍ಗಳ ಬೀಗ ಬಿಟ್ಟು ಹೋಗುತ್ತಿದ್ದವರನ್ನು ಗಮನಿಸಿ ಕಳ್ಳತನ ಮಾಡುತ್ತಿದ್ದ ಕಳವು ಮಾಡಿದ ಸ್ಕೂಟರ್‍ನಲ್ಲಿ ಪೆಟ್ರೋಲ್ ಮುಗಿಯುವವರೆಗೆ ಸುತ್ತಾಡಿ ಎಲ್ಲೆಂದರಲ್ಲಿಯೇ ಬಿಟ್ಟು ಹೋಗುತ್ತಿದ್ದ.
ಕಳೆದ ಡಿ.12ರಂದು ಮಹೇಶ್ ಎನ್ನುವರು ಬೆಳಿಗ್ಗೆ 10.40ರ ವೇಳೆ ಮಲ್ಲೇಶ್ವರದ ಸಂಪಿಗೆ ರಸ್ತೆಯ, 2ನೇ ಕ್ರಾಸ್, ಎಸ್.ಬಿ.ಐ ಬ್ಯಾಂಕ್ ಬಳಿ ಹೋಡಾ ಆಕ್ಟೀವಾ ಸ್ಕೂಟರ್‍ನಲ್ಲೇ ಕೀ ಬಿಟ್ಟು ನಿಲ್ಲಿಸಿ ಬ್ಯಾಂಕ್ ಒಳಗೆ ಹೋಗಿ ಮತ್ತೆ ವಾಪಸ್ ಬಂದು ನೋಡುವಷ್ಟರಲ್ಲಿ ಕಳವು ಮಾಡಿ ಪರಾರಿಯಾಗಿದ್ದ ಈ ಸಂಬಂಧ ದಾಖಲಾಗಿದ್ದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಇನ್ಸ್‍ಪೆಕ್ಟರ್ ಕೆ.ಆರ್.ಪ್ರಸಾದ್ ಮತ್ತವರ ತಂಡ ಸಿಸಿ ಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಡಿಸಿಪಿ ಚೇತನ್‍ಸಿಂಗ್ ತಿಳಿಸಿದ್ದಾರೆ.
ಆರೋಪಿಯು ಕಳವು ಮಾಡಿದ ಯಾವ ಸ್ಕೂಟರ್‍ನ್ನು ಮಾರಾಟ ಮಾಡಿರಲಿಲ್ಲ ಕಳವು ಮಾಡಿ ಪೆಟ್ರೋಲ್ ಮುಗಿಯುವವರೆಗೆ ಸುತ್ತಾಡಿಸಿ ಬಿಟ್ಟು ಹೋಗುತ್ತಿದ್ದು ಮೊದಲು ಕೂಲಿ ಕೆಲಸ ಮಾಡಿಕೊಂಡಿದ್ದ ಆತ ಇತ್ತೀಚಿಗೆ ಮಲ್ಲೇಶ್ವರಂ ಬೃಂದಾವನ ಹೊಟೇಲ್‍ನಲ್ಲಿ ಕೆಲಸ ಕೇಳಿದ್ದ ಎಂದು ತಿಳಿದುಬಂದಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








