ಚಿತ್ರದುರ್ಗ;
ಧಾರವಾಡದಲ್ಲಿ ನಡೆದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೊನೆಯ ದಿನ ಆಯೋಜಿಸಲಾಗಿದ್ದ ಕವಿಗೋಷ್ಟಿಯಲ್ಲಿ ಚಿತ್ರದುರ್ಗದಿಂದ ಆಯ್ಕೆಯಾಗಿದ್ದ ಪತ್ರಕರ್ತ ಹಾಗೂ ಲೇಖಕ ಮೇಘ ಗಂಗಾಧರ ನಾಯಕ್ ಅವರು ತಮ್ಮ ಸ್ವ ರಚಿತ ಕವನ ವಾಚಿಸಿ ಗಮನ ಸೆಳೆದರು
ಖ್ಯಾತ ಕವಿಯತ್ರಿ ಸುಕನ್ಯಾ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕವಿಗೋಷ್ಟಿಯಲ್ಲಿ ಕವಿ ದುಂಡಿರಾಜ್ ಆಶಯ ಭಾಷಣ ಮಾಡಿದರು. ಸುಮಾರು 45ಕ್ಕೂ ಹೆಚ್ಚು ಮಂದಿ ಕವಿಗಳು ಗೋಷ್ಟಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ