ಕೊರಟಗೆರೆ
ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಚಂದ್ರಕಲಾ ಕೊರಟಗೆರೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಸಂಜೆ ದಿಢೀರ್ ಭೇಟಿ ನೀಡಿ ರೋಗಿಗಳಿಂದ ಮಾಹಿತಿ ಪಡೆದು ಆಸ್ಪತ್ರೆ ಸುವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊರಟಗೆರೆ ಸರಕಾರಿ ಆಸ್ಪತ್ರೆಗೆ ಸಂಜೆ 4 ಗಂಟೆಗೆ ಭೇಟಿ ನೀಡಿದ ಡಾ.ಚಂದ್ರಕಲಾ ಪುರುಷರ ಮತ್ತು ಮಹಿಳೆಯರ ವಾರ್ಡಿಗೆ ಭೇಟಿ ನೀಡಿ, ಆಸ್ಪತ್ರೆಯಲ್ಲಿ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ರೋಗಿಗಳಿಂದ ಮಾಹಿತಿ ಪಡೆದರು.ಆಸ್ಪತ್ರೆಗೆ ಪ್ರತಿದಿನ ಬರುವ ಒಳ ಮತ್ತು ಹೊರ ರೋಗಿಗಳ ದಾಖಲಾತಿ, ವೈದ್ಯರು ನೀಡುವ ಔಷಧಿಗಳ ಮಾಹಿತಿ ಪಡೆದುಕೊಂಡರು. ನಂತರ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ರೀತಿಯಲ್ಲಿ ಶುಶ್ರೂಶೆ ಹಾಗೂ ಚಿಕಿತ್ಸೆ ಬಗ್ಗೆ ಕೂಲಂಕಶವಾಗಿ ಪರಿಶೀಲನೆ ನಡೆಸಿ ರೋಗಿಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುವಂತೆ ವೈದ್ಯರಿಗೆ ತಿಳಿಸಿದರು.
ಕೊರಟಗೆರೆ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆ ಶೇ.75ರಷ್ಟು ಉತ್ತಮ ಆಗಿರುವ ಪರಿಣಾಮ ಕಾಯಕಲ್ಪ ಯೋಜನೆ ಆಸ್ಪತ್ರೆ ಆಯ್ಕೆ ಆಗಿದೆ. ಆಸ್ಪತ್ರೆಯಲ್ಲಿ ವ್ಶೆದ್ಯರಿಂದ ಇನ್ನೂ ಉತ್ತಮ ಸೇವೆ ಮತ್ತು ಯೋಜನೆಗೆ ಪೂರಕವಾದ ಮಾಹಿತಿ ಸಂಗ್ರಹಣೆ ಮಾಡುವ ಉದ್ದೇಶದಿಂದ ಈಗಾಗಲೇ ನಾಲ್ಕು ಭಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ರೋಗಿ ಮತ್ತು ವೈದ್ಯರ ನಡುವೆ ಉತ್ತಮ ಬಾಂಧವ್ಯ ಸೃಷ್ಟಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಸರಕಾರದ ಪರವಾನಗಿ ಇಲ್ಲದೆ ಅನಧಿಕೃತವಾಗಿ ತೆರೆದಿರುವ ಖಾಸಗಿ ಕ್ಲಿನಿಕ್‍ಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ, ತುಮಕೂರು ಜಿಲ್ಲೆಯ 24 ಕ್ಲಿನಿಕ್‍ಗಳಿಗೆ ನೊಟೀಸ್ ಜಾರಿ ಮಾಡಿ ಬೀಗ ಹಾಕಿಸಲಾಗಿದೆ. ಜಿಲ್ಲೆಯ ಕುಣಿಗಲ್, ಗುಬ್ಬಿ, ಮಧುಗಿರಿ, ಕೊರಟಗೆರೆ, ಶಿರಾ, ಚಿಕ್ಕನಾಯಕನಹಳ್ಳಿ ತಾಲ್ದಲೂಕಿನ 24 ಅನಧಿಕೃತ ಖಾಸಗಿ ಕ್ಲಿನಿಕ್‍ಗಳನ್ನು ನೋಟಿಸ್ ನೀಡಿ ಮುಚ್ಚಿಸಲಾಗಿದೆ. ಜಿಲ್ಲೆಯ ಇನ್ನು ಳಿದ ತುರುವೇಕೆರೆ, ಪಾವಗಡ, ತಿಪಟೂರು ಮತು ತುಮಕೂರು ಗ್ರಾಮಾಂತರ ಸೇರಿ ನಾಲ್ಕು ತಾಲ್ಲೂಕಿನಲ್ಲಿ ಪರವಾನಗಿ ಇಲ್ಲದೆ ಅನಧಿಕೃತವಾಗಿ ತೆರೆದಿರುವ ಕ್ಲಿನಿಕ್‍ಗಳಿವೆ ಎಂಬ ಮಾಹಿತಿ ಲಭ್ಯವಿದೆ. ತ್ವರಿತವಾಗಿ ಕ್ಲಿನಿಕ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.ಭೇಟಿ ವೇಳೆಯಲ್ಲಿ ಕೊರಟಗೆರೆ ಟಿಎಚ್‍ಓ ವಿಜಯಕುಮಾರ್, ಡಾ.ಪ್ರಕಾಶ್, ನಾಗಭೂಷಣ್, ಶಶಿಧರ, ಶುಶ್ರ್ರೂಶಕರಾದ ಪ್ರೇಮಾ, ವಿಜಯಮ್ಮ, ಭವ್ಯ, ಮಂಜುಳ ಸಿಬ್ಬಂದಿ ಮಹೇಂದ್ರ, ಮಂಜುಳ, ಲಕ್ಷ್ಮಮ್ಮ, ಮಂಜುನಾಥ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ