ಬಿಜೆಪಿ ನಾಯಕರಿಂದ ಪ್ರಜಾಪ್ರಭುತ್ವದ ಕಗ್ಗೊಲೆ

ಬಿಜೆಪಿ ವಿರುದ್ಧ ಜೆಡಿಎಸ್ ಪ್ರತಿಭಟನೆ

ತುಮಕೂರು

     ಬಿಜೆಪಿ ನಾಯಕರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ, ಪ್ರಜಾಪ್ರಭುತ್ವವನ್ನು ಹಣದಿಂದ ಖರೀದಿಸಿ, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಹರಾಜಕತೆ ಸೃಷ್ಠಿ ಮಾಡುತ್ತಿದ್ದಾರೆ ಎಂದು ಆಪಾದಿಸಿ ಜಿಲ್ಲಾ ಜೆಡಿಎಸ್ ನೇತೃತ್ವದಲ್ಲಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

     ಬಿಜಿಎಸ್ ವೃತ್ತದಲ್ಲಿ ಸಮಾವೇಶಗೊಂಡ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ನಾಯಕರ ವಿರುದ್ದ ಘೋಷಣೆಗಳನ್ನು ಕೂಗಿ, ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

     ಬಿಜಿಎಸ್ ವೃತ್ತದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಆರ್ ಸಿ ಆಂಜನಪ್ಪ, ಪ್ರಜಾಪ್ರಭುತ್ವದ ನಿಯಮದ ಪ್ರಕಾರ ಅಧಿಕಾರದಲ್ಲಿರುವ ಸರಕಾರವನ್ನು ಕೆಡವಲು ಬಿಜೆಪಿ ನಾಯಕರು ಆಪರೇಷನ್ ಕಮಲದಂತಹ ಕೃತ್ಯಕ್ಕೆ ಇಳಿದಿರುವುದು ನಾಚಿಕೇಗೇಡಿನ ವಿಚಾರ. ಇದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ದ್ರೋಹ. ಬಿಜೆಪಿ ನಾಯಕರ ನಡವಳಿಕೆ ಖಂಡಿಸಿ, ಅವರ ವಿರುದ್ದ ನಾಗರಿಕರು ಪ್ರತಿಭಟನೆ ನಡೆಸಬೇಕು ಎಂದು

     ರಾಜ್ಯದ ಮೈತ್ರಿ ಸರಕಾರಕ್ಕೆ ನಿರಂತರ ಕಿರುಕುಳ ನಡೆಸುತ್ತಾ, ಕುದುರೆ ವ್ಯಾಪಾರದ ಮೂಲಕ ಸರಕಾರವನ್ನು ಕೆಡವಲು ಮುಂದಾಗಿದೆ. ಪದೇ ಪದೇ ಇದೇ ರೀತಿಯ ಪ್ರಯತ್ನ ಮುಂದುವರೆದರೆ ದೇಶದಾದ್ಯಂತ ಜೆಡಿಎಸ್ ಮತ್ತು ಇತರೆ ಪಕ್ಷಗಳು ಬಿಜೆಪಿ ವಿರುದ್ದ ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ ಎಂದು ಅಂಜನಪ್ಪ ತಿಳಿಸಿದರು.

    ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕೇಂದ್ರ ಸರ್ಕಾರದ ನೆರವಿನೊಂದಿಗೆ ಐ.ಟಿ, ಇಡಿಗಳಂತಹ ಸಂವಿಧಾನಾತ್ಮಕ ಸಂಸ್ಥೆಗಳ ಮೂಲಕ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ, ಅವರಿಗೆ ಬೆದರಿಕೆ ತಂತ್ರವೊಡ್ಡಿ, ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಆಪಾದಿಸಿದರು.

      ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ಹಾಲನೂರು ಆನಂತಕುಮಾರ್ ಮಾತನಾಡಿ, ಶಾಸಕರನ್ನು ಕೊಳ್ಳುವ ಮೂಲಕ ಕುದುರೆ ವ್ಯಾಪಾರ ಆರಂಭಿಸಿರುವ ಬಿಜೆಪಿ ನಾಯಕರು ಪ್ರಜಾಪ್ರಭುತ್ವದ ಆಶಯಗಳನ್ನು ಮಣ್ಣುಪಾಲು ಮಾಡಿದ್ದಾರೆ. ಇದುವರೆಗೂ ಸುಮಾರು 6 ಬಾರಿ ಆಪರೇಷನ್ ಕಮಲದ ಪ್ರಯತ್ನ ನಡೆಸಿದ್ದು, 7ನೇ ಬಾರಿ ಕೆಲ ಶಾಸಕರನ್ನು ಅಪಹರಿಸಿ, ಅಧಿಕಾರದ ಕುರ್ಚಿ ಹಿಡಿಯಲು ಪ್ರಯತ್ನಿಸಿದೆ. ಇದು ಯಾವುದೇ ಪಕ್ಷಕ್ಕೆ ಶೋಭೆ ತರುವಂತಹ ವಿಚಾರವಲ್ಲ ಎಂದರು.

        ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಲತಾ ರವಿಕುಮಾರ್, ಯುವ ಯುವ ಘಟಕದ ಜಿಲ್ಲಾದ್ಯಕ್ಷ ಹಿರೇಹಳ್ಳಿ ಮಹೇಶ್, ಮುಖಂಡರದ ನರಸೇಗೌಡ, ಮಹಾಲಿಂಗಪ್ಪ, ಜಹಂಗೀರ್ ರವೀಶ್, ಬೆಳ್ಳಿ ಲೋಕೇಶ್, ಕೆಂಪರಾಜು, ಕಾಮೇಗೌಡ, ಸೋಲಾರ್ ಕೃಷ್ಣಮೂರ್ತಿ, ಊರುಕೆರೆ ಉಮೇಶ್, ನಗರ ಪಾಲಿಕೆ ಸದಸ್ಯರಾದ ಮಂಜುನಾಥಗೌಡ, ಧರಣೇಂದ್ರಕುಮಾರ್, ನರಸಿಂಹರಾಜು, ಶಶಿಕಲಾ ಅಲ್ಲದೆ, ಭೈರೇಗೌಡ, ಗಂಗಣ್ಣ, ಲೀಲಾವತಿ, ತಹೀರಾಭಾನು, ವಿಷ್ಣುವರ್ಧನ್, ಗಣೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap