ಪಹಣಿ ವಿಳಂಬ : ರೈತರು ಸಹಕರಿಸಲು ಮನವಿ

ಗುಬ್ಬಿ

     ಪೈಲೆಟ್ ತಾಲ್ಲೂಕು ಎನಿಸಿದ ಗುಬ್ಬಿ ತಾಲ್ಲೂಕಿಗೆ ಹೊಸದಾಗಿ ನವೀಕರಿಸಿದ ‘ನಮ್ಮ ಭೂಮಿ’ ಸಾಫ್ಟ್‍ವೇರ್ ಅಳವಡಿಸಿದ್ದು, ಕೆಲ ತಾಂತ್ರಿಕ ದೋಷ ಎದುರಾಗುತ್ತಿರುವ ಕಾರಣ ಸಾರ್ವಜನಿಕರು ಸಹಕರಿಸಬೇಕೆಂದು ತಹಸೀಲ್ದಾರ್ ಡಾ.ಪ್ರದೀಪ್‍ಕುಮಾರ್ ಹಿರೇಮಠ ಮನವಿ ಮಾಡಿದರು.

     ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನ ಎಲ್ಲಾ ನಾಡ ಕಚೇರಿಯಲ್ಲಿ ಪಹಣಿ ವಿತರಣೆ ಸ್ಥಗಿತಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪಹಣಿಗಾಗಿ ತಾಲ್ಲೂಕು ಕಚೇರಿಯಲ್ಲಿ ಸರದಿ ಸಾಲು ಹೆಚ್ಚಾಗುತ್ತಿದೆ. ನಮ್ಮ ತಾಲ್ಲೂಕಿಗೆ ಮೊದಲು ಹೊಸ ಸಾಫ್ಟ್‍ವೇರ್ ಅಳವಡಿಸಿರುವ ಕಾರಣ ಎಲ್ಲವೂ ಸರಿಪಡಿಸಿಕೊಳ್ಳಲು ಸಮಯ ಅಗತ್ಯವಿದೆ. ಈ ಮಧ್ಯೆ ತಾಂತ್ರಿಕ ಸಮಸ್ಯೆ ಜತೆಗೆ ಕೊರೋನಾ ಜಾಗೃತಿ, ಸಾಮಾಜಿಕ ಅಂತರ ಈ ಬಗ್ಗೆ ಮನಗಂಡು ರೈತರು ಸಹಕರಿಸಬೇಕಿದೆ ಎಂದು ಕೋರಿಕೊಂಡರು.

     ಪಿಂಚಣಿ ಸಮಸ್ಯೆಗೆ ಬಹುತೇಕ ಪರಿಹಾರ ಹುಡುಕಲಾಗಿದೆ. 1200 ಅರ್ಜಿಗಳ ವಿಲೇವಾರಿ ಮಾಡಿದಲ್ಲಿ ಸಂಪೂರ್ಣಗೊಳ್ಳಲಿದೆ. ಈ ಜತೆಗೆ ವಿಕಲ ಚೇತನರ ಪಿಂಚಣಿದಾರರ ಸಮಸ್ಯೆಗೂ ಭಾಗಶಃ ಪರಿಹಾರ ಕಂಡು ಹಿಡಿಯಲಾಗಿದೆ. ಎಲ್ಲಾ ನಾಡಕಚೇರಿಯಲ್ಲೂ ಹೊಸದಾಗಿ ಪಿಂಚಣಿ ಅರ್ಜಿದಾರರು ಅರ್ಜಿ ಸಲ್ಲಿಸಬಹುದಾಗಿದೆ. ಈ ಕಾರ್ಯವನ್ನು ನಿರಂತರ ನಡೆಸಲು ಸೂಚಿಸಲಾಗಿದೆ ಎಂದ ಅವರು, ಪಟ್ಟಣದಲ್ಲಿ ಸಮಸ್ಯೆಗಳ ದೂರು ಬಂದಿದ್ದು, ಸೇತುವೆ ದುರಸ್ಥಿ, ವಿದ್ಯುತ್ ಸಮಸ್ಯೆ ಹಾಗೂ ಜಲ ಶುದ್ದೀಕರಣ ಘಟಕ ಕಾರ್ಯವನ್ನು ಶೀಘ್ರದಲ್ಲಿ ನಡೆಸಲಾಗುವುದು ಎಂದರು.

     ಹೊರರಾಜ್ಯದಿಂದ ಬಂದವರಿಗೆ ಕ್ವಾರಂಟೈನ್ ನಡೆಸಲು ಶಾಲಾ ಕಾಲೇಜು, ವಸತಿ ಶಾಲೆಗಳನ್ನು ಈ ಮೊದಲು ಬಳಸಲಾಗಿತ್ತು. ಆದರೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಶಾಲೆಗಳನ್ನು ಹೊರತುಪಡಿಸಿ ಸಮುದಾಯಭವನ, ಕಲ್ಯಾಣ ಮಂಟಪಗಳ ಬಳಕೆಗೆ  ಕ್ರಮ ವಹಿಸಲಾಗಿದೆ. ಈ ಬಗ್ಗೆ ಸಲ್ಲದ ಅಪಪ್ರಚಾರ ಮಾಡುವ ಅಗತ್ಯವಿಲ್ಲ. ಮಕ್ಕಳ ಪರೀಕ್ಷೆ ಹಿನ್ನೆಲೆಯಲ್ಲಿ ಈ ಕ್ರಮ ವಹಿಸಲಾಗಿದ್ದು, ಚೇಳೂರಿನಲ್ಲಿ 6 ಮಂದಿ ಹಾಗೂ ಪಟ್ಟಣದಲ್ಲಿ 4 ಮಂದಿ ಹೊರ ರಾಜ್ಯದವರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ರೆಡ್ ಝೋನ್‍ಗಳಾದ ಆರು ರಾಜ್ಯಗಳಿಂದ ಬಂದವರಿಗೆ ಕಡ್ಡಾಯ ಹೋಂ ಕ್ವಾರಂಟೈನ್ ಮಾಡಲಾಗುವುದು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link