ಹಾವೇರಿ :
ಇಲ್ಲಿನ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜ್‍ಗೆ ಪ್ರತಿ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಬರುತ್ತಾರೆ. ಕಾಲೇಜ್‍ಗೆ ಬರುವ ವಿದ್ಯಾರ್ಥಿಗಳಲ್ಲಿ ಸುಮಾರು ಐದರಿಂದ ಆರು ನೂರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ದ್ವಿಚಕ್ರ ವಾಹನಗಳನ್ನು ತರುತ್ತಾರೆ. ಆದರೆ ಪ್ರಸಕ್ತ ಈ ವಿದ್ಯಾರ್ಥಿ ಗಳಾರೂ ಕಾಲೇಜ್ ಆವರಣದ ಒಳಗಡೆ ದ್ವಿಚಕ್ರ ವಾಹನಗಳನ್ನು ನಿಲ್ಲಿದೇ ಅವರೆಲ್ಲ ಕಾಲೇಜ್ ಕಂಪೌಂಡ ದಿಂದ ಹೊರಗಡೆ ನಿಲ್ಲಿಸುತ್ತಿದ್ದಾರೆ.
ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಕಾಲೇಜ್ ಮುಂಭಾಗದಲ್ಲಿರುವ ಹೆದ್ದಾರಿ ಪಕ್ಕದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವಂತಾಗಿದೆ.ಈ ಕಾಲೇಜ್ ಮುಂಭಾಗದಲ್ಲಿರುವ ಕಂಪೌಂಡಗೆ ಹೊಂದಿಕೊಂಡು ಹೆದ್ದಾರಿಗೆ ಹಚ್ಚಿಕೊಂಡು ವಿದ್ಯಾರ್ಥಿ ವಿದ್ಯಾರ್ಥಿನಿಯರು ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಈ ರಸ್ತೆಯ ಮೇಲೆ ಹೋಗುವುದಕ್ಕೆ ಬಹಳ ಅಡಚಣೆ ಆಗುತ್ತಿದೆ.
ವಿದ್ಯಾರ್ಥಿಗಳಿಗೆ ಕಂಪೌಂಡ ಹೊರಗಡೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದಕ್ಕೂ ಸ್ಥಳಾವಕಾಶ ಸರಿಯಾಗಿ ಇಲ್ಲದ ಕಾರಣಕ್ಕೆ ಅವರೆಲ್ಲ ಕಾಲೇಜ್ ಮುಂಭಾಗದಲ್ಲೇ ಹಾದು ಹೋಗಿರುವ ಹೆದ್ದಾರಿಗೆ ಹೊಂದಿಕೊಂಡು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ತರಗತಿಗಳಿಗೆ ಹೋಗುತ್ತಿರುವರು.
ಈ ರಸ್ತೆಯಲ್ಲಿ ವಾಹನಗಳ ಸಂಚಾರ ಅಧಿಕವಾಗಿರುವ ಹಿನ್ನಲೆಯಲ್ಲಿ ಪಾದಚಾರಿಗಳಿಗೆ ತೊಂದರೆ ಆಗದಂತೆ ಲಕ್ಷಾಂತರ ರೂಗಳ ವೆಚ್ಚದಲ್ಲಿ ಫೆವರ್‍ಗಳನ್ನು ಅಳವಡಿಸಿ ಫುಟ್ ಪಾಥ್ ನಿರ್ಮಾಣ ಮಾಡಲಾಗಿದೆ. ಆದರೆ ಪಾದಚಾರಿಗಳಿಗೆ ಮಾತ್ರ ಈ ಫುಟ್ ಪಾಥ್ ಬಳಕೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಇದಕ್ಕೆ ಪ್ರಮುಖ ಕಾರಣ ಈ ಕಾಲೇಜ್‍ನ ವಿದ್ಯಾರ್ಥಿಗಳು ಈ ಫುಟ್ ಪಾಥ್ ಮೇಲೆನೂ ಸಹ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ.
ಕಾಲೇಜ್ ಮುಂಭಾಗದಲ್ಲಿರುವ ರಸ್ತೆಯಲ್ಲಿ ತಿರುವು ಇರುವುದರಿಂದ ಪಾದಚಾರಿಗಳಲ್ಲದೇ ವಾಹನ ಸವಾರರು ಬಹಳ ಎಚ್ಚರಿಕೆಯಿಂದ ಸಂಚರಿಸಬೇಕಾಗುತ್ತದೆ. ಈ ರಸ್ತೆಯಲ್ಲಿ ಇಂತಹ ತೊಂದರೆಗಳಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಫುಟ್ ಪಾಥ್ ಮೇಲೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದರಿಂದ ಪಾದ ಚಾರಿಗಳಲ್ಲದೆ ವಾಹನ ಸವಾರರು ಭಯದಿಂದಲೇ ಸಾಗಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ.
ಕಾಲೇಜ್ ಆಡಳಿತ ಮಂಡಳಿ ತಮ್ಮ ಕಾಲೇಜ್ ಬರುವ ವಿದ್ಯಾರ್ಥಿಗಳ ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆಯನ್ನು ಮಾಡಬೇಕಾದದ್ದು ಕಾಲೇಲ್ ಆಡಳಿತ ಮಂಡಳಿಯ ಆದ್ಯ ಕರ್ತವ್ಯ. ಹೀಗಿದ್ದರೂ ಕಾಲೇಜ್ ಆಡಳಿತ ಮಂಡಳಿ ವ್ಯವಸ್ಥೆ ಮಾಡದಿರುವುದು ವಿಪರ್ಯಾಸದ ಸಂಗತಿ.
ನಾವು ಕಾಲೇಜ್ ಆವರಣದ ಹೊರಗಡೆ ದ್ವಿಚಕ್ರವಾಹನ ನಿಲ್ಲಿಸುತ್ತಿರುವುದರಿಂದ ವಾಹನಕ್ಕೆ ಯಾವುದೇ ರೀತಿಯ ಭದ್ರತೆ ಇಲ್ಲದಿರುವುದು ನಮ್ಮನ್ನು ಕಾಡುತ್ತಿದೆ. ಈ ವಿಷಯವನ್ನು ಆಡಳಿತ ಮಂಡಳಿಯ ಗಮನಕ್ಕೆ ತರುವುದಕ್ಕೆ ಮುಂದಾದರೆ ಎಲ್ಲಿ ನಮ್ಮನ್ನು ಕಾಲೇಜ್ ದಿಂದ ಹೊರ ಹಾಕುತ್ತಾರೆ ಎಂಬ ಅಂಜಿಕೆ ಆಗುತ್ತಿದೆ ಹೀಗಾಗಿ ಸುಮ್ಮನಿದ್ದೇವೆ ಎಂಬ ಮಾತುಗಳು ಕೇಳಬಹುದಾಗಿದೆ.
ಈ ಕಾಲೇಜ್ ನ್ಯಾಕ್ ಮಾನ್ಯತೆಯನ್ನು ಪಡೆದುಕೊಂಡಿದೆ. ಇಷ್ಟೆಲ್ಲ ತೊಂದರೆಗಳಿದ್ದರೂ ಈ ಕಾಲೇಜ್‍ಗೆ ನ್ಯಾಕ್ ಮಾನ್ಯತೆಯನ್ನು ಹೇಗೆ ನೀಡಲಾಯಿತು ಎನ್ನುವ ಈಗ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ ಎಂದರೆ ತಪ್ಪಾಗಲಾರದು. ಇನ್ನಾದರೂ ಕಾಲೇಜ್ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ದ್ವಿಚಕ್ರ ವಾಹನ ನಿಲ್ಲಲು ವ್ಯವಸ್ಥೆ ಮಾಡತ್ತಾರಾ ? ಕಾದು ನೋಡುವಂತಾಗಿದೆ.