ಹೊಸದುರ್ಗ:
ಕನ್ನಡ ನಾಡಿಗೆ 7ನೇ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಖ್ಯಾತರಂಗಕರ್ಮಿ, ನಟ, ಸಾಹಿತಿಗಿರೀಶ್‍ಕಾರ್ನಾಡ್‍ಅವರ ನಿಧನ ನಮ್ಮನ್ನ ದಿಗ್ಬ್ರಾಂತರನ್ನಾಗಿಸಿದೆ. ಇವರ ಅಗಲಿಕೆ ದೇಶದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆಎಂದು ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿತೀವ್ರ ಸಂತಾಪ ಸೂಚಿಸಿದ್ದಾರೆ.
ತುಘಲಕ್, ನಾಗಮಂಡಲ ಸೇರಿ ಅನೇಕ ಅಪರೂಪದ ಕೃತಿಗಳನ್ನು ರಚಿಸಿ ದೇಶ ವಿದೇಶದಲ್ಲಿಖ್ಯಾತಿ ಗಳಿಸಿದ್ದ ಕಾನಾರ್ಡ್‍ಅವರು, ಮಹಾರಾಷ್ಟ್ರದಲ್ಲಿ ಜನಿಸಿದ್ದರೂ ಕರ್ಮಭೂಮಿಯನ್ನಾಗಿಸಿಕೊಂಡಿದ್ದು ಕರ್ನಾಟಕವನ್ನ. ಇವರುಕನ್ನಡ ನಾಡಿನವರುಎಂಬುದು ಹೆಮ್ಮೆಯ ಸಂಗತಿ.ಬಹುಮುಖಿ ಪ್ರತಿಭೆಗಳಾಗಿದ್ದ ಕಾರ್ನಾಡರು ಮಾನವೀಯ ಗುಣವುಳ್ಳ ದೈತ್ಯ ವ್ಯಕ್ತಿ.ತಾವು ನಂಬಿದ ಸಿದ್ದಾಂತ ಪಾಲಿಸುವ ಜತೆಗೆ ಮತ್ತೊಬ್ಬರ ನಂಬಿಕೆ, ಸಿದ್ದಾಂತಗಳನ್ನು ಗೌರವಿಸುವ ದೊಡ್ಡಗುಣವನ್ನು ಹೊಂದಿದ್ದರು.ತಮಗೆಅನಿರೀಕ್ಷಿತವಾಗಿ ಎದುರುಗೊಳ್ಳುತ್ತಿದ್ದ ಟೀಕೆ, ವಿರೋಧಗಳನ್ನು ಬಹಳ ಗೌರವದಿಂದಲೇ ಸ್ವೀಕರಿಸುತ್ತಿದ್ದ ಕಾರ್ನಾಡ್‍ರುಎಂದೂ ಮತ್ತೋಬ್ಬರ ಭಾವನೆಗಳಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತಿದ್ದರು.
ಇವರನ್ನು ಬಹಳ ಹತ್ತಿರದಿಂದಕಂಡಿರುವ ನನಗೆ ಇವರಲಿದ್ದ ಭಾಷಾ ಪ್ರೌಡಿಮೆ ನನಗೆ ಅಚ್ಚರಿಯನ್ನುಂಟು ಮಾಡುತ್ತಿತ್ತು .ಸಾಹಿತ್ಯಕ್ಷೇತ್ರಕ್ಕೆಕಾರ್ನಾಡ್‍ರು ಸಲ್ಲಿಸಿದ ಸೇವೆ ಗುರುತಿಸಿ ನೋಬೆಲ್ ಪಾರಿತೋಷಕದೊರೆಯುತ್ತದೆ ಎಂಬ ಆಸೆ ನಾಡಿನಜನರ ಮನದಲ್ಲಿ ಮನೆ ಮಾಡಿತ್ತು.ಆ ಪ್ರಶಸ್ತಿಗೆ ಕಾನಾರ್ಡ್‍ರುಆರ್ಹರಾಗಿದ್ದರು.ಮೃತರಆತ್ಮಕ್ಕೆ ಶಾಂತಿದೊರೆಯಲಿ, ಕುಟುಂಬಕ್ಕೆ ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ದೇವರು ನೀಡಲಿ ಎಂದು ಶ್ರೀಗಳು ತಿಳಿಸಿದ್ದಾರೆ.