ದಾವಣಗೆರೆ:
ವಿದ್ಯಾರ್ಥಿ-ಯುವಜನರಲ್ಲಿ ಶಾಂತಿ-ಸಹಬಾಳ್ವೆಯ ಸಂದೇಶ ಸಾರಲು ಹಾಗೂ ಸಹೋದರತೆಯ ಭಾವನೆ ಮೂಡಿಸಲು ಅರಿವಿನ ನಾಳೆಗಾಗಿ ಎಂಬ ಘೋಷಣೆಯಡಿಯಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ ವತಿಯಿಂದ ರಾಜ್ಯಾದ್ಯಂತ ಸಂಚರಿಸುತ್ತಿರುವ ಜಾಥಾವು ಶನಿವಾರ ಸಂಜೆ ನಗರಕ್ಕೆ ಆಗಮಿಸಿತು.
ಹರಿಹರದ ಮೂಲಕ ನಗರವನ್ನು ಪ್ರವೇಶಿಸಿದ ಜಾಥಾವು ಪಿಬಿ ರಸ್ತೆ, ಅರುಣ ಚಿತ್ರಮಂದಿರ ವೃತ್ತ, ಎ.ವಿ.ಕೆ ಕಾಲೇಜು ರಸ್ತೆ ಮುಖಾಂತರ ಅಂಬೇಡ್ಕರ್ ವೃತ್ತ ಹಾದು, ಜಯದೇವ ವೃತ್ತ ತಲುಪಿತು.ಜಾಥಾದೊಂದಿಗೆ ಬಂದಿದ್ದ ಕಲಾವಿದರು ಜಯದೇವ ವೃತ್ತದಲ್ಲಿ ಅರಿವಿನ ನಾಳೆಗಾಗಿ ಬೀದಿ ನಾಟಕ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಕರ್ಯದರ್ಶಿ ಜಾಹೀದ್, ದಾನೀಶ್, ನಿಜಾಮುದ್ದೀನ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ