ಮಧ್ಯಪ್ರದೇಶ ಕಾಂಗ್ರಸ್ ಶಾಸಕರಿಗೆ ಬಿಗಿ ಭದ್ರತೆ..!

ಬೆಂಗಳೂರು

      ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಮುನ್ನುಡಿ ಬರೆದಿರುವ ಶಾಸಕರು, ಸಚಿವರು ಬಿಗಿ ಭದ್ರತೆಯಲ್ಲಿ ನಗರದಲ್ಲಿ ತಂಗಿದ್ದಾರೆ.ವೈಟ್ ಫೀಲ್ಡ್ ಬಳಿಯ ಆದರ್ಶ ಹೋಟೆಲ್ ನಲ್ಲಿರುವ ಆರು ಮಂದಿ ಸಚಿವರು, 11 ಶಾಸಕರು ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ತಮಗೆ ಸೂಕ್ತ ಭದ್ರತೆ ನೀಡುವಂತೆ ಮನವಿಮಾಡಿದ್ದಾರೆ.

     ಶಾಸಕ ಸ್ಥಾನಕ್ಕೆ ರಾಜೀನಾಮೆ ಸಿದ್ಧಪಡಿಸಿಕೊಂಡಿರುವ ತಮ್ಮ ಮೇಲೆ ದಾಳಿ ಆಗಬಹುದು ಎನ್ನುವ ಆತಂಕದಿಂದ ಪೊಲೀಸರ ಮೊರೆ ಹೋಗಿದ್ದಾರೆ. ತಾವು ಸ್ವಯಂ ಪ್ರೇರಣೆಯಿಂದ ಮಹತ್ವದ ಕೆಲಸಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದು, ತಮಗೆ ಸೂಕ್ತ ರಕ್ಷಣೆ ಒದಗಿಸುವಂತೆ ಕೋರಿದ್ದಾರೆ.

      ಬೆಂಗಳೂರಿನಲ್ಲಿ ನಾವು ವಾಸ್ತವ್ಯ ಹೂಡುವ ತನಕ ನಮಗೆ ರಕ್ಷಣೆ ನೀಡಬೇಕು. ನಮ್ಮ ಸಂಚಾರಕ್ಕೆ ಯಾವುದೇ ರೀತಿಯಲ್ಲೂ ತೊಂದರೆಯಾಗಂತೆ ನೋಡಿಕೊಳ್ಳಬೇಕೆಂದು ಈ ಶಾಸಕರು ಸಹಿ ಮಾಡಿ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.ಈಮಧ್ಯೆ ಬೆಂಗಳೂರಿನಲ್ಲಿ ತಂಗಿರುವ ಮಧ್ಯ ಪ್ರದೇಶ ಶಾಸಕರು,ಸಚಿವರು ತಮ್ಮ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಸೂಚನೆಗಾಗಿ ಕಾಯುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link