ಪಾವಗಡ :-
ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುವಾ ಹಿನ್ನೆಲೆಯಲ್ಲಿ ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ ವಿಶೇಷಸಭೆಯನ್ನು ಅದ್ಯಕ್ಷರಾದ ಸುಮಾಅನಿಲ್‍ರವರು ನಡೆಸಿದರು.
ಪುರಸಭಾ ಅದ್ಯಕ್ಷರ ಅದ್ಯಕ್ಷತೆಯಲ್ಲಿ ನಡೆದಾ ವಿಶೇಷ ಸಭೆಯಲ್ಲಿ 2019-20 ನೇ ಸಾಲಿಗೆ ಹಂಚಿಕೆಯಾಗಿರುವಾ 14 ನೇ ಹಣಕಾಸಿನ 205.22 ಲಕ್ಷಗಳಿಗೆ ಕ್ರೀಯಾ ಯೋಜನೆಯನ್ನು ಸಿದ್ದ ಸಲುವಾಗಿ ವಿಶೇಷ ಸಭೆಯನ್ನು ಕರೆಯಲಾಗಿತ್ತು .ಪುರಸಭಾ ಸದಸ್ಯರಾದ ರಾಜೇಶ್ ಮಾತನಾಡಿ ಹಲವು ವರ್ಷಗಳಿಂದ ಮಳೆಯಿಲ್ಲದ ಕಾರಣ ಪಟ್ಟಣದ ಪುರಸಭೆಯ ಕೋಳವೆ ಬಾಗಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿ 25 ಕೊಳವೆ ಬಾವಿಗಳು ಒಣಗಿದ್ದವು ಜನತೆಯ ಶುದ್ದ ಕುಡಿಯುವಾ ನೀರಿಗೆ ಮೋದಲ ಅದ್ಯತೆ ನೀಡಬೇಕೆಂದು ಅದ್ಯಕ್ಷರ ಗಮನಕ್ಕೆ ತಂದರು.
ಸದಸ್ಯರಾದ ಗೋಪಾಲಕೃಷ್ಣ ಸಭೆಯನ್ನು ಉದ್ದೇಶಿಸಿ ಮಾತನಾಡಿ ಪಟ್ಟಣದ ಹಲವು ವಾರ್ಡ್‍ಗಳಲ್ಲಿ ಬೀದಿದ್ವೀಪ ಆಳವಡಿಸಿದ ಗುತ್ತಿಗೆ ಕಂಪನಿಗೆ ಆರು ತಿಂಗಳು ಕಳೆದರೂ ಹಣವನ್ನು ಬಿಡುಗಡೆ ಮಾಡಿರುವುದಿಲ್ಲ ಎಂದು ಸಭೆಯ ಅದ್ಯಕ್ಷರ ಗಮನಕ್ಕೆ ತಂದಾಗ ಮದ್ಯ ಪ್ರವೇಶಿಸಿದ ನಾಮೀನೆಟೇಡ್ ಸದಸ್ಯರಾದ ರೀಜ್ವನ್ ವುಲ್ಲಾ ಮತ್ತು ಗೋಪಾಲಕೃಷ್ಣ ಮದ್ಯೆ ಮಾತಿನ ಚಕಮಕಿ ನಡೆದು ಎರಡು
ಪಕ್ಷಗಳ ಪ್ರತಿಷ್ಠೆಯಂತೆ ಏರು ದ್ವನಿಯಲ್ಲಿ ಸಭೆಯಲ್ಲಿ ಮಾತನಾಡಿದರು.
ಆರುವರ್ಷಗಳು ನಾವು ಪುರಸಭಾ ಸದಸ್ಯರಾಗಿದ್ದು ಸಂತಸದ ಸಂಗತಿಯಾಗಿದೆ ಎಂದು ಸದಸ್ಯ ಸುಭ್ರಮಣ್ಯಂ ಮಾತನಾಡಿ ನಾವು ಇಷ್ಟು ದೀಘಕಾಲ ಸದಸ್ಯರಾದರೂ ಪುರಸಭೆಗೆ ಆದಾಯ ತರುವಾ ಕೇಲಸವನ್ನು ಮಾಡಿಲ್ಲ , ಈ ಹಿಂದೆ ಅದ್ಯಕ್ಷರಾಗಿದ್ದ ಜಿ.ಎಸ್.ಧರ್ಮಪಾಲ್‍ರವರು ಪುರಸಭೆಗೆ ನೀಡಿದ ಕೋಡುಗೆಯೇ ಇಂದು ನಮಗೆ ಆದಾಯದ ಮೂಲವಾಗಿದೆ ಅದನ್ನು ಹೊರತು ಪಡಿಸಿದರೆ ಬೇರೆನೂ ನಾವು ಮಾಡಿಲ್ಲ ಎಂದು ಕೋನೆಯ ಸಭೆಯಲ್ಲಿ ಮಾಜಿ ಅದ್ಯಕ್ಷರನ್ನು ಸ್ಮರಿಸಿದರು.
ಮುಖ್ಯಾದಿಕಾರಿ ನವೀನ್ ಚಂದ್ರರವರು ಮಾತನಾಡಿ ಹೋಸ 15ಕೋಳವೆ ಬಾಗಿಗಳನ್ನು ಕೋರೆಸಲಾಗುತ್ತಿದ್ದು , ಬರ ಮತ್ತು ಬೇಸಿಗೆಯನ್ನು ಎದುರಿಸಲು 75 ಲಕ್ಷಗಳ ವಿಶೇಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಪುರಸಭೆ ಆವದಿಯ ಕೊನೆಯ ಸಭೆಯನ್ನು ಉದ್ದೇಶಿಸಿ ಅದ್ಯಕ್ಷರಾದ ಸುಮಾಅನಿಲ್‍ರವರು ಮಾತನಾಡಿ ಪಟ್ಟಣದ ಜನತೆಗೆ ಪಕ್ಷಬೇದವಿಲ್ಲದೆ ಅಭಿವೃದ್ದಿ ಪಡಿಸಲಾಗಿದ್ದು , ನನ್ನ ಆವದಿಯಲ್ಲಿ ಸಹಕಾರ ನೀಡಿ ಪುರಸಭೆ ಅಭಿವೃದ್ದಗೆ ಶ್ರಮಿಸಿದ ಎಲ್ಲಾ ಸದಸ್ಯರಿಗೆ ವಂದಿಸಿ ಮತ್ತೋಮ್ಮೆ ಸದಸ್ಯರಾಗಿ ಆಯ್ಕೆಯಾಗಿ ಬನ್ನಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಪಾದ್ಯಕ್ಷರಾದ ನಾಗಲಕ್ಷಮ್ಮ , ಸದಸ್ಯರಾದ ಸುದೇಶ್ ಬಾಬು , ಜಿ.ಎ.ವೆಂಕಟೇಶ್ , ವಿಶ್ವನಾಥ್ , ವಸಂತಕುಮಾರ್ , ಅಂಜನ್ ಕುಮಾರ್ , ಮೇದಾವಿ ನಾಗರಾಜು , ದಾದುಲೂರಪ್ಪ , ರಾಮಾಂಜಿನಪ್ಪ ,ನಾಗೇಂದ್ರ ,ಅನ್ನಪೂರ್ಣ , ಪಾರ್ವತಮ್ಮ , ರತ್ನಮ್ಮ , ವಾಣೆ, ಮಹಲಕ್ಷ್ಮಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








