ತುಮಕೂರು:
ಸಮುದಾಯದಲ್ಲಿ ಸಾಧನೆ ಮಾಡಿದವರು,ಸಮಾಜಕ್ಕೆ ಗೌರವ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದ್ದಾರೆ.
ನಗರದ ಚಿಲುಮೆ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು,ಕಳೆದ ನಾಲ್ಕುವರೆ ವರ್ಷದಲ್ಲಿ ಸಂಸದನಾಗಿ ಒಕ್ಕಲಿಗ ಸಮುದಾಯಕ್ಕೆ ಗೌರವ ರೀತಿಯಲ್ಲಿ ನಡೆದುಕೊಂಡಿದ್ದೇನೆ ಎಂಬ ಆತ್ಮಾಭಿಮಾನದಿಂದ ಹೇಳಬಲ್ಲೆ ಎಂದರು.
ಒಕ್ಕಲಿಗ ಎಂದರೆ ಅನ್ನದಾತ ಎಂಬ ಮಾತು ರೂಢಿಯಲ್ಲಿದೆ.ಇದನ್ನೇ ಆಧಾರವಾಗಿಟ್ಟುಕೊಂಡು ರಾಷ್ಟ್ರಕವಿ ಕುವೆಂಪು ಅವರು ಏನು ಅರಿಯದ ನೇಗಿಲಯೋಗಿ ಲೋಕಕ್ಕೆ ಅನ್ನವ ನೀಡುವನು ಎಂದು ಕವಿತೆಯಲ್ಲಿ ಹೇಳಿದ್ದಾರೆ. ಅನ್ನದಾನ ನಮ್ಮ ಹಕ್ಕು.ಸಂಸತ್ತನಲ್ಲಿ ರೈತರ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಕೃಷಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೆಲಸ ಮಾಡುತ್ತಿರುವ ರೈತರಿಗೆ ವಿವಿಗಳಿಂದ ಗೌರವ ಡಾಕ್ಟರೇಟ್ ನೀಡಬೇಕೆಂದು ಕೇಂದ್ರ ಕೃಷಿ ಸಚಿವರಲ್ಲಿ ಮನವಿ ಮಾಡಿದ್ದೇ.ಇದುವರೆಗೂ ಯಾವುದೇ ಪ್ರಕ್ರಿಯೆಗಳು ಜರುಗಿಲ್ಲ ಎಂದ ಅವರು,ಇಂದು ದೊಡ್ಡ ದೊಡ್ಡ ನಗರಗಳಲ್ಲಿ ಮಾಲ್‍ಗಳು ಬದುಕುತ್ತಿರುವುದೇ ರೈತರಿಂದ,ಅವರ ಬೆವರಿನ ಫಲ ರೈತರಿಗೆ ದೊರಕುವಂತಾಗಬೇಕು ಎಂದು ಮುದ್ದಹನುಮೇಗೌಡ ತಿಳಿಸಿದರು.
ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಕೇಂದ್ರ ಸರಕಾರಕ್ಕೆ ಕುಂಚಟಿಗ ಒಕ್ಕಲಿಗರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಸಂಬಂಧ ವರದಿ ಸಿದ್ದಗೊಂಡಿದ್ದು,ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಶೀಘ್ರದಲ್ಲಿಯೇ ಕೇಂದ್ರಕ್ಕೆ ಕಳುಹಿಸಲಿದ್ದು, ಸಂಸದರು ರಾಜ್ಯದ ಇತರೆ ಸಂಸದರೊಂದಿಗೆ ಸೇರಿ ವರದಿ ಅನುಮೋದನೆಯಾಗಲು ಶ್ರಮಿಸುವಂತೆ ಮನವಿ ಮಾಡಿದರು.
ಒಕ್ಕಲಿಗ ಸಮುದಾಯದ ಪ್ರತಿಭಾನ್ವಿತ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅವಕಾಶವಾಗುವಂತೆ ಕೃಷಿಕ ಪೌಂಡೇಷನ್ ಅಡಿಯಲ್ಲಿ ತರಬೇತಿ ನೀಡುತ್ತಿದ್ದು, ಇದನ್ನು ಸಮುದಾಯದ ಮಕ್ಕಳು ಬಳಸಿಕೊಳ್ಳಬೇಕು ಎಂದು ಮುರುಳೀಧರ ಹಾಲಪ್ಪ ಮನವಿ ಮಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕುಂಚಟಿಗ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ ಕೆಂಗೇರಿ ಇದರ ಅಧ್ಯಕ್ಷರಾದ ಶ್ರೀಕುಮಾರಚಂದ್ರಶೇಖರನಾಥಸ್ವಾಮೀಜಿ,ಆದಿಚುಂಚನಗಿರಿ ತುಮಕೂರು ಶಾಖಾ ಮಠದ ಶ್ರೀಮಂಗಳನಾಥಸ್ವಾಮೀಜಿ ವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ ಅಧ್ಯಕ್ಷ ಶಂಕರ್ ವಹಿಸಿದ್ದರು. ಆಡಿಟರ್ ಯಲಚವಾಡಿ ನಾಗರಾಜು,ಹನುಮಂತರಾಯಪ್ಪ,ಸುಜಾತ ನಂಜೇಗೌಡ, ಗಿರೀಶ್, ಕೆಂಪರಾಜು, ಸತೀಶ್,ಸಂಘದ ಉಪಾಧ್ಯಕ್ಷ ಶಿವಣ್ಣ,ರುಕ್ಮಣಿ,ಕಾರ್ಯದರ್ಶಿ ಆಶ್ವಥ್‍ಕುಮಾರ್,ಸಹ ಕಾರ್ಯದರ್ಶಿ ಶಿವರಾಮಯ್ಯ, ನಿರ್ದೇಶಕರಾದ ಎನ್.ನರಸಿಂಹ ರಾಜು,ಡಿ.ಹೆಚ್.ಲಕ್ಷ್ಮಣಯ್ಯ,ಶಿವಣ್ಣ,ಪುಟ್ಟಸ್ವಾಮಿ,ರಂಗಸ್ವಾಮಿ,ಶಿವನಂಜಯ್ಯ,ಪಾಲ್ಗುಣ,ಹೆಚ್.ಎ.ಶಿವಕುಮಾರ್,ಡಿ.ಹೆಚ್.ಹನುಮಂತಯ್ಯ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ನಗರಪಾಲಿಕೆ ನೂತನ ಸದಸ್ಯರಾದ ಧರಣೇಂದ್ರಕುಮಾರ್,ಜೆ.ಕುಮಾರ್,ಮುಖ್ಯಮಂತ್ರಿಗಳ ವಿಶಿಷ್ಟ ಸೇವಾ ಪದಕ ಪಡೆದ ಎ.ಎಸ್.ಪಿ. ಡಾ.ಶೋಭಾರಾಣಿ,ರಾಷ್ಟ್ರೀಯ ದೇಹದಾಢ್ಯ ಕ್ರೀಡಾಪಟು ಬಿ.ಶ್ರೀಹರಿ,ಬೆಳ್ಳಿ ಲೋಕೇಶ್ ಅವರುಗಳನ್ನು ಹಾಗೂ 2017-18ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ಮಕ್ಕಳನ್ನು ಅಭಿನಂದಿಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ