ರಾಮನಗರ
ಉಗ್ರವಾದ ಎಂಬ ಭೂತದ ಕರಿನೆರಳು ಈಗ ನಮ್ಮ ರಾಜ್ಯದ ಮುಖ್ಯಮಂತ್ರಿಗಳ ರಾಜಕೀಯ ತವರು ಜಿಲ್ಲೆಯಾದ ರಾಮನಗರಕ್ಕೂ ಬಿದ್ದಿದೇ, ಬಟ್ಟೆ ವ್ಯಾಪಾರಿಯ ಸೋಗಿನಲ್ಲಿದ್ದ ಉಗ್ರಗಾಮಿ ಮುನೀರ್ ನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಇಂಟಲಿಜೆನ್ಸಿ ಬ್ಯೂರೊ (ಐಬಿ) ನವದೆಹಲಿ ಪೊಲೀಸರು ಹಾಗೂ ಸ್ಥಳೀಯ ಪೊಲೀಸರ ಸಹಕಾರದಿಂದ ಆಗಸ್ಟ್‌ನಲ್ಲಿ ಬಂಧಿಸಿದ್ದರು.
ಆದರೆ ಅವತ್ತು ಗೊತ್ತಾಗಿದ್ದು ಅವನೊಬ್ಬ ಉಗ್ರಗಾಮಿ ಎಂಬುದು ಮಾತ್ರ ಆದರೆ ತನಿಖೆ ಮುಂದುವರೆಸಿದ ತಂಡಕ್ಕೆ ಸಿಕ್ಕ ಮಾಹತಿಯ ಪ್ರಕಾರ ಬೌದ್ಧ ಧರ್ಮಗುರು ದಲೈಲಾಮಾ ಅವರ ಹತ್ಯೆಗೆ ಆತ ಸಂಚು ರೂಪಿಸಿದ್ದ ಎಂಬುದು ಇದೀಗ ಬೆಳಕಿಗೆ ಬಂದಿದೆ ,ಇದನ್ನು ಕೇಳಿದ ರಾಮನಗರದ ಜನತೆ ಬೆಚ್ಚಿಬಿದ್ದಿದ್ದಾರೆ. ಇಷ್ಟಕ್ಕೂ ಯಾರು ಈ ಮುನೀರ್ ಎಲ್ಲಿಂದ ಬಂದ ಎಂದು ಕೇಳಿದರೆ ಅಲ್ಲಿರುವ ಯಾರ ಬಳಿಯೂ ನಿಖರವಾದ ಮಾಹಿತಿ ಇಲ್ಲ. ಆದರೆ ಇಲ್ಲಿಯವರೆಗೂ ಸಿಕ್ಕ ಮಾಹಿತಿ ಪ್ರಕಾರ ಈತ ಬಾಂಗ್ಲಾದೇಶದ ನಿಷೇಧಿತ ಉಗ್ರ ಸಂಘಟನೆ ಜೆಎಂಬಿ ಸಕ್ರಿಯ ಕಾರ್ಯಕರ್ತ ಎಂದು ತನಿಖೆಯಿಂದ ಗೊತ್ತಾಗಿದೆ.
ದಲೈಲಾಮಾ ಹತ್ಯೆಗೆ ಸಂಚು
ಹೌದು ದಲೈ ಲಾಮಾ ಅವರ ಹತ್ಯೆಗೂ ಸಂಚು ರೂಪಿಸಿದ್ದ ಎಂಬ ವಿಚಾರ ಬಯಲಾಗುತ್ತಿದ್ದಂತೆಯೇ ಅವನು ವಾಸವಿದ್ದ ರಾಮನಗರದ ರೆಹಮಾನಿಯಾ ಬಡಾವಣೆಯ ಜನ ಭಯಭೀತರಾಗಿದ್ದಾರೆ. ಮುನೀರ್ ಇದೇ ಬಡಾವಣೆಯಲ್ಲಿ ಹೆಂಡತಿ- ಮಕ್ಕಳೊಂದಿಗೆ ಸಂಸಾರ ನಡೆಸಿಕೊಂಡಿದ್ದ. ಅಲ್ಲದೆ ಯಾರಿಗೂ ಸಂಶಯ ಬರದಂತೆ ನೋಡಿಕೊಂಡಿದ್ದ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ