ಮಾವಿಗೆ ಸರಿಯಾದ ಬೆಲೆ ಸಿಗದೆ ಕಂಗೆಟ್ಟ ರೈತರು ಹಾಗು ವರ್ತಕರು

ಚೇಳೂರು

ವಿಶೇಷ ವರದಿ : ಸಿ.ಟಿ.ಮೋಹನ್‍ರಾವ್

      ಈ ವರ್ಷ ಮಾವಿನ ಬೆಳೆಯು ಇಲ್ಲ ಬಂದತಂಹ ಬೆಳೆಗೆ ಸರಿಯಾದ ಬೆಲೆಯೂ ಇಲ್ಲದೆ ಕೆಂಗ್ಗೆಟ್ಟಿರುವ ಮಾವು ಬೆಳೆಗಾರರು ಹಾಗೂ ವರ್ತಕರು.ರಾಜ್ಯದಲ್ಲಿಯೇ ಮಾವು ಮತ್ತು ಹಲಸಿಗೆ ಹೆಸರುವಾಸಿಯಾದ ಮಾರುಕಟ್ಟೆಗುಬ್ಬಿತಾಲ್ಲೂಕಿನಚೇಳೂರು. ಕಳೆದ ವರ್ಷಕ್ಕಿಂತ ಈ ವರ್ಷಕಡಿಮೆ ಹಣ್ಣುಗಳು ಈ ಮಾರುಕಟ್ಟೆಗೆ ಬರುತ್ತಿವೆ.

      ಕಳೆದ ವರ್ಷ ಉತ್ತಮ ಮಳೆಯಾಗಿ ಉತ್ತವಾದ ಬೆಳೆ ಬಂದಿತು ಆದರೆ ಈ ಬಾರಿ ಮಾವಿನ ಗಿಡದಲ್ಲಿ ಕಾಯಿ ಬಂದಾಗ ಸರಿಯಾದ ಸಮಯಕ್ಕೆ ಮಳೆಯಾಗದೆ ಫಲವತ್ತಾಗಿ ಬರಬೇಕಾದ ಮಾವಿನ ಕಾಯಿಗಳು ಇಳುವರಿ ಕಮ್ಮಿಯಾಗಿ ಸಣ್ಣಗಾತ್ರದಲ್ಲಿಯೇ ನಿಂತುಕೊಂಡಿವೆ . ಕೆಲವು ಮರಗಳಲ್ಲಿ ಗಾಳಿಗೂ ಸಹ ಸಣ್ಣಗಾತ್ರದಲಿಯೇ ಇದ್ದಾಗಲೇ ಮಾವಿನಕಾಯಿಗಳು ಬಿದ್ದಿವೆ ಜೊತೆಗೆ ಇರುವ ಫಸಲು ಸಹ ಉತ್ತಮವಾಗಿ ಬಂದಿಲ್ಲ .ಅದು ಸಹ100 ಕ್ಕೆ 25 ಭಾಗದಷ್ಟು ಫಸಲು ಮಾತ್ರ ಬಂದಿದೆ ಎಂದು ರೈತರು ಹಾಗೂ ವರ್ತಕರು ಹೇಳುತ್ತಿದ್ದಾರೆ.

     ಬಂದಂತಹ ಕಾಯಿಗಳನ್ನು ಸಹ ತೆಗೆದುಕೊಳ್ಳುಲು ಮಂಡಿ ವರ್ತಕರು ಯೋಚನೆ ಮಾಡುತ್ತಿದ್ದಾರೆ.ಇದಕ್ಕೆ ಸೂಕ್ತ ಬೆಲೆ ನಾವು ಮಾರಟ ಮಾಡುವ ಸ್ಥಳದಲ್ಲಿ ಸಿಗುತ್ತದೆ ಇಲ್ಲವೋ ಎಂದು . ಉತ್ತಮವಾದ ಬೆಲೆ ಇಲ್ಲದಿದ್ದರೆ ರೈತರಷ್ಟೆ ನಮ್ಮಗೂ ಸಹ ನಷ್ಟವಾಗಬಹುದು ಎಂದು ಯೋಚನೆಯನ್ನು ಮಾಡುವ ಪರಿಸ್ಥಿತಿ ಹೆದುರಾಗಿದೆ ವರ್ತಕರಲ್ಲಿ.

        ಕೆಳೆದ ವರ್ಷ ಈ ವೇಳೆಯಲ್ಲಿ ಪ್ರತಿದಿನ ಈ ಮಾರುಕಟ್ಟೆಯಿಂದ 30 ಕ್ಕೂ ಹೆಚ್ಚು ಲೋಡ್ ಮಾವಿನಕಾಯಿ ಬೆಂಗಳೂರು . ದಾವಣಗೆರೆ .ಬೀಜಾಪುರ.ಬಾಗಲಕೋಟೆ.ಪೂನಾ.ದೆಹಲಿ.ಮಹಾರಾಷ್ಟ್ರದಲಿರುವ ನಗರ ಪ್ರದೇಶಗಳಿಗೆ ಹಾಗೂ ಅನೇಕ ದೂರಊರುಗಳಿಗೆ ರಾಜ್ಯಗಳಿಗೆ ಇಲ್ಲಿಂದ ಹೋಗುತ್ತಿತ್ತು.ಆದರೆ ಈ ವರ್ಷ ದಿನಕ್ಕೆ 5ರಿಂದ 10 ಲೋಡ್ ಹಣ್ಣು ಹೋಗುವುದೆ ಕಷ್ಟವಾಗಿದೆ ಎಂದು ಇಲ್ಲಿನ ವರ್ತಕರು ಹೇಳುತ್ತಿದ್ದಾರೆ.

      ಈ ವರ್ಷ ತೋತಪುರಿ ಕೆಜಿಗೆ 8-12 .ಮಲಗೊಬಾ20-30 , ರಸಪುರಿ 15-20 , ಸೆಂಧೂರ 10-15 , ಬೆನೀಷ್ 15-20, ಬಾದಮಿ 20-30 ರೂಗಳು. ಹಾಗೂ ಇತರೆ ಜಾತಿಯ ಹಣ್ಣುಗಳಿಗೂ ಸಹ ಉತ್ತಮದ ಬೆಲೆಯಿಲ್ಲ.ಇಂತಹ ಬೆಲೆಯಲ್ಲಿ ಮಾವಿನ ಕಾಯಿ ಕೀಳುವ ಕೂಲಿಯೂ ಸಿಗುವುದು ಕಷ್ಟವಾಗಿದೆ.ಜೊತೆಗೆ ಸರಿಯಾದ ಬೆಳೆಯಿಲ್ಲದೆ ರೈತ ಕಂಗ್ಗೆಟ್ಟು ಮಾವಿನ ಗಿಡವನೇ ತೆಗೆಯುವಷ್ಟು ಯೋಚನೆ ಮಾಡುತ್ತಿರುವ ಕೇಲವು ರೈತರು . ಇತಂಹ ಪರಿಸ್ಥಿತಿಯಲ್ಲಿ ಮಾವು ಅಭಿವೃದ್ದಿ ಮಂಡಳಿ ಸಹಕಾರ ರೈತರಿಗೆ ಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link