ಪ್ರತಿ ಜಿಲ್ಲೆಗಳಲ್ಲಿ ಕ್ರೀಡಾ ನಿಲಯ ಆರಂಭಕ್ಕೆ ಒತ್ತಾಯ

ದಾವಣಗೆರೆ:

       ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಸಲುವಾಗಿ ಪ್ರತಿ ಜಿಲ್ಲೆಗಳಲ್ಲಿ ಮಹಿಳೆಯರ ಮತ್ತು ಪುರುಷರ ಕ್ರೀಡಾನಿಲಯಗಳನ್ನು ಆರಂಭಿಸುವತ್ತರ ಸರ್ಕಾರ ಸರ್ಕಾರ ಗಮನ ಹರಿಸಬೇಕೆಂದು ಮಾಜಿ ಶಾಸಕ ಕೆ.ಮಲ್ಲಪ್ಪ ಒತ್ತಾಯಿಸಿದರು.

       ನಗರದ ಪಿ.ಬಿ. ರಸ್ತೆಯ ಶ್ರೀಬೀರೇಶ್ವರ ವ್ಯಾಯಾಮ ಶಾಲೆಯಲ್ಲಿ ಶನಿವಾರ ಕರ್ನಾಟಕ ರಾಜ್ಯ ಬಾಡಿ ಲಿಫ್ಟಿಂಗ್ ಮತ್ತು ಸ್ಟ್ರೆಂಥ್ ಲಿಫ್ಟಿಂಗ್ ಅಸೋಸಿಯೇಷನ್ ಹಾಗೂ ಶ್ರೀಬೀರೇಶ್ವರ ವ್ಯಾಯಾಮ ಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಬಾಡಿ ಲಿಫ್ಟಿಂಗ್ ಹಾಗೂ ಸ್ಟ್ರೆಂಥ್ ಲಿಫ್ಟಿಂಗ್ ಚಾಂಪಿಯನ್‍ಶಿಪ್-2018 ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

       ಸರ್ಕಾರ ಎಲ್ಲಾ ಜಿಲ್ಲೆಗಳಲ್ಲೂ ಕ್ರೀಡಾ ನಿಲಯಗಳನ್ನು ಪ್ರಾರಂಭಿಸುವ ಮೂಲಕ ಯುವ ಜನಾಂಗಕ್ಕೆ ಕ್ರೀಡೆಯಲ್ಲಿ ಭಾಗವಹಿಸಲು ಉತ್ತೇಜನ ನೀಡುವ ಮೂಲಕ ಕ್ರೀಡಾ ಕ್ಷೇತ್ರವನ್ನು ಉಳಿಸಿ ಬೆಳೆಸಬೇಕೆಂದು ಆಗ್ರಹಿಸಿದರು.

         ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಸರ್ಕಾರ ಇದ್ದಾಗ ತಾವು ಕ್ರೀಡಾಪಟುಗಳಿಗೆ ಮಾಸಾಶನ ನೀಡಬೇಕು ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದ್ದೇವು. ಅದರಂತೆ ಕ್ರೀಡಾಪಟುಗಳಿಗೆ ಮಾಸಾಶನ ನೀಡುವುದರ ಜೊತೆಗೆ ಕೆಲ ಕ್ರೀಡೆಗಳ ಕ್ರೀಡಾಪಟುಗಳಿಗೆ ಉದ್ಯೋಗದಲ್ಲಿ ಮೀಸಲಾತಿಯನ್ನು ನಿಗದಿ ಮಾಡಿತು. ಅದರಂತೆ ಶಾಲಾ-ಕಾಲೇಜು ಹಂತದಿಂದಲೇ ಕ್ರೀಡೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಇನ್ನಷ್ಟು ಸೌಲಭ್ಯಗಳನ್ನು ನೀಡಿದರೆ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕ್ರೀಡಾಪಟುಗಳಾಗಿ ಹೊರಹೊಮ್ಮಲು ಸಹ ಸಾಧ್ಯವಾಗಲಿದೆ ಎಂದರು.

       ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ಮಾತನಾಡಿ, ವಿವಿಧ ಕಾರಣಗಳಿಂದಾಗಿ ಕ್ರೀಡಾಪಟುಗಳು ಕಷ್ಟಪಡುತ್ತಿದ್ದು, ಬೇರೆ ದೇಶಗಳಲ್ಲಿ ಕ್ರೀಡಾಪಟುಗಳನ್ನು ಪೋಷಿಸುವಂತೆ ನಮ್ಮ ದೇಶದ ಉದ್ಯಮಿಗಳು, ಕಂಪೆನಿಗಳು ಕ್ರೀಡಾಪಟುಗಳನ್ನು ಕೆಲಸಕ್ಕೆ ತೆಗೆದುಕೊಳ್ಳು ಮೂಲಕವೋ, ದತ್ತು ಪಡೆಯುವ ಮೂಲಕವೋ ಕ್ರೀಡಾಪಟುಗಳನ್ನು ಪೋಷಿಸಿ ಪ್ರೋತ್ಸಸಾಹಿಸಬೇಕೆಂದು ಸಲಹೆ ನೀಡಿದರು.
ಹಿಂದೆ ಬೆಂಗಳೂರು ಮತ್ತು ಮೈಸೂರು ನಗರಗಳಿಂದ ಮಾತ್ರ ರಾಷ್ಟ್ರತಂಡಕ್ಕೆ ಕ್ರೀಡಾಪಟುಗಳು ಆಯ್ಕೆಯಾಗುತ್ತಿದ್ದವು. ಆದರೆ, ಈಗ ದಾವಣಗೆರೆ ಸೇರಿದಂತೆ ಇತರೆ ನಗರಗಳಿಂದಲೂ ರಾಷ್ಟ್ರ ತಂಡಕ್ಕೆ ಕ್ರೀಡಾಪಟುಗಳು ಆಯ್ಕೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

         ಕ್ರೀಡಾಪಟುಗಳಿಗೆ ಸರ್ಕಾರ ಆಯೋಜಕರು ಮತ್ತು ಪಾಲಿಕೆ  ನೀಡಿದರೆ ರಾಷ್ಟ್ರಮಟ್ಟಕ್ಕೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿ ನೀಡಬೇಕು. ಬೀರಲಿಂಗೇಶ್ವರ ವ್ಯಾಯಾಮ ಶಾಲೆ ರಾಜ್ಯದಲ್ಲೇ ಒಳ್ಳೆಯ ಹೆಸರು ಪಡೆದಿದೆ. ಇಲ್ಲಿ ತರಬೇತಿ ಪಡೆದ ಕ್ರೀಡಾಪಟುಗಳು ಬ್ಯಾಂಕಿಂಗ್ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿದ್ದಾರೆ ಎಂದರು.
ಮಾಜಿ ನಗರಸಭಾ ಸದಸ್ಯ ಜೆ.ಕೆ.ಕೊಟ್ರಬಸಪ್ಪ ಮಾತನಾಡಿ, ವ್ಯಾಯಾಮ ಶಾಲೆಗೆ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಕ್ರೀಡಾ ಸಚಿವರಾಗಿದ್ದಾಗ ಸಾಕಷ್ಟು ಸಹಾಯ ಮಾಡಿದ್ದರು.

       ಅಂತಹ ವ್ಯಕ್ತಿಗಳು ಬರುವುದು ಬಹಳ ವಿರಳವಾಗಿದೆ. ಈಗ ವ್ಯಾಯಾಮ ಶಾಲೆಗೆ ಮಲ್ಟಿ ಜಿಮ್ ವ್ಯವಸ್ಥೆ ಆಗಬೇಕಿದೆ. ಹೊಸ ಪರಿಕರಗಳು ಬೇಕಾಗಿದ್ದು, ಇವುಗಳನ್ನು ನೀಡುವ ಮೂಲಕ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡಬೇಕು. ವೇಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್‍ಗಳಲ್ಲಿ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕ್ರೀಡಾಪಟುಗಳ ಅರ್ಹತೆಯ ಮೇಲೆ ಮಹಾನಗರ ಪಾಲಿಕೆಯಲ್ಲಿ ಕೆಲಸಕ್ಕೆ ತಗೆದುಕೊಳ್ಳಬೇಕೆಂದು ಮನವಿ ಮಾಡಿದರು.

         ಮಹಾನಗರ ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟೆ ಕಾರ್ಯಕ್ರಮ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟು, ಎಎಸ್‍ಐ ಅಕ್ರಮ್‍ಭಾಷಾ, ಗುರುಸ್ವಾಮಿ, ಧನಂಜಯ್, ನಾಗರಾಜ್, ಪ್ರಸಾದ್, ಗೋಪಾಲ್, ದಾದಾಪೀರ್ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link