ಇಂದಿನಿಂದ ರಾಜ್ಯದಲ್ಲಿ ಕೆಪಿಸಿಸಿ ಸತ್ಯಶೋಧನ ಸಮಿತಿ ಪ್ರವಾಸ…!!

ಬೆಂಗಳೂರು

      ಲೋಕಸಭಾ ಚುನಾವಣೆ ಸೋಲಿನ ಹಿನ್ನೆಲೆ ಕಾಂಗ್ರೆಸ್ ಸೋಲಿನ ಪರಾಮರ್ಶೆಗೆ ಕಾಂಗ್ರೆಸ್ ತಂಡ ಪ್ರವಾಸ ಆರಂಭಿಸಿದೆ. ಸತ್ಯಶೋಧನ ಸಮಿತಿ ಮಂಗಳವಾರದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ನಡೆಸಿ, ಕೆಪಿಸಿಸಿ ಅಧ್ಯಕ್ಷರಿಗೆ ವರದಿ ನೀಡಲಿದೆ. ಮಂಗಳವಾರ ನಜೀರ್ ಅವರ ನೇತೃತ್ವದಲ್ಲಿ ಸತ್ಯಶೋಧನ ಸಮಿತಿ ಪ್ರವಾಸ ಆರಂಭಿಸಿದ್ದು, ಸೋಮವಾರ ಸೋಲಿನ ಪರಾಮರ್ಶೆಗೆ ತಂಡದ ಸದಸ್ಯರು ಏನು ಮಾಡಬೇಕು ಎಂಬ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.

      ಪ್ರತಿ ಜಿಲ್ಲೆ, ವಿಧಾನಸಭಾ ಕ್ಷೇತ್ರಕ್ಕೆ ಪ್ರವಾಸ ತೆರಳಲಿರುವ ತಂಡ, ಸ್ಥಳೀಯ ಮುಖಂಡರನ್ನು ಭೇಟಿ ಮಾಡಿ ಸೋಲಿಗೆ ಕಾರಣಗಳನ್ನು ಕೆಪಿಸಿಸಿಗೆ ನೀಡಲಿದೆ. ಮಂಗಳವಾರ ಬೀದರ್, ಗುಲಬರ್ಗ, ರಾಯಚೂರಿನಲ್ಲಿ ಮೊದಲ ಹಂತದ ಸೋಲಿನ ಪರಾಮರ್ಶೆ ನಡೆಯಲಿದೆ.

      ಲೋಕಸಭಾ ಚುನಾವಣೆ ಬಳಿಕ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಿದೆ. ಆದರೆ ಲೋಕಸಭೆಯಲ್ಲಿ ಗೆಲುವು ಏಕೆ ಸಾಧ್ಯವಾಗಲಿಲ್ಲ ಎಂಬ ಅವಲೋಕನಕ್ಕೆ ಕಾಂಗ್ರೆಸ್ ರಾಜ್ಯ ಪ್ರವಾಸ ಮಾಡುವ ಮೂಲಕ ನೈಜ ಮಾಹಿತಿ ಕಲೆ ಹಾಕಲಿದೆ. ಕೆಪಿಸಿಸಿ ಸಮಿತಿಗಳನ್ನು ರಚಿಸುವ ಮುನ್ನ ರಾಜ್ಯದಲ್ಲಿ ಪಕ್ಷದ ಸ್ಥಿತಿ ಏನಿದೆ ಏನಾಗಬೇಕು ಎಂಬುದನ್ನು ಅರಿತು ಬಳಿಕ ವಿಭಾಗಗಳನ್ನು ರಚಿಸಲಿದೆ.

     ಮತ್ತೊಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಜನಸಂಪರ್ಕ ಸಭೆಗಳನ್ನು ನಡೆಸಿ ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರಲ್ಲಿ ಚುರುಕು ಮುಟ್ಟಿಸುವ ಕೆಲಸ ಮಾಡಲಿದ್ದಾರೆ. ಹಾಗೂ ಕಾಂಗ್ರೆಸ್ ಸಚಿವರು ಸಹ ಜಿಲ್ಲಾ ಪ್ರವಾಸ ಮಾಡುವ ಮೂಲಕ ಲೋಕಸಭಾ ಚುನಾವಣೆ ಸೋಲಿಗೆ ನೈಜ ಕಾರಣಗಳ ಕುರಿತು ಕೆಪಿಸಿಸಿಗೆ ವರದಿ ನೀಡಲಿದ್ದಾರೆ. ಆಡಳಿತ ಯಂತ್ರ ಚುರುಕಾಗಿ ಕೆಲಸ ಮಾಡಲು ಪಕ್ಷದ ಸಚಿವರು ಶಾಸಕರು ಚುರುಕಾಗಿ ಕೆಲಸ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ನಿರ್ದೇಶಿಸಿದ್ದಾರೆ.

      ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1500ಕ್ಕೂ ಹೆಚ್ಚು ಕಾಂಗ್ರೆಸ್ ಅಭ್ಯರ್ಥಿಗಳು, ನಗರ,ಪೌರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದಾರೆ. ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಸನ್ಮಾನ ಮಾಡಲು ಆ.16 ರಂದು ಅಭಿನಂದನಾ ಸಭೆ ನಡೆಸಲಾಗುತ್ತಿದೆ. ಜು 26 ರಂದು ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ 21 ಅಭ್ಯರ್ಥಿಗಳ ಜೊತೆ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಚುನಾವಣೆಗೆ ಸೋಲುಂಟಾಗಲು ಕಾರಣ, ಪಕ್ಷ ಸಂಘಟನೆ, ಚುನಾವಣೆ ಸಂದರ್ಭದಲ್ಲಾದ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ ಎಂದರು.

      ಕೆಪಿಸಿಸಿಗೆ ಸಮಿತಿಗಳ ರಚನೆ, ರಾಜ್ಯಾದ್ಯಂತ ಪಕ್ಷ ಸಂಘಟನೆ, ಕಾರ್ಯಕರ್ತರಲ್ಲಿ ಹುರುಪು ತುಂಬಲು ಏನು ಮಾಡಬೇಕು ಎಂಬುದನ್ನು ಸತ್ಯಶೋಧನ ಸಮಿತಿ ಮಾಡಲಿದೆ. ಲೋಕಸಭೆ ಚುನಾವಣೆ ಸೋಲಿಗೆ ಊಹಾಪೋಹ, ಅನಾವಶ್ಯಕ ಹೇಳಿಕೆಗಳನ್ನು ಹೊರತು ಪಡಿಸಿ ಸೋಲಿಗೆ ನಿಜವಾದ ಕಾರಣ ಸತ್ಯಾಂಶ ಏನು ಎಂಬುದನ್ನು ಅರಿಯಬೇಕಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link