ಕೊಬ್ಬರಿಗೆ ಕನಿಷ್ಠ 20 ಸಾವಿರ ಬೆಂಬಲ ಬೆಲೆ ನೀಡಿ : ಎಸ್.ಪಿ.ಎಂ

ತಿಪಟೂರು :

     ಕೊಬ್ಬರಿ ಗೆ ಕನಿಷ್ಠ ಇಪ್ಪತ್ತು ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಮಾಜಿ ಸಂಸದ ಮುದ್ದಹನುಮೆಗೌಡ ಸರಕಾರಕ್ಕೆ ಆಗ್ರಹಿಸಿದರು.

    ನಗರದ ಎ.ಪಿ.ಎಂ.ಸಿಯ ಕೊಬ್ಬರಿ ಮಾರುಕಟ್ಟೆಯಲ್ಲಿ ರೈತರ ಹಾಗೂ ವರ್ತಕರು ಜೋತೆ ಬೆಲೆ ಇಳಿಕೆ ಹಾಗೂ ಎ.ಪಿ.ಎಂ.ಸಿ ಕಾಯ್ದೆಯ ಬಗ್ಗೆ ಸಂವಾದ ನಡೆಸಿ ನಂತರ ಎ.ಪಿ.ಎಂ.ಸಿಯ ಆವರಣದಲ್ಲಿ ಇರುವ ರೈತ ಭವನದಲ್ಲಿ ಪತ್ರಿಕಾಗೋಷ್ಠಿ ಮಾಡಿ ಮಾತನಾಡಿದ ಅವರು ಸರಕಾರ ವು ಈಗಾಗಲೇ ಐದು ನೂರು ರೂಪಾಯಿ ಬೆಂಬಲ ಬೆಲೆ ನಿಗದಿಮಾಡಿದ್ದು ಕೊಬ್ಬರಿ ಬೆಲೆ ಒಂಬತ್ತು ಸಾವಿರ ಕ್ಕೆ ಇಳಿದಿದ್ದು ಈ ಕೂಡಲೆ ಕೇಂದ್ರ ಮತ್ತು ರಾಜ್ಯ ಸರಕಾರ ಮದ್ಯ ಪ್ರವೇಶಿಸಿ ಇಪ್ಪತ್ತು ಸಾವಿರ ರೂಗಳನ್ನು ಬೆಂಬಲ ಬೆಲೆ ನಿಗದಿ ಪಡಿಸಿ ರೈತರ ಹಿತಕಾಯಬೇಕು ಎಂದರು.

     ಈ ಹಿಂದೆ ತಿಪಟೂರು ನಗರಕ್ಕೆ ಬೇಟಿ ನೀಡಿದ್ದ ಎರಡು ರಾಷ್ಟ್ರೀಯ ಪಕ್ಷಗಳ ನಾಯಕರುಗಳಾದ ಅಮಿತ್ μÁ, ರಾಹುಲ್ ಗಾಂಧಿ ಕೊಟ್ಟ ಮಾತಿನಂತೆ ತಿಪಟೂರು ಕೊಬ್ಬರಿಗೆ ಸುಮಾರು ಐದು ಸಾವಿರ ರೂ ಬೆಂಬಲ ಬೆಲೆ ನೀಡುತ್ತವೆ ಎಂದು ಭರವಸೆ ನೀಡಿದ್ದರು. ರಾಜ್ಯ ಮತ್ತು ಕೇಂದ್ರದಲ್ಲಿ ಬಿ.ಜೆ.ಪಿ ಸರಕಾರವಿದ್ದರು ತಮ್ಮ ಚುನಾವಣ ಅಶ್ವಾಸನೆಯಂತೆ ನಡೆದುಕೊಂಡಿಲ್ಲ. ರಾಜ್ಯದ 18 ಜಿಲ್ಲೆಯ ರೈತರ ಜೀವನದ ಆದಾರ ತೆಂಗು ಬೆಳೆಯಾಗಿದ್ದು, ರೈತರ ಬದುಕು ಕೊಬ್ಬರಿಯ ಮೇಲೆ ನಿಂತಿದ್ದು ಸರಕಾರ ಈಗಾಲಾದರು ರೂತರು ಬೀದಿಗೆ ಬೀಳುವ ಮುಂಚೆ ಬೆಂಬಲ ಬೇಲೆ ಘೋಷಣೆ ಮಾಡಬೇಕು ತಾವು ಕೊಟ್ಟ ಮಾತಿನಂತೆ ನಡೆದು ಕೊಳ್ಳಬೇಕು ಎಂದರು.

     ರೈತ ಕೃಷಿ ಇಂದ ವಿಮುಕ್ತ ನಾದರೆ ದೇಶಕ್ಕೆ ಅಪಾಯಕಾರಿ ಇಂತಹ ಸಂದರ್ಭ ಬರದಂತೆ ರಾಜ್ಯ ಮತ್ತು ಕೇಂದ್ರ ಸರಕಾರ ಒಟ್ಟು ಗೂಡಿ ರೈತರ ಹಿತಕಾಯುವಂತಹ ಕಾಯ್ದೆ ಗಳನ್ನು ಜಾರಿಗೆ ತರಬೇಕು, ಸರಕಾರ ಇತ್ತಿಚೆಗೆ ಹೊರಡಿಸಿರುವ ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆಯನ್ನು ತಂದಿದ್ದು ರೈತರ ಬದುಕನ್ನು ಹಾಗೂ ಮುಕ್ತ ಮಾರುಕಟ್ಟೆಯನ್ನು ಎಂ.ಎನ್,ಸಿ ಕಂಪೆನಿಗಳಿಗೆ ಕೊಟ್ಟು ಎಲ್ಲರ ಬದುಕನ್ನು ಅತಂತ್ರ ಸ್ಥಿತಗೆ ತಳ್ಳಿದೆ ಈ ಕೂಡಲೇ ಈ ಕಾಯ್ದೆಯನ್ನು ರದ್ದುಗೊಳಿಸಿ ಸರಕಾರ ಮಾರುಕಟ್ಟೆ ಗಳನ್ನು ಉಳಿಸುವ ಮೂಲಕ ರೈತನನ್ನು ಉಳಿಸಬೇಕು ಎಂದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಿ.ಬಿ ಶಶಿಧರ್, ಮಾಜಿ ತಾ.ಪಂ ಅಧ್ಯಕ್ಷ ಪರಮಶಿವಯ್ಯ, ಮಾ.ಜಿ.ಪಂ ಸದಸ್ಯ ತ್ರಿಯಂಭಕ, ಬೆಲೆ ಕವಲು ಸಮಿತಿ ಅಧ್ಯಕ್ಷ ಶ್ರೀಕಾಂತ್, ರಾಯಸಂದ್ರ ರವಿ ಮತ್ತಿತರರು ಭಾಗವಹಿಸಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link