ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಬಾರದು :ಎಚ್.ಆರ್ ತಿಮ್ಮಯ್ಯ

ಹಿರಿಯೂರು :

         ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಬಾರದು, ಕೃಷಿಯಲ್ಲಿ ನೂತನ ಆವಿಷ್ಕಾರಗಳನ್ನು ಅಳವಡಿಸುವ ಮೂಲಕ ಕೃಷಿಯನ್ನು ಲಾಭದಾಯಕವಾಗಿ ಮಾಡಿಕೊಳ್ಳಿ ಎಂಬುದಾಗಿ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ ಹೇಳಿದರು.
ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

       ತಾಲ್ಲೂಕಿನಲ್ಲಿ ಆರೇಳು ವರ್ಷಗಳಿಂದ ಸಕಾಲದಲ್ಲಿ ಮಳೆ-ಬೆಳೆಯಾಗದ ಕಾರಣ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ವಾಣಿವಿಲಾಸ ಜಲಾಶಯ ಬತ್ತಿರವುದರಿಂದ ತೋಟದ ಬೆಳೆಗಾರು ನಿದ್ದೆಗೆಟ್ಟಿದ್ದಾರೆ. ಸರ್ಕಾರ ಕಾಲಮಿತಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಜಲಾಶಯಕ್ಕೆ ನೀರು ಹರಿಸಿದರೆ ಮಾತ್ರ ಇಲ್ಲಿನ ರೈತರ ಬದುಕು ಹಸನಾಗಲು ಸಾದ್ಯ ಎಂದರು.

      ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹೊರೆಕೇರಪ್ಪ, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸಿಕ್ಕರೆ ಮಾತ್ರ ರೈತರು ಬದುಕುಳಿಯಲು ಸಾದ್ಯ. ಸರ್ಕಾರ ಕೈಗೊಳ್ಳುವ ತೀರ್ಮಾನಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನುಕೂಲವಾಗುವಂತಿತಬೇಕು ಎಂದರು.
ಕಸಬಾ ರೈತ ಸಂಪರ್ ಕೇಂದ್ರದ ಕೃಷಿ ಅಧಿಕಾರಿ ಉಮೇಶ್ ಮಾತನಾಡಿ, ಮಾಜಿ ಪ್ರಧಾನಿ ದಿ.ಚೌಧರಿ ಚರಣ್ ಸಿಂಗ್ ಜನ್ಮದಿನದ ಅಂಗವಾಗಿ ರೈತ ದಿನಾಚರಣೆ ಆಚರಿಸಲಾಗುತ್ತಿದು ರೈತರಲ್ಲಿ ಧೈರ್ಯ ಆತ್ಮ ಸ್ಥೈರ್ಯ ತುಂಬುವುದು ಈ ದಿನಾಚರಣೆ ಉದ್ದೇಶವಾಗಿದೆ ಎಂದರು

         ಇದೇ ಸಂದರ್ಭದಲ್ಲಿ ತಾಲ್ಲೂಕಿನ ಪ್ರಗತಿಪರ ರೈತ ವೇದಮೂರ್ತಿ, ಮ್ಯಾದನಹೊಳೆಯ ಸಿದ್ದೇಶ್ ಹಾಗೂ ವದ್ದೀಗೆರೆ ನಾಗವೇಣಿ ಇವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರದಲ್ಲಿ ಸಹಾಯಕ ಕೃಷಿ ನಿರ್ದೇಶಕ ಡಾ.ಅಸ್ಲಂ, ಕೃಷಿ ವಿಜ್ಞಾನಿ ಡಾ.ಶರಣಪ್ಪ ಜಂಗಂಡಿ ನಿವೃತ್ತ ಕೃಷಿ ಅಧಿಕಾರಿ ಮಂಜುನಾಥರೆಡ್ಡಿ, ರೈತ ಮುಖಂಡ ಮಂಜುನಾಥ್, ತಾಂತ್ರಿಕ ವ್ಯವಸ್ಥಾಪಕ ವಂಕಟೇಶ್ ಉಪಸ್ಥಿತರಿದ್ದರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap