ಶಿರಾ : ಕೆನಡಾ ಸಂಸತ್ ಸದಸ್ಯರಾಗಿ ಚಂದ್ರ ಆರ್ಯ ಪುನರಾಯ್ಕೆ

ಶಿರಾ:

    ಕೆನಡಾ ದೇಶದ ಸಂಸತ್‍ಗೆ ಭಾರತೀಯ ಮೂಲದ ಕನ್ನಡಿಗ ಅದರಲ್ಲೂ ಶಿರಾ ಭಾಗದ ಚಂದ್ರ ಆರ್ಯ ಅವರು ಮರು ಆಯ್ಕೆಯಾಗುವ ಮೂಲಕ ದೇಶದ ಭೂಪಟದಲ್ಲಲ್ಲಷ್ಟೇ ಅಲ್ಲದೆ ಜಗತ್ತಿನ ಇತಿಹಾದಲ್ಲೊಂದು ದಾಖಲೆ ನಿರ್ಮಿಸಿದ್ದಾರೆ.ನಮ್ಮ ದೇಶವಲ್ಲ, ನಮ್ಮ ರಾಜ್ಯವಲ್ಲ ಎಲ್ಲಿಯೋ ಇರುವ ಕೆಲಡಾ ದೇಶದಲ್ಲಿ ಕನ್ನಡಿಗ ಅದರಲ್ಲೂ ಅತ್ಯಂತ ಬರಪೀಡಿ ಪ್ರದೇಶವೆಂದೇ ಗುರ್ತಿಸಲ್ಪಟ್ಟಿರುವ ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದ ಚಂದ್ರ ಆರ್ಯ ಇದೀಗ ಭಾರತೀಯರ ಹೆಮ್ಮೆಯ ವಿದೇಶದ ಸಂಸತ್ ಸದಸ್ಯರಾಗುವ ಮೂಲಕ ದೇಶಕ್ಕೆ ಹೆಗ್ಗಳಿಯನ್ನುಂಟು ಮಾಡಿದ್ದಾರೆ.

    ಅತ್ಯಂತ ಬಡ ಕುಟುಂಬದ ರೈತಾಪಿ ಕುಟುಂಬದಲ್ಲಿ ಜನಿಸಿದ್ದ ಚಂದ್ರ ಆರ್ಯ ಕೆನಡಾ ದೇಶದಲ್ಲಿ ನೆಲೆಸಿ ಆ ದೇಶದ ಬೌದ್ಧಿಕ ಕ್ಷೇತ್ರದಲ್ಲಿ ಜಾಣ್ಮೆ ಮೆರೆದ ಪರಿಣಾಮ ಅಲ್ಲಿನ ಮತದಾರ ಅವರನ್ನು ಆ ದೇಶದ ಸಂಸತ್ ಸದಸ್ಯರನ್ನಾಗಿ ಎರಡನೇ ಬಾರಿಗೆ ಆಯ್ಕೆ ಮಾಡಿದ್ದಾರೆ. ಕಳೆದ ಸಾಲಿನಲ್ಲಿ ಅದೇ ಕೆಲಡಾ ದೇಶದಲ್ಲಿ ಅವರು ಪ್ರಥಮ ಬಾರಿಗೆ ಸಂಸದರಾದಾಗ ಶಿರಾ ಭಾಗದಲ್ಲಿನ ಅನೇಕ ಶಾಲಾ-ಕಾಲೇಜುಗಳಲ್ಲಿ ಅವರಿಗೆ ಗೌರವಾರ್ಪಣೆ ಮಾಡಲಾಗಿತ್ತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ