ಜನರ ಸಂಕಷ್ಟಕ್ಕೆ ಸ್ಪಂದಿಸದ ಜಿಲ್ಲಾಡಳಿತ

ದಾವಣಗೆರೆ:

       ಕೊರೊನಾ ಸೋಂಕಿಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ಘೋಷಣೆಯಾಗಿರುವ ಕಂಟೈನ್‍ಮೆಂಟ್‍ ಝೋನ್‍ನಲ್ಲಿನ ಜನರು ಸಂಕಷ್ಟಕ್ಕೆ ಜಿಲ್ಲಾಡಳಿತ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್‍ ಆರೋಪಿಸಿದ್ದಾರೆ.

     ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಮಾರಿ ಕೊರೊನಾ ಪತ್ತೆ ಆಗಿರುವ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಜಾಲಿ ನಗರ, ಬಾಷಾ ನಗರ ಸೇರಿದಂತೆ ಮತ್ತಿತರೆ ಪ್ರದಶಗಳನ್ನು ಕಂಟೈನ್‍ಮೆಂಟ್‍ ಝೋನ್ ವ್ಯಾಪ್ತಿಗೆ ಸೇರಿಸಲಾಗಿದೆ .ಹೀಗಾಗಿ ಇಲ್ಲಿಯ ಜನರಿಗೆ ಜೀವನಾವಶ್ಯ ವಸ್ತುಗಳ ಸಿಗುತ್ತಿಲ್ಲ. ಆದ್ದರಿಂದ ಅಲ್ಲಿನ ಜನರು ಜೀವನ ನಡೆಸಲು ಸಹ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

     ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಪಾಲಿಕೆ ಸದಸ್ಯರನ್ನು ಅಲ್ಲಿನ ಜನರು ನೋಡಿದರೆ ನಮಗೆ ವಿಷ ಕೊಡಿ ಎಂದು ಕೈ ಸನ್ನೆ ಮಾಡುತ್ತಾರೆ.ಇದು ನೋವಿನ ಸಂಗತಿ.ಪಾಲಿಕೆ ಸದಸ್ಯರೂ ಏನು ಮಾಡಬಹುದು.ಕಿಟ್‍ ಕೊಟ್ಟಿದ್ದೇವೆ. ಅದು ಬಿಟ್ಟು ಆ ಭಾಗಗಳಲ್ಲಿ ರಸಾಯನಿಕಔಷಧಿ ಸಿಂಪರಣೆ ಮಾಡಬಹುದಷ್ಟೆ.

      ಇದಕ್ಕೆಲ್ಲಾ ಪರಿಹಾರ ಜಿಲ್ಲಾಡಳಿತ ಜನರ ನೆರವಿಗೆ ಬರಬೇಕುಎಂದರು.ಕಂಟೈನ್‍ಮೆಂಟ್ ಪ್ರದೇಶಗಳನ್ನಾಗಿ ಗುರುತಿಸಿರುವ ಹಲವು ಪ್ರದೇಶಗಳಲ್ಲಿ ಬಹುತೇಕ ಜನರು ಕೂಲಿ, ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.ಅವರ ಬಳಿ ಹಣಇಲ್ಲದೆ ಜೀವನ ನಿರ್ವಹಣೆ ಅಸಾಧ್ಯವಾಗಿದೆ .ಈಗಾಗಲೇ ಮಹಾನಗರ ಪಾಲಿಕೆ, ಶಾಸಕರು, ಪಾಲಿಕೆ ಸದಸ್ಯರು ವೈಯಕ್ತಿಕವಾಗಿ ಕಿಟ್‍ಗಳನ್ನು ವಿತರಣೆ ಮಾಡಿದ್ದಾರೆ.ಅದರೆ ಅವುಗಳು ತಿಂಗಳಗಟ್ಟಲೇ ಆಗುವುದಿಲ್ಲ. ಹೀಗಾಗಿ, ಅಲ್ಲಿ ದಿನಸಿ, ಹಾಲು, ತರಕಾರಿ ವಿತರಣೆ ಮಾಡಲು ಜಿಲ್ಲಾಡಳಿತ ಮುಂದಾಗಬೇಕುಎಂದು ಆಗ್ರಹಿಸಿದರು.

      ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತದ ಬಳಿ 20 ಕೋಟಿಯಷ್ಟು ಅನುದಾನ ಇದ್ದು, ಅದನ್ನು ಬಳಕೆ ಮಾಡಿಕೊಳ್ಳಬೇಕು .ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಜನರಿಗೆಅಗತ್ಯ ವಸ್ತುಗಳನ್ನು ಪೂರೈಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

     ದಿನದಿಂದ ದಿನಕ್ಕೆ ದಾವಣಗೆರೆಯಲ್ಲಿಕೊರೊನಾ ಸೋಂಕಿಗೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ. ದಾವಣಗೆರೆಯಲ್ಲಿ ಕೊರೊನಾ ಕಾಣಿಸಿಕೊಂಡ ಆರಂಭದಲ್ಲಿಯೇ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ನಗರದಲ್ಲಿ ನಲೆಸಿರುವ ಎಲ್ಲಾ ಜನರ ಗಂಟಲು ದ್ರವ ಸಂಗ್ರಹಿಸಿ ಕೊರೊನಾ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ದರು.

      ಆದರೆ, ಜಿಲ್ಲಾಡಳಿತ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲು ಜಿಲ್ಲಾಡಳಿತದ ವೈಫಲ್ಯವೇ ಕಾರಣವಾಗಿದೆ ಎಂದು ಆರೋಪಿಸಿದರು.ಕೊರೊನಾ ಸೋಂಕನ್ನು ಹತೋಟಿಗೆತರುವಉದ್ದೇಶದಿಂದ ಜಿಲ್ಲಾಡಳಿತ ತಕ್ಷಣವೇಒಂದು ಬಾರಿಎಲ್ಲರನ್ನುರ್ಯಾಂಡಮ್ ಆಗಿ ಕೊರೊನಾ ಪರೀಕ್ಷೆಗೆಒಳಪಡಿಸಲು ಜಿಲ್ಲಾಡಳಿತ ಮುಂದಾಗಬೇಕುಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದಚಮನ್ ಸಾಬ್, ಗಡಿಗುಡಾಳ್ ಮಂಜುನಾಥ,ವಿನಾಯಕ ಪೈಲ್ವಾನ್ ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap