ಬೆಂಗಳೂರು
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿ ಗ್ರಾಮದ ಪ್ರಗತಿಪರ ರೈತ ರಾಧಾಕೃಷ್ಣ ಅವರಿಗೆ ಕೇಂದ್ರ ಸರ್ಕಾರ ಉತ್ತಮ ಕುರಿ ಸಾಕಣಿಕೆದಾರ ಪ್ರಶಸ್ತಿ ನೀಡಿ ಗೌರವಿಸಿದೆ.
ಕೇಂದ್ರ ಸರ್ಕಾರ ಕೃಷಿ ಮಂತ್ರಿಗಳಾದ ರಾಧಾ ಮೋಹನ್ ಸಿಂಗ್ ಅವರು ರಾಜಾಸ್ತಾನದ ಜೈಪುರದಲ್ಲಿ ನಡೆದ ರೈತಮೇಳದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ದೇಶಾದ್ಯಂತ ಇರುವ ಉತ್ತಮ ಕುರಿ ಸಾಕಾಣಿಕೆದಾರರನ್ನು ಗುರುತಿಸಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಉತ್ತಮ ಕುರಿ ಸಾಕಣಿಕೆದಾರ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದೆ. ರಾಧಾಕೃಷ್ಣ ಅವರು ಹಲವು ವರ್ಷಗಳಿಂದ ಕುರಿಸಾಕಾಣಿಕೆಯನ್ನು ವೈಜ್ಞಾನಿಕವಾಗಿ ಮಾಡುವ ಮೂಲಕ ಇತರೆ ರೈತರರಿಗೆ ಮಾದರಿಯಾಗಿದ್ದು, ಕಳೆದ ವರ್ಷ ರಾಜ್ಯ ಸರ್ಕಾರದ ಅತ್ಯುತ್ತಮ ರೈತ ಪ್ರಶಸ್ತಿಗೂ ಭಾಜನರಾಗಿದ್ದರು.
