ಲಾಕ್ ಡೌನ್ ಎಫೆಕ್ಟ್ : ಚಿಂತಾಜನಕವಾದ ಕುಂಬಳಕಾಯಿ ಬೆಳೆಗಾರರ ಪರಿಸ್ಥಿತಿ

ಹರಪನಹಳ್ಳಿ:

     ಲಾಕ್‍ಡೌನ್‍ನಿಂದ ಕುಂಬಳಕಾಯಿಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಹಾಗೂ ಕೊಳ್ಳುವರು ಇಲ್ಲದೇ ಹೊಲದಲ್ಲೇ ಕೊಳೆಯುತ್ತಿದ್ದು ಲಕ್ಷಾಂತರ ಮೌಲ್ಯದ ನಷ್ಟ ಅನುಭವಿಸುತ್ತಿರುವ ತಾಲ್ಲೂಕಿನ ದುಗ್ಗಾವತಿ ರೈತರ ಗೋಳನ್ನು ಕೇಳುವರಿಲ್ಲದೇ ಆತ್ಮಹತ್ಯೆಗೆಮುಂದಾಗಿದ್ದನ್ನು ಮನಗಂಡ ರೈತ ಸಂಘದ ಮುಖಂಡರು ಸಂತೈಸಿ ಆತ್ಮಸ್ಥರ್ಯ ನೀಡಿದ ಘಟನೆ ಶನಿವಾರ ಜರುಗಿದೆ.

    ಗ್ರಾಮದ ಸುಮಾರು 20 ಎಕರೆ ಭೂಮಿಯಲ್ಲಿ ಐದಾರು ರೈತರು ಕುಂಬಳ ಬೆಳೆಯನ್ನು ಬೆಳೆದಿದ್ದಾರೆ. ಪ್ರತಿ ಎಕರೆಗೆ 2 ಲಕ್ಷಕ್ಕೂ ಅಧಿಕ ಹಣವನ್ನು ಖರ್ಚು ಮಾಡಿದ್ದಾರೆ. ಸಮೃದ್ಧಿಯಾಗಿ ಬೆಳೆದಿದ್ದ ಕುಂಬಳಕಾಯಿನ್ನು ಖರೀದಿ ಮಾಡಲು ಯಾವ ವ್ಯಾಪರಸ್ಥರು ಬಂದಿಲ್ಲ. ದೂರದ ಪಟ್ಟಣಗಳಿಗೆ ಸಾಗಿಸಲು ವಾಹನ ಸೌಕರ್ಯವಿಲ್ಲ ಅಲ್ಲದೇ ಹೋಟೇಲ್ ಅಥವಾ ಸಮಾರಂಭಗಳೂ ನಡೆಯುತ್ತಿಲ್ಲ ಇದರಿಂದ ಖರೀದಿಯಾಗದೇ ಹೊಲದಲ್ಲೇ ಕೊಳೆಯುತ್ತಿದೆ.

     ಮಂಗಳೂರಿನ ಕಾರಖಾನೆಗೂ ಕುಂಬಳಕಾಯಿ ಸರಕಾಗಿತ್ತು. ಆದರೆ ಲಾಕ್‍ಡೌನ್‍ನಿಂದ ಕಾರಖಾನೆಗಳು ಬಂದ್ ಆಗಿವೆ ಇದರಿಂದ ನಮ್ಮ ಕುಂಬಳಕಾಯಿ ಬಿಕರಿಯಾಗತ್ತಿಲ್ಲ. ಒಂದು ಎಕರೆಯಲ್ಲಿ ಬೆಳೆದ ಕುಂಬಳಕಾಯಿ ಕನಿಷ್ಟ 6ರಿಂದ 8 ಲಕ್ಷಕ್ಕೆ ಬಿಕರಿಯಾಗುತ್ತಿತು. ಇಂದು ನೈಯಾಪೈಸೆಗೆ ಯಾರು ಕೊಳ್ಳುತ್ತಿಲ್ಲ ಈ ರೀತಿ ನಷ್ಟವಾದರೆ ಸಾಲಗಾರರು ನಿಡಿದ ಸಾಲಕ್ಕೆ ಬಡ್ಡಿ ಅಸಲು ಕಟ್ಟುವುದು ಹೇಗೆ ಎಂದು ಚಿಂತೆಯಾಗಿದೆ ಎನ್ನುತ್ತಾರೆ ರೈತರಾದ ಬಲವಂತಪ್ಪ, ಶ್ರೀನಿವಾಸ, ಶಿವನಗೌಡ ಹಾಗೂ ಇತರರು ತಮ್ಮ ಆಳಲನ್ನು ಸುದ್ದಿಗಾರರೊಂದಿಗೆ ತೋಡಿಕೊಂಡರು.

      ಹಸಿರು ಸೇನಾ ಹಾಗೂ ಮಹಿಳಾ ಶಕ್ತಿ ಸಂಘದ ರಾಜ್ಯಾಧ್ಯಕ್ಷ ಹೆಚ್.ಎಂ.ಮಹೇಶ್ವರಸ್ವಾಮಿ ಮಾತನಾಡಿ, ಲಾಕ್ ಡೌನ್ ಪರಿಣಾಮ ಧಾರ್ಮಿಕ ಕ್ಷೇತ್ರದಲ್ಲೂ ಸೇವೆಗಳು ಸ್ಥಗಿತಗೊಂಡಿವೆ. ಅನ್ನದಾಸೋಹವೂ ಇಲ್ಲದಾಗಿ ಕುಂಬಳಕಾಯಿಗೆ ಬೇಡಿಕೆ ಇಲ್ಲದಾಗಿದೆ. ಸೂಕ್ತ ಮಾರುಕಟ್ಟೆಯೂ ಇಲ್ಲದೆ ರೈತ ಕಂಗಾಲಾಗಿದ್ದಾನೆ. ಕಂಗಾಲಾಗಿರುವ ಯಾವ ರೈತರೂ ಆತ್ಮಹತ್ಯೆಯ ದಾರಿ ತುಳಿಯುವುದು ಬೇಡ. ಕೇಂದ್ರ ಸರ್ಕಾರ 20 ಲಕ್ಷ ಕೊಟಿ ವಿಶೇಷ ಪ್ಯಾಕೇಜ್ ಘೋಷಿಸಿದೆ. ನಿಜವಾದ ರೈತ ಫಲಾನುಭವಿಗಳ ಸಂಕಷ್ಟಕ್ಕೆ ಆ ಹಣ ದೊರೆಯುವಂತಾಗಲಿ. ಕುಂಬಳಕಾಯಿ ಬೆಳೆ ಹಾನಿಗೊಳಗಾದ ರೈತರ ಪ್ರತಿ ಎಕರೆಗೆ 10 ಲಕ್ಷ ಪರಿಹಾರ ಶೀಘ್ರವೇ ಘೋಷಿಸಬೇಕು. ಶಾಸಕರು, ಸಂಬಂಧಪಟ್ಟ ಅಧಿಕಾರಿಗಲು ಇಂತಹ ರೈತರ ಗೋಳಿಗೆ ಸ್ಪಂದಿಸಲಿ. ಮತದಾನಕ್ಕಾಗಿ ಮಾತ್ರ ಜನರ ಬಳಿಗೆ ಬರುವ ಜನಪ್ರತಿನಿಧಿಗಳೇ ರೈತರ ಸಂಕಷ್ಟದಲ್ಲಿ ಪಾಲುದಾರರಾಗಿ ಋಣ ತೀರಿಸಿ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap