ಚಿತ್ರದುರ್ಗ;
ನಗರದ ಪ್ರತಿಷ್ಠಿತ ಎಸ್ ಆರ್ ಎಸ್ ಪಿಯು ಕಾಲೇಜು ಇತ್ತೀಚಿಗೆ ನಡೆದ ಜೆಇಇ ಪ್ರಥಮ ಸ್ಲಾಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ತಿಳಿಸಿದ್ದಾರೆ.
ಪರೀಕ್ಷೆಯಲ್ಲಿ ಕು. ಗಗನ್‍ದೀಪ್ ಎನ್. ಎ., ಅತ್ಯಧಿಕ 97.27 ಪರ್ಸೆಂಟೈಲ್ ಸ್ಕೋರ್ ನೊಂದಿಗೆ ಟಾಪರ್ ಆದರೆ, ಕು. ಮಂಜುನಾಥ ಎಸ್. 95.6 ಪರ್ಸೆಂಟೈಲ್ ಹಾಗೂ ಕು. ಭೂಮಿಕಾ ಎಂ. 90.6 ಪರ್ಸೆಂಟೈಲ್ ಸ್ಕೋರ್‍ನೊಂದಿಗೆ ಕ್ರವiವಾಗಿ ದ್ವಿತೀಯ ಹಾಗೂ ತೃತೀಯ ಟಾಪರ್ ಆಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದ್ದಾರೆ
ಜೆಇಇ ಕೋಚಿಂಗ್ ಪಡೆದ ಒಟ್ಟು 27 ವಿದ್ಯಾರ್ಥಿಗಳ ಪೈಕಿ 3 ವಿದ್ಯಾರ್ಥಿಗಳು 90ಕ್ಕೂ ಅಧಿಕ ಸ್ಕೋರ್ ಗಳಿಸಿದ್ದು, 16 ವಿದ್ಯಾರ್ಥಿಗಳು 80ಕ್ಕೂ ಅಧಿಕ ಪರ್ಸೆಂಟೈಲ್ ಸ್ಕೋರ್ ಗಳಿಸಿದ್ದಾರೆ. ಎಸ್ ಆರ್ ಎಸ್ ಜಿಇಇ, ನೀಟ್ ಮತ್ತು ಸಿಇಟಿಗೆ ಪ್ರತ್ಯೇಕ ಬ್ಯಾಚ್‍ಗಳನ್ನು ಹೊಂದಿದೆ.
ಜೆಇಇ ಮೊದಲ ಸ್ಲಾಟ್‍ನಲ್ಲಿಯೇ ಎಸ್ ಆರ್ ಎಸ್ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳಿಸಿದ್ದು ಕಾಲೇಜು ಈ ವರ್ಷ ಅಳವಡಿಸಿಕೊಂಡ ಸಮಗ್ರ ಕೋಚಿಂಗ್ ವ್ಯವಸ್ಥೆಯು ಫಲಕೊಟ್ಟಂತಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಅತ್ಯುತ್ತಮ ಪರ್ಸೆಂಟೈಲ್ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹೈದಾರಾಬಾದ್‍ನ ನಾರಾಯಣ ಇನ್‍ಸ್ಟಿಟ್ಯೂಟ್‍ಗೆ ಕಳಿಸಿ ಜೆಇಇ ಆಡ್ವಾನ್ಸ್ ಪರೀಕ್ಷೆ ತರಬೇತಿ ಕೊಡಿಸುವ ಇಂಗಿತವನ್ನು ಸಂಸ್ಥೆಯ ಅಧ್ಯಕ್ಷರಾ ಶ್ರೀ ಬಿ ಎ ಲಿಂಗಾರೆಡ್ಡಿಯವರು ವ್ಯಕ್ತಪಡಿಸಿದ್ದಾರೆ. ಪ್ರತಿಷ್ಠಿತ ನಾರಾಯಣ ಈಗ ಎಸ್ ಆರ್ ಎಸ್ ನೊಂದಿಗೆ ಸಹಯೋಗ ಹೊಂದಿ ಮುಂಬರುವ ಶೈಕ್ಷಣಿಕ ವರ್ಷದಿಂದ ಸಮಗ್ರ ತರಬೇತಿ ಕೈಗೊಳ್ಳಲಿದೆ ಎಂದು ಲಿಂಗಾರೆಡ್ಡಿ ತಿಳಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ