ರಾಷ್ಟ್ರದ ಏಕತೆಯ ರೂವಾರಿ ಸರ್ದಾರ್ ವಲ್ಲಬಾಯಿ ಪಟೇಲ್ ವಿಶ್ವಮನ್ನಣೆ ಪಡೆದ ಶ್ರೇಷ್ಠ ನಾಯಕ

ಚಳ್ಳಕೆರೆ

        ರಾಷ್ಟ್ರದ ಐಕ್ಯತೆಗಾಗಿ ಹಲವಾರು ದಶಕಗಳ ಕಾಲ ಹೋರಾಟ ನಡೆಸಿದ ಉಕ್ಕಿನ ಮನುಷ್ಯನೆಂದು ಖ್ಯಾತಿಯಾದ ಮಹಾನ್ ರಾಷ್ಟ್ರ ನಾಯಕ ಸರ್ದಾರ್ ವಲ್ಲಭಾಯ್ ಪಟೇಲ್‍ರವರ 144ನೇ ಜನ್ಮ ದಿನಾಚರಣೆ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುಜರಾತ್ ರಾಜ್ಯದ ಕೆವಾಡಿಯ ಗ್ರಾಮದ ನರ್ಮಾದ ನದಿಯ ದಡದಲ್ಲಿ 182 ಮೀಟರ್ ಉದ್ದದ ಏಕತೆಯನ್ನು ಸಾರುವ ಸರ್ದಾರ್ ವಲ್ಲಬಾಯಿ ಪಟೇಲ್‍ರವರ ಪ್ರತಿಮೆಯನ್ನು ಉದ್ಘಾಟಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಭಾರತೀಯ ಜನತಾ ಪಕ್ಷದ ಘಟಕ ಏಕತಾ ಓಟವನ್ನು ಹಮ್ಮಿಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಹರ್ಷ ವ್ಯಕ್ತ ಪಡಿಸಿತು.

        ಇಲ್ಲಿನ ಪ್ರವಾಸಿ ಮಂದಿರದ ಬಳಿ ಬಿಜೆಪಿ ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣ ಏಕತಾ ಓಟಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಈ ಕಾರ್ಯಕ್ರಮ ಕೇವಲ ರಾಷ್ಟ್ರದಲ್ಲಷ್ಟೇಯಲ್ಲ, ವಿಶ್ವಮಟ್ಟದಲ್ಲೂ ಖ್ಯಾತಿಯಾಗಿದೆ. ರಾಷ್ಟ್ರದ ಏಕತೆಯ ರೂವಾರಿಯಾಗಿದ್ದ ಸರ್ದಾರ್ ವಲ್ಲಬಾಯಿ ಪಟೇಲ್ ವಿಶ್ವ ಮನ್ನಣೆ ಪಡೆದ ನಾಯಕರಾಗಿದ್ದರು. ಅವರು ಆದರ್ಶಗಳು ನಾಡಿನ ಜನರ ಮನದಲ್ಲಿ ಹಸಿರಾಗಿ ಸದಾಕಾಲ ಉಳಿಯುವಂತೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಏಕತಾ ಓಟ ಎಲ್ಲರ ಪ್ರಗತಿಯ ದಿಟ್ಟ ಹೆಜ್ಜೆಯಾಗಲಿ ಎಂದು ಶುಭ ಹಾರೈಸುವುದಾಗಿ ತಿಳಿಸಿದರು.

        ಏಕತಾ ಓಟ ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯೆ ಪಾಲಮ್ಮ, ಮಾಜಿ ನಗರಸಭಾ ಸದಸ್ಯ ಎಂ.ಶಿವಮೂರ್ತಿ, ಜಿ.ಕೆ.ವೀರಣ್ಣ, ಬಿಜೆಪಿಯ ದುರೀಣರಾದ ಡಿ.ಎಂ.ತಿಪ್ಪೇಸ್ವಾಮಿ, ಮಾತೃಶ್ರೀ ಎನ್.ಮಂಜುನಾಥ, ಜೆಎಂಸಿ ವೀರೇಶ್, ಕರೀಕೆರೆ ತಿಪ್ಫೇಸ್ವಾಮಿ, ಸಿ.ಬೋರನಾಯಕ , ಸಿ.ಬಿ.ಬಾಲರಾಜು, ನಾಗೇಶ್‍ನಾಯಕ, ಪಾಲನೇತ್ರನಾಯಕ, ಸಂತೋಷ್, ಮರಿಕುಂಟೆ ರಾಜಣ್ಣ, ಈಶ್ವರನಾಯಕ, ನಾಗರಾಜು ಮುಂತಾದವರು ಭಾಗವಹಿಸಿದ್ದರು. ಏಕತಾ ಓಟ ಪ್ರವಾಸಿ ಮಂದಿರದಿಂದ ಪ್ರಾರಂಭವಾಗಿ ಚಿತ್ರದುರ್ಗ ರಸ್ತೆ ಮೂಲಕ ನೆಹರೂ ಸರ್ಕಲ್‍ಗೆ ಆಗಮಿಸಿ ಅಂಬೇಡ್ಕರ್ ವೃತ್ತ, ವಾಲ್ಮೀಕಿ ವೃತ್ತದ ಮೂಲಕ ಪ್ರವಾಸಿ ಮಂದಿರ ತಲುಪಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link