ಪಾವಗಡ;-
ವಿಶ್ವೇಶ್ವರಭಟ್ ರ ಮೇಲೆ ಹಾಕಿರುವ ಪೋಲೀಸ್ ಕೇಸನ್ನು ವಾಪಸ್ಸ್ ಪಡೆಯುವಂತೆ ಆಗ್ರಹಿಸಿ ಪಾವಗಡ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗುರುವಾರ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ತುಮಕೂರು ಜಿಲ್ಲಾ ಕಾರ್ಯನಿರತಪತ್ರಕರ್ತರ ಸಂಘದ ಗ್ರಾಮೀಣ ಉಪಾಧ್ಯಕ್ಷ ಪತ್ರಕರ್ತರ ಪ್ರಸನ್ನಮೂರ್ತಿ ಮಾತನಾಡಿ ಪ್ರತಿ ದಿನ ಪರ್ತಕರ್ತರು ಸಮಾಜದಲ್ಲಿ ಅಂಕು ಡೊಂಕುಗಳನ್ನು ತಿದ್ದುವ ಸುದ್ದಿಯನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದರೆ ಅಂತಹ ಸಂಪಾದಕರ ಮೇಲೆ ಕೇಸ್ ದಾಖಲಿಸುವುದು ಯಾವ ನ್ಯಾಯ,ಇತ್ತೀಚಿಗೆ ವಿಶ್ವವಾಣಿ ದಿನಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್‍ರ ಮೇಲೆ ಹಾಕಿರುವ ಪೋಲಿಸ್ ಕೇಸನ್ನು ಈ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಇಂತಹ ಘಟನೆಗಳಿಂದ ಮಾದ್ಯಮಗಳನ್ನು ಬೆದರಿಸುವ ತಂತ್ರವಾಗಿದ್ದು, ಸರ್ಕಾರ ಕೂಡಲೆ ವಿಶ್ವವಾಣಿ ಸಂಪಾದಕರ ಮೇಲೆ ಹಾಕಿರುವ ಕೇಸನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.ತಹಶೀಲ್ದಾರ್ ಬಿ.ಎಸ್.ಕುಂಬಾರ ರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಪತ್ರಕರ್ತರ ಸಂಘದ ತಾ. ಅಧ್ಯಕ್ಷ ಹೆಚ್. ರಾಮಾಂಜಿನಪ್ಪ, ಪ್ರಧಾನ ಕಾರ್ಯಾದರ್ಶಿ ಜಯಸಿಂಹ ,ಪತ್ರಕರ್ತರಾದ ಸತ್ಯಲೋಕೇಶ್, ಶ್ರೀನಾಥ್, ಮಾತನಾಡಿದರು.
ಪತ್ರಕರ್ತರರಾದ ನಾಗೇಶ್,ಜಿ.ಎನ್. ನಾಗರಾಜ್, ನಾಗೇಂದ್ರಯ್ಯ,ಮೈಕೆಲ್,ವೀರಸೇನ, ಸಂತೋಷ್ ಕುಮಾರ್, ಚಂದ್ರಪ್ಪ, ಎ.ತಿಮ್ಮರಾಜು, ,ಮಲ್ಲೇಶ್, ನವೀನ್ ಕುಮಾರ್ ಮತ್ತಿತರಿದ್ದರು.