ದಾವಣಗೆರೆ:
ಮಹಾನಗರ ಪಾಲಿಕೆ ಚುನಾವಣೆಗೆ ಸಂಬAಧಿಸಿದAತೆ ಚುನಾವಣೆಗೆ ಸ್ಪರ್ಧಿಸಿದವರು ತಾವು ಚುನಾವಣೆಗೆ ಖರ್ಚು ಮಾಡಿರುವ ವೆಚ್ಚವನ್ನು ಪ್ರತಿನಿತ್ಯ ನಿರ್ವಹಿಸಬೇಕು. ಹಾಗೂ ಯಾವುದೇ ರೀತಿಯ ಚುನಾವಣಾ ಅಕ್ರಮಗಳಿಗೆ ಒಳಗಾಗದೇ, ನಿರ್ಭೀತ ಮತ್ತು ಶಾಂತಿಯುತ ಮತದಾನಕ್ಕೆ ಎಲ್ಲರೂ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಅಭ್ಯರ್ಥಿಗಳಿಗೆ ಸಲಹೆ ನೀಡಿದರು.
ನಗರದ ಜಿಲ್ಲಾಡಳಿತ ಭವನದ ತುಂಗ ಭದ್ರ ಸಭಾಂಗಣದಲ್ಲಿ ಬುಧವಾರ ಮಹಾನಗರಪಾಲಿಕೆ ಚುನಾವಣೆ ವೆಚ್ಚ ನಿರ್ವಹಣೆ ಕುರಿತು ಮಾಹಿತಿ ನೀಡಲು ವಿವಿಧ ಪಕ್ಷಗಳು ಮತ್ತು ಸ್ಪರ್ಧಾಳುಗಳಿಗೆ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನ.7, 9 ಮತ್ತು 11 ರಂದು ಎಲ್ಲ ಅಭ್ಯರ್ಥಿಗಳು ತಮ್ಮ ತಮ್ಮ ಚುನಾವಣಾ ವೆಚ್ಚದ ವಿವರವನ್ನು ತಮಗೆ ಸಂಬAಧಿಸಿದ ಚುನಾವಣಾಧಿಕಾರಿಗಳಿಗೆ ಒಪ್ಪಿಸಬೇಕು.
ಒಂದು ಪಕ್ಷ ಯಾವುದೇ ಅಭ್ಯರ್ಥಿ ಈ ಚುನಾವಣೆ ಸಮಯದಲ್ಲಿ ಲೆಕ್ಕ ಸಲ್ಲಿಸದೇ ಹೋದಲ್ಲಿ ಅವರನ್ನು ನಿಯಮಾನುಸಾರ ಮುಂದಿನ ಚುನಾವಣೆಗೆ ಅನರ್ಹಗೊಳಿಸಬಹುದು. ಹಾಗೂ ಸಂಬಂಧಿಸಿದ ಚುನಾವಣಾಧಿಕಾರಿಗಳು ನಿಗದಿತ 30 ದಿನಗಳ ನಂತರವೂ ಅಭ್ಯರ್ಥಿಗಳಿಂದ ಲೆಕ್ಕದ ಮಾಹಿತಿ ಪಡೆದು ವರದಿ ನೀಡದಿದ್ದಲ್ಲಿ ಚುನಾವಣಾಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬಹುದು. ಆದ್ದರಿಂದ ಚುನಾವಣಾಧಿಕಾರಿಗಳು ತಮ್ಮ ನೋಡಲ್ ಅಧಿಕಾರಿಗಳ ಸಹಕಾರದೊಂದಿಗೆ ಅಭ್ಯರ್ಥಿಗಳ ನಿಯಮಿತ ಲೆಕ್ಕ ನಿರ್ವಹಿಸಬೇಕು ಎಂದರು.
ಅಭ್ಯರ್ಥಿ ಮತ್ತು ಅಭ್ಯರ್ಥಿಗಳ ಕಡೆಯವರು ಯಾವುದೇ ರೀತಿಯ ಚುನಾವಣಾ ಅಕ್ರಮಗಳಲ್ಲಿ ಭಾಗಿಯಾಗಬಾರದು. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯು ಚುನಾವಣಾಧಿಕಾರಿಗಳ ಸಹಕಾರದೊಂದಿಗೆ ಅತ್ಯಂತ ನಿರ್ಭೀತ, ಶಾಂತಿಯುತ ಚುನಾವಣೆ ನಡೆಸಲು ಸನ್ನದ್ದರಾಗಿದ್ದು, ಎಲ್ಲರೂ ಈ ನಿಟ್ಟಿನಲ್ಲಿ ಸಹಕರಿಸಬೇಕು. ಯಾವುದೇ ವ್ಯಕ್ತಿಗಳು, ಸಂಘಗಳು ಯಾರನ್ನಾದರೂ ಹೆದರಿಸಿ, ಬೆದರಿಸುವುದು ಕಂಡು ಬಂದಲ್ಲಿ ನಿರ್ಭೀತರಾಗಿ ತಮಗೆ ಅಥವಾ ಪೊಲೀಸ್ ಇಲಾಖೆ ಮಾಹಿತಿ ನೀಡಿದಲ್ಲಿ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಾಲಿಕೆ ಚುನಾವಣೆ ವೆಚ್ಚ ವೀಕ್ಷಕ ವರದರಾಜ್ ಮಾತನಾಡಿ, ಅಭ್ಯರ್ಥಿಗಳು ತಮಗೆ ಸಂಬಧಿಸಿದ ವೆಚ್ಚದ ವಿವರಗಳನ್ನು ನಿಗದಿತ ನಮೂನೆಯಲ್ಲಿ ನಿರ್ವಹಿಸಿ ತಮ್ಮ ಚುನಾವಣಾಧಿಕಾರಿಗಳಿಗೆ ಸಲ್ಲಿಸುವುದು ಅತಿ ಮುಖ್ಯ ಮತ್ತು ಗುರುತರ ಜವಾಬ್ದಾರಿಯಾಗಿದೆ. ಕರಪತ್ರ ಮುದ್ರಿಸಲು, ಚುನಾವಣಾ ಪ್ರಚಾರ ನಡೆಸಲು ವಾಹನಗಳಿಗೆ ಅನುಮತಿ ಪಡೆಯಬೇಕು. ಪ್ರತಿದಿನ ಚುನಾವಣಾ ಪ್ರಚಾರಕ್ಕೆ ತಗಲುವ ವೆಚ್ಚವನ್ನು ವೋಚರ್ ಬಿಲ್ ಸಮೇತ ನಮೂನೆಯಲ್ಲಿ ಭರ್ತಿ ಮಾಡಿ ಖರ್ಚಿನ ವಿವರನ್ನು ಏಜೆಂಟರ ಮೂಲಕ ವೆಚ್ಚ ವಿಭಾಗಕ್ಕೆ ಸಲ್ಲಿಸಬೇಕು. ಖರ್ಚು ಮಾಡದೇ ಇರುವ ದಿನ ಏನೂ ಖರ್ಚು ಮಾಡಿಲ್ಲವೆಂದು ನಮೂದಿಸಬೇಕು. ಅಭ್ಯರ್ಥಿ ನಾಮಪತ್ರ ಸಲ್ಲಿಸಿದ ದಿನದಿಂದ ಲೆಕ್ಕಪತ್ರ ನಿರ್ವಹಣೆ ಆರಂಭವಾಗುತ್ತದೆ. ನ.7, 9 ಮತ್ತು 11 ರಂದು ಪ್ರತಿ ಅಭ್ಯರ್ಥಿಗಳು ತಮ್ಮ ಚುನಾವಣಾಧಿಕಾರಿಗಳಿಗೆ ವೆಚ್ಚದ ವಿವರ ಸಲ್ಲಿಸಬೇಕೆಂದು ಮಾಹಿತಿ ನೀಡಿದರು.
ಪಕ್ಷೇತರ ಅಭ್ಯರ್ಥಿ ಸುರಭಿ ಶಿವಮೂರ್ತಿಯವರು ತಾವು ಪಕ್ಷೇತರ ಅಭ್ಯರ್ಥಿಯಾಗಿದ್ದು ದೇಶದ ಮಹಾನ್ ವ್ಯಕ್ತಿಗಳ ಚಿತ್ರವನ್ನು ತಮ್ಮ ಕರಪತ್ರದಲ್ಲಿ ಬಳಸಬಹುದೇ ಎಂಬ ಪ್ರಶ್ನೆಗೆ ಜಿಲ್ಲಾಧಿಕಾರಿಗಳು ಸಂವಿಧಾನ ಮತ್ತು ಆರ್‌ಪಿ ಕಾಯ್ದೆ ಪ್ರಕಾರ ಚುನಾವಣೆ ನಡೆಯುತ್ತದೆ. ಇದರನ್ವಯ ಚುನಾವಣೆಯಲ್ಲಿ ಮಹಾನ್ ವ್ಯಕ್ತಿಗಳ ಚಿತ್ರ ಬಳಸಲು ಅವಕಾಶವಿಲ್ಲ ಎಂದರು.
ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ.ಜಿ, ಚುನಾವಣಾ ತಹಶೀಲ್ದಾರ್ ಪ್ರಸಾದ್ ವೆಚ್ಚ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ 45 ವಾರ್ಡುಗಳಿಗೆ ಸಂಬಂಧಿಸಿದ ಚುನಾವಣಾಧಿಕಾರಿಗಳು, ಪಾಲಿಕೆ ಚುನಾವಣೆ ಅಭ್ಯರ್ಥಿಗಳು, ಏಜೆಂಟರ್‌ಗಳು, ಇತರೆ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ