ಆದರ್ಶ ವ್ಯಕ್ತಿಗಳು ತಮ್ಮ ಜಾತಿಯನ್ನು ಎಲ್ಲಿಯೂ ಹೇಳದೆ ವಿಶ್ವ ಮಾನವರಾಗಿದ್ದಾರೆ: ಹೆಚ್.ಎಂ.ರಮೇಶ್

ಹೊಳಲ್ಕೆರೆ:

     ಯಾವುದೇ ಆದರ್ಶ ಪುರುಷರ ಜಯಂತಿಗಳು ಆಯಾ ಆಯಾ ಸಮುದಾಯಕ್ಕೆ ಜಾತಿಗೆ ಧರ್ಮಕ್ಕೆ ಸೀಮಿತವಲ್ಲ. ಈ ಆದರ್ಶ ಪುರುಷರು ತಾವು ಇಂತಹ ಜಾತಿಯಲ್ಲೇ ಹುಟ್ಟಿದ್ದೆವೆ ಎಂದು ಎಲ್ಲಿಯು ಹೇಳಿಕೊಂಡಿಲ್ಲ. ಆದ್ದರಿಂದ ಇವರೆಲ್ಲ ವಿಶ್ವ ಮಾನವರಾಗಿದ್ದಾರೆ ಎಂದು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾದ ತಹಶೀಲ್ದಾರ್ ಹೆಚ್.ಎಂ.ರಮೇಶ್ ಪ್ರತಿಪಾದಿಸಿದರು.

    ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಆಶ್ರಯದಲ್ಲಿ ಪಟ್ಟಣದ ಅಂಬೇಡ್ಕರ್ ಬಯಲು ರಂಗಮಂದಿರದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

     ಶ್ರೀ ಮಹರ್ಷಿ ವಾಲ್ಮೀಕಿಯವರು 24 ಸಾವಿರ ಶ್ಲೋಕಗಳನ್ನು ಸಂಸ್ಕತ ಭಾಷೆಯಲ್ಲಿ ರಚಿಸಿದ್ದಾರೆ. ಅವರಲ್ಲಿ ಅಗಾದವಾದ ಜ್ಞಾನ, ಸಂಪತ್ತು ಅವರಲ್ಲಿತ್ತು. ಅವರು ನಾಯಕ ಸಮಾಜದಲ್ಲಿ ಹುಟ್ಟಿರುವುದೇ ಒಂದು ದೊಡ್ಡ ಹೆಮ್ಮೆ ವಿಷಯವಾಗಿದೆ. ಇಂತಹ ಸಮಾಜ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹಗಳನ್ನು ನೀಡಬೇಕು. ಈ ಸಮಾಜದಲ್ಲಿ ವಿದ್ಯಾವಂತರು ಹೆಚ್ಚಾಗಬೇಕು. ಒಳ್ಳೆಯ ಸ್ಥಾನಗಳನ್ನು ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ರಮೇಶ್ ಕರೆ ನೀಡಿದರು.

     ಪಟ್ಟಣದ ಬಿ.ಪರಮೇಶ್ವರಪ್ಪ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಉಷಾ ಕೆ.ಬಿ. ಮಾತನಾಡಿ ಮಹರ್ಷಿ ವಾಲ್ಮೀಕಿ ಮಹಾನ್ ಕವಿಗಳು ವಿಶ್ವದ ಮಹಾನ್ ಕವಿಗಳ ಸಾಲಿನಲ್ಲಿ ಅಗ್ರಗಣ್ಯರಾಗಿದ್ದಾರೆ. ಮಹರ್ಷಿ ವಾಲ್ಮೀಕಿ ಮೂಲ ಹೆಸರು ರತ್ನಾಕರ ಇವರ ವೃತ್ತಿ ಬೇಟೆಯಾಡುವುದು.

       ಒಂದು ಸಲ ಕ್ರೌಂಚ ಪಕ್ಷಿಗೆ ಇವರ ಬಿಲ್ಲು ತಾಗಿ ಅದು ಜೀವ ಬಿಡಲು ಪಟ್ಟಂತಹ ಹಿಂಸೆಯನ್ನು ಕಂಡು ಬೇಟೆಯಾಡುವುದನ್ನು ತೇಜಿಸಿ ಕೊನೆಗೆ ಕಾಡಿನಲ್ಲಿ ಅನೇಕ ವರ್ಷಗಳ ಕಾಲ ತಪಸ್ಸನ್ನು ಮಾಡಿ ವಾಲ್ಮೀಕಿ ರಾಮಾಯಣವನ್ನು ರಚಿಸಿದ ಮಹಾನ್ ಕವಿಯಾದರು. ವಾಲ್ಮೀಕಿ ಮಹರ್ಷಿ ಕೇವಲ ಒಂದು ಜಾತಿಗೆ ಸೇರಿದವರಲ್ಲ. ಇವರು ಇಡೀ ಸಮಾಜಕ್ಕೆ ಸೇರಿದ್ದಾರೆ. ಇಂತಹವರ ಸ್ಮರಣೆಗೋಸ್ಕರ ಸರ್ಕಾರ ಪ್ರತಿ ವರ್ಷ ಜಯಂತಿಯನ್ನು ಆಚರಣೆ ಮಾಡುತ್ತಿರುವುದು ಸಂತೋಷದ ವಿಷಯ. ಈ ಜಯಂತಿಗೆ ಎಲ್ಲಾ ಸಮಾಜದ ಜನರು ಸೇರಿ ಆಚರಣೆ ಮಾಡಿದರೆ ಇದಕ್ಕೆ ಒಂದು ಅರ್ಥ ಪೂರ್ಣ ಮಹತ್ವ ಬರುತ್ತದೆ ಎಂದು ತಾಕೀತು ಮಾಡಿದರು.

     ಮುಖ್ಯ ಅತಿಥಿಗಳಾಗಿ ಜಿ.ಪಂ ಮಾಜಿ ಸದಸ್ಯರುಗಳಾದ ಎಸ್.ಜೆ.ರಂಗಸ್ವಾಮಿ, ಮತ್ತು ಎಂ.ಜಿ.ಲೋಹಿತ್ ಕುಮಾರ್, ಪ.ಪಂ. ಅಧ್ಯಕ್ಷೆ ಸವಿತಾ ಬಸವರಾಜ್, ಮಾತನಾಡಿದರು.

     ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಸಮಾಜದ ಕೃಷಿ ವಿಸ್ತರಣಾಧಿಕಾರಿಯಾದ ಜಿ.ಕೆ.ವಿಕೆ. ಬೆಂಗಳೂರು, ಡಾ.ಕೆ.ಪಿ.ರಘುಪ್ರಸಾದ್, ನಿವೃತ್ತ ಯೋಧ ಚಿಕ್ಕನಕಟ್ಟೆ ವಿ.ಚಂದ್ರಪ್ಪ, ಮತ್ತು ಮಾಜಿ ಅಧ್ಯಕ್ಷ ಜಿ.ಓ.ಪುಟ್ಟಸ್ವಾಮಿ ಇವರನ್ನು ಸನ್ಮಾನಿಸಲಾಯಿತು.

       ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಧುಪಾಲೇಗೌಡ, ಮದಕರಿ ನಾಯಕರ ಏಕಪಾತ್ರ ಅಭಿನಯವನ್ನು ಪ್ರದರ್ಶಿಸಿದರು. ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವ ಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾದ್ಯ ಘೋಷ್ಠಿಗಳೊಂದಿಗೆ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು.
ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಸೂರೆಗೌಡ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

      ವಿಶೇಷ ಆಹ್ವಾನಿತರಾಗಿ ತಾ.ಪಂ. ಕಾರ್ಯನಿರ್ವಾಹಣಾದಿಕಾರಿ ಕೆ.ಎನ್.ಮಹಾಂತೇಶ್, ಜಿ.ಪಂ. ಉಪವಿಭಾಗದ ಕಾರ್ಯಪಾಲಕ ಇಂಜಿನಿಯರ್ ಸತ್ಯ ನಾರಾಯಣಶೇಟ್ಟಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಮಹಾಬಲೇಶ್, ಕೃಷಿ ಅಧಿಕಾರಿ ಕೆಂಗೇಗೌಡ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಕೆ.ಎನ್.ಪ್ರವೀಣ್, ಸಣ್ಣ ನೀರಾವರಿ ಕಾರ್ಯಪಾಲಕ ಇಂಜಿನಿಯರ್ ಚಂದ್ರಪ್ಪ, ನಾಯಕ ಸಮಜದ ಮುಖಂಡ ಪೈಲ್ವಾನ್ ರಾಮಣ್ಣ, ಬಿಸಿಎಂ ಅಧಿಕಾರಿ ಶಿವಮೂರ್ತಿ, ಉಪಖಜಾನೆ ಅಧಿಕಾರಿ ಬೈಯಣ್ಣ, ಸಾಮಾಜಿಕ ಅರಣ್ಯ ಅಧಿಕಾರಿ ಬಹುಗುಣ, ಉಪನೋಂದಣಾಧಿಕಾರಿ ಎಂ.ವೈಶಾಲಿ, ಮುಂತಾದವರು ಉಪಸ್ಥಿತರಿದ್ದರು.

      ತಾಲೂಕು ನಾಯಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಹನುಮಂತಪ್ಪ ಸ್ವಾಗತಿಸಿದರು. ನಾಯಕ ಸಮಾಜದ ಮುಖಂಡರು ಮತ್ತು ವಕೀಲರು ಆದ ಎಂ.ಬಿ.ಅರುಣ್ ಕುಮಾರ್ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap