ಹರಿಹರ
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುವ ಸರ್ಕಾರಿ ಸೌಲಭ್ಯ ಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಜಿಲ್ಲಾ ಕ್ಷಯರೋಗ ನಿಯಂತ್ರಣಾ ಧಿಕಾರಿ ಡಾ.ಡಿ.ಜಿ.ರಾಘವನ್ ಕರೆ ಕೊಟ್ಟರು.
ಅವರು ನಗರದ ದಾಮೋದರ ಮಂಜುನಾಥ ಪೈ ಸಾರ್ವಜನಿಕ ಆಸ್ಪತ್ರೆಗೆ ಕ್ಷಯರೋಗಕ್ಕೆ ಸಂಬಂಧಿ ಸಿದ ರೋಗಿಗಳ ಪರಿಶೀಲನೆಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದರು.ಜಿಲ್ಲೆಯ ನಗರ ಪ್ರದೇಶಗಳಲ್ಲಿ 51ಜನ ರೋಗಿಗಳು ಮತ್ತು ಬಹು ಔಷಧಿ ನಿರೋಧಕ 6 ಜನ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವುದಾಗಿ ಅವರು ತಿಳಿಸಿದರು.
2014 ರ ಏಪ್ರಿಲ್ 1 ರಿಂದ ಇಲ್ಲಿಯ ತನಕ 261 ರೋಗಿಗಳನ್ನು ಪತ್ತೆ ಹಚ್ಚಲಾಗಿದ್ದು,ಸದ್ಯಕ್ಕೆ188 ಜನ ರೋಗಿಗಳು ಇದ್ದು ಅವರುಗಳು ಸರ್ಕಾರಿ ಆಸ್ಪತ್ರೆ ಗಳಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.ಮತ್ತು ಚೇತರಿಸಿಕೊಂಡು ನಿಧಾನವಾಗಿ ಗುಣಮುಖ ರಾಗುತ್ತಿದ್ದಾರೆ . ಕ್ಷಯ ರೋಗ ಪತ್ತೆ ಹಚ್ಚಲು ಸರ್ಕಾರದಿಂದ ಹೊಸ ತಂತ್ರಜ್ಞಾನದ CBNAAT ಉಪಕರಣವನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಪಯೋಗಿ ಸಲಾಗುತ್ತಿದ್ದು, ಈಗಾಗಲೇ ಕ್ಷಯರೋಗ ನಿಯಂತ್ರಣ ಸಂಸ್ಥೆಯಿಂದ ಸಬ್ಸಿಡಿ ದರದಲ್ಲಿ ಖರೀದಿಸಿ ಹರಿಹರ ಆಸ್ಪತ್ರೆಗೂ ಸಹ ಶೀಘ್ರದಲ್ಲಿ ಉಪಕರಣವನ್ನು ಪೂರೈಸಲಾಗು ವುದು.
ಇದೇ ಉಪಕರಣದಿಂದ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆಗೆ ರೂ 1100/- ಪಡೆಯಲಾಗುತ್ತಿದೆ ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ತಪಾ ಸಣೆ ಮಾಡಲಾಗುವುದು ಆದ್ದರಿಂದ ರೋಗಿಗಳು ಹಾಗೂ ಸಾರ್ವಜನಿಕರು ಇದರ ಸೌಲಭ್ಯ ಪಡೆಯಿರಿ ಎಂದು ಹೇಳಿದರು.
ಆಸ್ಪತ್ರೆಗೆ ಬರುವ ರೋಗಿಗಳು ಸಾರ್ವಜನಿಕರು ಆರೋಗ್ಯವಂತರಾಗಬೇಕಾದರೆ ಇಲ್ಲಿನ ವಾತಾ ವರಣ ಸ್ವಚ್ಛವಾಗಿರಬೇಕು, ಅದಕ್ಕೆ ಎಲ್ಲ ಸಿಬ್ಬಂದಿ ಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಹೇಳಿದ ಅವರು, ಅದರಂತೆ ಇಲ್ಲಿನ ಆಸ್ಪತ್ರೆಯು ಸಹ ಸ್ವಚ್ಛ ವಾಗಿದೆ ಎಂದು ಹರ್ಷ ವ್ಯಕ್ತಪಡಿಸಿ ಸಿಬ್ಬಂದಿಗಳನ್ನು ಶ್ಲಾಘಿಸಿದರು.
ನಂತರ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಎಲ್.ಹನುಮಾ ನಾಯಕ್ ಮಾತನಾಡಿ ನಮ್ಮ ಕರ್ನಾಟಕ ರಾಜ್ಯದ ಹೃದಯ ಭಾಗವಾದ ದಾವಣಗೆರೆ ಜಿಲ್ಲೆಯ ಹರಿಹರದ ಸಾರ್ವಜನಿಕ ಆಸ್ಪತ್ರೆಗೆ ಸಾಕಷ್ಟು ಪ್ರಮಾಣದಲ್ಲಿ ಹೊರ ಮತ್ತು ಒಳ ರೋಗಿಗಳು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.ಅಲ್ಲದೆ ಮೂತ್ರಪಿಂಡ ಪೀಡಿತರಿಗಾಗಿ ಇರುವ ಡಯಾಲಿಸಿಸ್ ಕೇಂದ್ರದಲ್ಲಿ ರೋಗಿಗಳು ಚಿಕಿತ್ಸೆ ಯನ್ನು ಪಡೆಯುತ್ತಿದ್ದಾರೆ ಮತ್ತು ತುರ್ತು ನಿಗಾ ಘಟಕ (ಐ.ಸಿ.ಯು) ಕಾರ್ಯ ನಿರ್ವಹಣೆಗೆ ಸಿದ್ಧತೆ ಮಾಡಲಾಗುತ್ತಿದೆ.
ಘಟಕಕ್ಕೆ ವೈದ್ಯರುಗಳು ಹಾಗು ತಾಂತ್ರಿಕ ಸಿಬ್ಬಂದಿಗಳ ನೇಮಕಕ್ಕೆ ಹರಿಹರದ ಶಾಸಕರಾದ ಎಸ್.ರಾಮಪ್ಪ, ಆರೋಗ್ಯ ಸಚಿವರಿಗೆ ಹಾಗು ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಲಿಖಿತ ಬೇಡಿಕೆಯನ್ನು ರವಾನಿಸಲಾಗಿದ್ದು ಆದಷ್ಟು ಬೇಗನೆ NHM ಅಡಿಯಲ್ಲಿ MBBS ವೈದ್ಯರುಗಳ ನೇಮಕ ವಾಗಲಿದೆ ಎಂದು ಹೇಳಿದರು.
ಸ್ಥಳೀಯವಾಗಿ ಹರಿಹರ ನಗರಸಭೆಯಿಂದ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ನಡೆಸಲು ಸೆಲ್ ಕೌಂಟರ್ ಯಂತ್ರವನ್ನು ನೀಡಲು ಪತ್ರವನ್ನು ರವಾನಿಸ ಲಾಗಿದ್ದು ಅದು ಕೂಡ ಬೇಗನೆ ಆಸ್ಪತ್ರೆಗೆ ಸಾರ್ವಜನಿಕರ ಉಪಯೋಗಕ್ಕೆ ಬರಲಿದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು .ನಮ್ಮ ಆಸ್ಪತ್ರೆಯು ಸ್ವಚ್ಛತೆಯಿಂದ ಕೂಡಿದ್ದು ಸ್ವಚ್ಛತಾ ಸಿಬ್ಬಂದಿಗಳು ಕರ್ತವ್ಯ ನಿಷ್ಠೆಯಿಂದ ನಿರ್ವಹಣೆ ಮಾಡುತ್ತಿದ್ದಾರೆ. ಅದಕ್ಕಾಗಿ ನಮ್ಮ ಆಸ್ಪತ್ರೆಗೆ ಕಾಯಕಲ್ಪ ತಂಡದಿಂದ ಬಹುಮಾನವನ್ನು ಸಹ ಘೋಷಿಸಲಾಗಿದೆ ಎಂದು ಹೇಳಿದ ಅವರು ಆಸ್ಪತ್ರೆಯ ಎಲ್ಲಾ ವೈದ್ಯ ಮಿತ್ರರು ಹಾಗೂ ಸಿಬ್ಬಂದಿ ವರ್ಗದವರು ರೋಗಿಗಳು ಹಾಗೂ ಸಾರ್ವಜನಿ ಕರೊಂದಿಗೆ ಪ್ರೀತಿ ವಿಶ್ವಾಸದಿಂದ ಉತ್ತಮ ಬಾಂಧವ್ಯ ಹೊಂದಿರುವುದು ಕಾರಣವಾಗಿದೆ ಎಂದು ಹೇಳಿದರು.
ಈ ಸಮಯದಲ್ಲಿ ಹಿರಿಯ ಆರೋಗ್ಯ ಸಹಾಯಕ ಎಂ.ವಿ.ಹೊರಕೇರಿ,ಪ್ರಯೋಗ ಶಾಲೆಯ ತಂತ್ರಜ್ಞ ಚಂದ್ರಪ್ಪ,ಉಮ್ಲಾನಾಯಕ್ ,ಸತೀಶ್, ಎನ್.ಇ.ಸುರೇಶಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.