ತುರ್ತು ಬಜೆಟ್ ಸಭೆಗೆ ಆಯುಕ್ತರ ಪತ್ರ..!!

ತುಮಕೂರು

   “ಬಜೆಟ್ ಮಂಡನೆಗೆ ಸಾಮಾನ್ಯ ಸಭೆ ನಡೆಸಲು ದಿನಾಂಕವನ್ನು ತುರ್ತಾಗಿ ನಿಗದಿಪಡಿಸಲು“ ಕೋರಿ ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರು ಪಾಲಿಕೆಯ ಮೇಯರ್ ಲಲಿತಾ ರವೀಶ್ ಅವರಿಗೆ ಮಾರ್ಚ್ 29 ರಂದು ಪತ್ರ ಬರೆದಿರುವ ಮಹತ್ವದ ಬೆಳವಣಿಗೆಯೊಂದು ಬೆಳಕಿಗೆ ಬಂದಿದೆ.

   ಲೋಕಸಭಾ ಚುನಾವಣೆ ಮತ್ತು 22ನೇ ವಾರ್ಡ್‍ನ ಉಪಚುನಾವಣೆ ಹಿನ್ನೆಲೆಯಲ್ಲಿ ಈವರೆಗೆ ಜಾರಿಯಲ್ಲಿದ್ದ “ಮಾದರಿ ನೀತಿ ಸಂಹಿತೆ”ಯು ತೆರವಾಗಿ ಚುನಾಯಿತ ಮಂಡಲಿಯ ಆಡಳಿತವು ಮತ್ತೆ ಚಾಲನೆಗೆ ಬರುವ ಹೊತ್ತಿನಲ್ಲಿ ಈ ಪತ್ರ ಮಹತ್ವ ಪಡೆದಿದೆ.

     2019-20 ನೇ ಸಾಲಿನ ತುಮಕೂರು ಮಹಾನಗರ ಪಾಲಿಕೆಯ ವಾರ್ಷಿಕವಾಗಿ ತಯಾರಿಸಬೇಕಾದ ಆದಾಯ ಮತ್ತು ವೆಚ್ಚದ ಅಂದಾಜುಗಳನ್ನು ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ರ ಪ್ರಕರಣ ಸಂಖ್ಯೆ 166 ರಂತೆ ವಿವರವಾದ ತಃಖ್ತೆಯನ್ನು ತಯಾರಿಸಲಾಗಿರುತ್ತದೆ.

     ಹಾಗೂ ಸಾಮಾನ್ಯ ಸಭೆಯ ಮುಂದೆ ಮಂಡಿಸುವ ಸಲುವಾಗಿ ಅಧ್ಯಕ್ಷರು, ತೆರಿಗೆ-ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅವರ ಮುಂದೆ ಬಜೆಟ್ ಅಂದಾಜುಗಳನ್ನು ಸಲ್ಲಿಸಿ ದಿನಾಂಕ 05-03-2019 ರಂದು ಅನುಮೋದನೆ ಪಡೆಯಲಾಗಿರುತ್ತದೆ. ಆದರೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯ ಮುಂದೆ ದಿನಾಂಕ 12-03-2019 ರಂದು ನಿಗದಿಯಾಗಿದ್ದ ಆಯವ್ಯಯ ಸಭೆಯನ್ನು ಲೋಕಸಭಾ ಚುನಾವಣೆ ಘೋಷಣೆಯಾಗಿ ಚುನಾವಣಾ ನೀತಿ ಸಂಹಿತೆ ಜಾರಿಯಾದ್ದರಿಂದ ಮುಂದೂಡಲಾಯಿತು. ಆದುದರಿಂದ 2019-20 ನೇ ಸಾಲಿನ ಆಯವ್ಯಯವನ್ನು ದಿನಾಂಕ 07-06-2019ರಂದು ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಮುಂದೆ ಮಂಡಿಸಲು ದಿನಾಂಕ ನಿಗದಿಯಾಗಿರುತ್ತದೆ” ಎಂದು ಸದರಿ ಪತ್ರದಲ್ಲಿ ವಿವರಿಸಲಾಗಿದೆ.

       ಆಯವ್ಯಯ ಸಭೆಯನ್ನು ಈ ಹಿಂದೆ ದಿನಾಂಕ 05-03-2019 ರಂದು ಸೂಕ್ತ ಕಾರಣವಿಲ್ಲದೆ ಮುಂದೂಡಲಾಗಿತ್ತು. ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ರ ಪ್ರಕರಣ ಸಂಖ್ಯೆ 168 ರಿಂದ 171 ರಲ್ಲಿ ಪ್ರದತ್ತವಾಗಿರುವ ಅಧಿಕಾರದಂತೆ ಕಡ್ಡಾಯವಾಗಿ ಆಯವ್ಯಯವನ್ನು ಸಾಮಾನ್ಯ ಸಭೆಯ ಮುಂದೆ ಮಂಡಿಸಿ ಅನುಮೋದಿಸಬೇಕಾಗಿರುತ್ತದೆ. ಆದುದರಿಂದ ಸಾಮಾನ್ಯ ಸಭೆಯಲ್ಲಿ ಯಾವುದೇ ಹೊಸ ನಿರ್ಣಯಗಳನ್ನು ಕೈಗೊಳ್ಳುವಂತಿಲ್ಲ. ಹಾಗೂ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅವಕಾಶವಿಲ್ಲದಿರುವುದರಿಂದ ಬಜೆಟ್ ಮಂಡನೆಗೆ ಸಾಮಾನ್ಯ ಸಭೆ ನಡೆಸಲು ದಿನಾಂಕವನ್ನು ತುರ್ತಾಗಿ ನಿಗದಿಪಡಿಸಲು ಕೋರಲಾಗಿದೆ” ಎಂದು ಆಯುಕ್ತರು ಸದರಿ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಸ್ಥಾಯಿ ಸಮಿತಿಗೂ ಪತ್ರ

      ಇದಲ್ಲದೆ ಆಯುಕ್ತ ಟಿ.ಭೂಬಾಲನ್ ಅವರು ಪಾಲಿಕೆಯ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯ ಕ್ಷ ಲಕ್ಷ್ಮೀನರಸಿಂಹರಾಜು ಅವರಿಗೂ ಮೇ 28 ರಂದು ಪ್ರತ್ಯೇಕ ಪತ್ರ ಬರೆದು, “ಸೂಕ್ತ ದಿನಾಂಕವನ್ನು ಗೊತ್ತುಪಡಿಸುವಂತೆ” ಕೋರಿದ್ದಾರೆ.
“2019-20 ನೇ ಸಾಲಿನ ತುಮಕೂರು ಮಹಾನಗರ ಪಾಲಿಕೆಯ ವಾರ್ಷಿಕವಾಗಿ ತಯಾರಿಸಬೇಕಾದ ಆದಾಯ ಮತ್ತು ವೆಚ್ಚದ ಅಂದಾಜುಗಳನ್ನು ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ರ ಪ್ರಕರಣ ಸಂಖ್ಯೆ 166 ರಂತೆ ವಿವರವಾದ ತಃಖ್ತೆಯನ್ನು ತಯಾರಿಸಿದ್ದು, ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ರ ಪ್ರಕರಣ ಸಂಖ್ಯೆ 167 ರಂತೆ ಸಮಿತಿಯು ಎಲ್ಲ ಸ್ಥಾಯಿ ಸಮಿತಿಯ ಅಧ್ಯಕ್ಷರ ಸಲಹೆ ಸೂಚನೆಗಳನ್ನು ನಿಯಮಾನುಸಾರ ಪರಿಗಣಿಸಿ ಸಾಮಾನ್ಯ ಸಭೇಯ ಮುಂದೆ ಮಂಡಿಸುವ ಸಲುವಾಗಿ ಅಧ್ಯಕ್ಷರು,

     ತೆರಿಗೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅವರ ಮುಂದೆ ಬಜೆಟ್ ಅಂದಾಜುಗಳನ್ನು ಸಲ್ಲಿಸಲಾಗಿರುತ್ತದೆ. ಪ್ರಕರಣ 166 ರಿಂದ 172 ರವರೆಗೆ ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ರಲ್ಲಿ ಅಧಿಕೃತಪಡಿಸಿರುವಂತೆ ಅಂಗೀಕರಿಸಲು ಪಾಲಿಕೆಯ ಸಮಿತಿಯ ಹೊಣೆಗಾರಿಕೆಯಾಗಿರುವುದರಿಂದ ಬಜೆಟ್ ಅಂದಾಜುಗಳನ್ನು ತಯಾರಿಸುವ ಸಲುವಾಗಿ ಅಧ್ಯಕ್ಷರು, ತೆರಿಗೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿಸಮಿತಿ ರವರ ಮುಂದೆ ಸಲ್ಲಿಸಲಾಗಿದೆ. ಆದ್ದರಿಂದ ಸೂಕ್ತ ದಿನಾಂಕವನ್ನು ಗೊತ್ತುಪಡಿಸಬೇಕೆಂದು” ಸದರಿ ಪತ್ರದಲ್ಲಿ ಆಯುಕ್ತರು ಕೋರಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap