ಚಿಕ್ಕಬಳ್ಳಾಪುರ:
ಶಿಡ್ಲಘಟ್ಟ ಕ್ಷೇತ್ರದ ಮಾಜಿ ಶಾಸಕ ಎಂ ರಾಜಣ್ಣ ಗೆ ಕರೆ ಮಾಡಿರುವ ಅನಾಮಧೇಯ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣಬೆದರಿಕೆ ಹಾಕಿದ್ದಾನೆ.
ಮಾಜಿ ಶಾಸಕ ರಾಜಣ್ಣ ಅವರಿಗೆ ಕರೆ ಮಾಡಿರುವ ಅನಾಮಧೇಯ ವ್ಯಕ್ತಿ ಅತ್ಯಂತ ಕೀಳು ಮಟ್ಟದ ಭಾಷೆ ಬಳಸಿ ನಿಂದನೆ ಮಾಡಿದ್ದಾನೆ. ಕಾಂಗ್ರೆಸ್ ಪಕ್ಷದವರಿಂದ ಹಣ ತಿಂದು ಜೆಡಿಎಸ್ ಪಕ್ಷವನ್ನ ಹಾಳು ಮಾಡಿಬಿಟ್ಟೆ ಎಂದು ಏಕ ವಚನದಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ತನ್ನ ಹೆಸರಾಗಲಿ, ಊರಾಗಲಿ ಹೇಳದ ಆ ವ್ಯಕ್ತಿ ಒಂದೇ ನಂಬರಿನಿಂದ ನಾಲ್ಕೈದು ಬಾರಿ ಕರೆ ಮಾಡಿದ್ದು ನಾನು ನಿನಗೆ ಮತ ನೀಡಿದ ಮತದಾರ ಎಂದು ಹೇಳಿಕೊಂಡಿದ್ದಾನೆ ಎಂದು ಮಾಜಿ ಶಾಸಕರು ತಿಳಿಸಿದ್ದಾರೆ .
ಅಲ್ಲದೇ ಏನಾದರೂ ನೀನು ಅತಿ ಬುದ್ಧಿ ತೋರಿಸಿ ಪೊಲೀಸರಿಗೆ ದೂರು ನೀಡಿದರೆ ಹಾಡಹಗಲ್ಲಲ್ಲೇ ನಿನ್ನ ಮನೆಗೆ ಬಂದು ನಿನ್ನ ತಲೆ ಕಡಿಯುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಹೆಚ್ಚೆಂದರೆ ನೀನು ನನ್ನನ್ನು ಜೈಲಿಗೆ ಕಳುಹಿಸುತ್ತೀಯಾ ಅಷ್ಟೆ ತಾನೇ ಎಂದು ಹೇಳಿದ್ದಾನೆ ಾವಾಜ್ ಹಾಕಿದ್ದಾನೆ ಎಂದು ರಾಜಣ್ಣ ತಿಳಿಸಿದ್ದಾರೆ.
ಎಂ.ರಾಜಣ್ಣ ಎಸ್ಪಿ ಕಾರ್ತಿಕ್‍ರೆಡ್ಡಿ ಅವರನ್ನು ಭೇಟಿ ಮಾಡಿ ಅನಾಮಧೇಯ ಮೊಬೈಲ್ ಕರೆಯ ಆಡಿಯೋ ರೆಕಾರ್ಡ್ ನೀಡಿದ್ದು, ಎಸ್ಪಿ ಕಾರ್ತಿಕ್‍ರೆಡ್ಡಿ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರಿಗೆ ಈ ಬಗ್ಗೆ ತನಿಖೆ ನಡೆಸಲು ಸೂಚಿಸಿದ್ದಾರೆ ಎಂದು ತಳಿದು ಬಂದಿದೆ.