ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಟ್ಟ ಚುನಾವಣಾ ಆಯೋಗ ….!!!

ಬೆಂಗಳೂರು

        ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ರಾಜ್ಯ ಘಟಕಗಳು ಆರಂಭಿಸಿರುವ ಫೇಸ್‍ಬುಕ್ ಹಾಗೂ ಟ್ವಿಟರ್ ಸೇರಿ ಖಾಸಗಿ ಹಾಗೂ ಪ್ರಾಯೋಜಿತ 75ಕ್ಕೂ ಅಧಿಕ ಸಾಮಾಜಿಕ ಜಾಲತಾಣ ಖಾತೆಗಳ ಮೇಲೆ ಅಲ್ಲದೇ ಬ್ಯಾಂಕ್‍ಗಳಲ್ಲಿ ನಡೆಸುವ ಹೆಚ್ಚಿನ ಹಣಕಾಸು ವ್ಯವಹಾರದ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟಿದೆ.

       ಇಲ್ಲಿಯವರೆಗೆ ಫೇಸ್‍ಬುಕ್ ಹಾಗೂ ಟ್ವಿಟರ್ ಸೇರಿ ಖಾಸಗಿ ಹಾಗೂ ಪ್ರಾಯೋಜಿತ 75ಕ್ಕೂ ಅಧಿಕ ಸಾಮಾಜಿಕ ಜಾಲತಾಣ ಖಾತೆಗಳ 100ಕ್ಕೂ ಹೆಚ್ಚು ಸ್ಟೇಟಸ್‍ಗಳನ್ನು ತನಿಖೆಗೆ ಒಳಪಡಿಸಿದೆ.ಪ್ರಮುಖ ರಾಜಕೀಯ ಪಕ್ಷಗಳ ಅಧಿಕೃತ ಫೇಸ್‍ಬುಕ್-ಟ್ವಿಟರ್ ಖಾತೆಗಳು ಹಾಗೂ ಕೆಲ ಪ್ರಾಯೋಜಿತ ಖಾತೆಗಳಲ್ಲದೆ ನರೇಂದ್ರ ಮೋದಿ, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ,ಸಿದ್ದರಾಮಯ್ಯ ಅಭಿಮಾನಿ ಬಳಗದ ಹೆಸರಿನಲ್ಲಿ ತೆರೆದಿರುವ ಖಾತೆಗಳಲ್ಲಿನ ಸ್ಟೇಟಸ್‍ಗಳ ಡಿಜಿಟಲ್ ದಾಖಲೀಕರಣ ಆರಂಭಿಸಿದೆ.

     ಇದಕ್ಕಾಗಿ ರಾಜ್ಯ ವಾರ್ತಾ ಕೇಂದ್ರದಲ್ಲಿ ವಿಚಕ್ಷಣಾ ಘಟಕ ಆರಂಭಿಸಲಾಗಿದ್ದು, ಸತತ 18 ತಾಸು ಫೇಸ್‍ಬುಕ್-ಟ್ವಿಟರ್‍ಗಳ ಚಲನವಲನಗಳನ್ನು ದಾಖಲಿಸುತ್ತಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

ಖಾತೆಗಳ ಮೇಲೆ ಕಣ್ಣು

     ಈ ನಡುವೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬ್ಯಾಂಕ್‍ಗಳಲ್ಲಿ ನಡೆಸುವ ಹೆಚ್ಚಿನ ಹಣಕಾಸು ವ್ಯವಹಾರದ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಡಿದೆ.ಚುನಾವಣಾ ಸಂದರ್ಭದಲ್ಲಿ ಬ್ಯಾಂಕ್ ವ್ಯವಹಾರ ಸೂಕ್ಷ್ಮವಾಗಿಸಲು ಆಯೋಗ ನೋಟಿಸ್ ನೀಡಿದ್ದು ಬ್ಯಾಂಕ್ ಖಾತೆಯಿಂದ 1 ಲಕ್ಷಕ್ಕಿಂತ ಹೆಚ್ಚು ಹಣವನ್ನ ವಿತ್ ಡ್ರಾ ಮಾಡುವ ಖಾತೆದಾರರ ಮಾಹಿತಿಯನ್ನ ಚುನಾವಣಾ ಸಿಬ್ಬಂದಿ ಪಡೆಯಲಿದ್ದಾರೆ. ಹಾಗೇ 10 ಲಕ್ಷಕ್ಕಿಂತ ಹೆಚ್ಚು ಹಣವನ್ನ ವಾಪಸ್ ಪಡೆದರೆ ತೆರಿಗೆ ಇಲಾಖೆಗೆ ನೇರವಾಗಿ ಮಾಹಿತಿ ಹೋಗುತ್ತದೆ.

     ಈ ಪ್ರಕಾರ ಮುಂದಿನ ಒಂದುವರೆ ತಿಂಗಳು ಖಾತೆಗಳ ಮೇಲೆ ನಿಗಾ ಇಡಲಾಗುತ್ತದೆ. ಇನ್ನು ಅಭ್ಯರ್ಥಿಗಳ ದೈನಂದಿನ ಖರ್ಚನ್ನ ನೇರವಾಗಿ ಚುನಾವಣಾ ಕ್ಯಾಮಾರಾ ಸಿಬ್ಬಂದಿ ಸೆರೆ ಹಿಡಿದ ದೃಶ್ಯಗಳ ಆಧಾರದಲ್ಲಿ ಆಡಿಟ್ ಮಾಡಲಾಗುತ್ತದೆ. ನಿಗದಿಗಿಂತ ಹೆಚ್ಚು ಖರ್ಚು ಮಾಡಿದರೆ 24 ಗಂಟೆಯೊಳಗೆ ಕಠಿಣ ಕ್ರಮ ವಹಿಸಲಾಗುತ್ತದೆ.

     ಒಂದು ವೇಳೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಡ್ರಾ ಮಾಡಿದರೆ ಆದಾಯ ಇಲಾಖೆ ಖಾತೆದಾರರನ್ನು ಕರೆಸಿ ವಿಚಾರಣೆ ಮಾಡುತ್ತಾರೆ. ಯಾವ ಖರ್ಚಿಗೆ ಹಣ ಡ್ರಾ ಮಾಡಿದ್ದೀರ, ಯಾವುದಕ್ಕೆ ಎಷ್ಟೆಷ್ಟು ಖರ್ಚು ಮಾಡಿದ್ದೀರಾ ಎಂದು ಅವರ ಬಳಿ ಸಂಪೂರ್ಣ ಮಾಹಿತಿಯನ್ನು ಪಡೆಯಲಾಗುತ್ತದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link