ತೀರ್ಥಯಾತ್ರೆ ಮುಂದುವರೆಸಿದ ಸಿಎಂ

ಬೆಂಗಳೂರು

        ದೇವಸ್ಥಾನಗಳಿಗೆ ಭೇಟಿ ಕೊಡುವುದನ್ನು ಮುಂದುವರೆಸಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ವಿಶೇಷ ಹೋಮ ನಡೆಸಿದರು.

       ಕಳೆದ ರಾತ್ರಿಯೇ ಶೃಂಗೇರಿಗೆ ತೆರಳಿದ್ದ ಮುಖ್ಯಮಂತ್ರಿ ಅವರು, ತಾಯಿ ಶಾರದಾಂಬೆಯ ದರ್ಶನ ಪಡೆದರು. ಬಳಿಕ ಪ್ರತ್ಯಂಗಿರ ಹೋಮದ ಸಂಕಲ್ಪ ಮಾಡಿದರು. ಆರೋಗ್ಯ ವೃದ್ಧಿ, ಶತ್ರು ನಾಶದ ಕುರಿತು ಸಂಕಲ್ಪ ಮಾಡಿದರು.

        ಇಂದು ಬೆಳಿಗ್ಗೆ 6.30ರಿಂದಲೇ ಮೃತ್ಯಂಜಯ ಹೋಮ, ಪ್ರತ್ಯಂಗಿರಾ ಹೋಮ ನಡೆಯಿತು.ದೇವಾಲಯ ಒಳಭಾಗದಲ್ಲಿರುವ ಪ್ರದೋಷ ಆವರಣದಲ್ಲಿ ಹೋಮ ಜರುಗಿತು.ಹೋಮದ ಪೂರ್ಣಾಹುತಿ ವೇಳೆಗೆ ಕುಮಾರಸ್ವಾಮಿ ಅವರ ಜತೆ ಸಚಿವ ಹೆಚ್.ಡಿ.ರೇವಣ್ಣ ಸಹ ಪಾಲ್ಗೊಂಡಿದ್ದರು.ಆದರೆ ಶೃಂಗೇರಿ ಮಠದ ಆವರಣದಲ್ಲಿರುವ ಶಕ್ತಿ ಗಣಪತಿ ಪ್ರದೋಷ ಕಾರ್ಯಾಲಯದ ಬಾಗಿಲು ಮುಚ್ಚಿ ಹೋಮ ಮುಂದು ವರಿಸಲಾಯಿತು. ಚಿತ್ರೀಕರಣ ಮಾಡಬಾರದು ಎಂದು ಆಡಳಿತ ಮಂಡಳಿ ಮಾಧ್ಯಮದವರಿಗೆ ಪ್ರವೇಶ ನಿಷೇಧ ಮಾಡಿತ್ತು.ಶತ್ರು ನಾಶ ಹಾಗೂ ಆರೋಗ್ಯ ವೃದ್ಧಿಗಾಗಿ ಹೋಮ ನಡೆಸಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ