ಬೆಂಗಳೂರು
ಟ್ವಿಟ್ಟರ್ನಲ್ಲಿ ಸದಾ ಕ್ರಿಯಾಶೀಲವಾಗಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಜನಸ್ನೇಹಿ ಟ್ವೀಟ್ ಮಾಡುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದರಲ್ಲಿ ಎತ್ತಿದ ಕೈ.ಈಗ ಆಯುಕ್ತರು, ಸೈಬರ್ ಕ್ರೈಮ್ ತಡೆಗಟ್ಟಲು ಜನರು ಏನು ಮಾಡಬೇಕು ಎಂಬುದರ ಕುರಿತು ಸರಳ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಭಾಸ್ಕರ್ ರಾವ್ , ಸೈಬರ್ ಕ್ರೈಂ ತಡೆಯಲು ಮೊದಲ ಹೆಜ್ಜೆ , ನಿಮ್ಮ ಮೊಬೈಲ್ ನಂಬರ್ಗಳನ್ನು ಮಾಲ್ ಅಥವಾ ಶಾಪ್ಗಳಲ್ಲಿ ಶೇರ್ ಮಾಡಬೇಡಿ. ಅವರು ಕೇಳಿದರೂ ನಂಬರ್ ಕೊಡುವುದಕ್ಕೆ ನಿರಾಕರಿಸಿ. ಏಕೆಂದರೆ, ನಿಮ್ಮ ನಂಬರ್ ಡೇಟಾ ಆಗಿ ಮಾರಾಟವಾಗುತ್ತದೆ. ಹೀಗಾಗಿ ಸೈಬರ್ ವಂಚನೆಗೆ ನೀವೇ ಬಾಗಿಲು ತೆರೆದಂತೆ ಆಗುತ್ತದೆ. ಆದ್ದರಿಂದ ಮೊಬೈಲ್ ಫೋನ್ ನಂಬರ್ ಅನ್ನು ಶೇರ್ ಮಾಡಬೇಡಿ ಕೊಳ್ಳಬೇಡಿ ಎಂದು ಬರೆದುಕೊಳ್ಳವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ