63ನೇ ಕನ್ನಡ ರಾಜ್ಯೋತ್ಸವ

ಹರಪನಹಳ್ಳಿ

         ರಾಜ್ಯದಲ್ಲಿ ಏಳು ಕೋಟಿ ಜನ ಕನ್ನಡಿಗರಿದ್ದರೂ ಭಾಷೆ, ಸಂಸ್ಕತಿ, ಸಂಸ್ಕಾರವನ್ನು ಉಳಿಸುವುದಕ್ಕಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ದಾವಣಗೆರೆ ಜಿಲ್ಲಾ ಕರವೇ ಅಧ್ಯಕ್ಷ ರಾಮೇಗೌಡರು ಹೇಳಿದರು.

       ಪಟ್ಟಣದ ಹಳೇ ಬಸ್‍ನಿಲ್ದಾಣದ ಆವರಣದಲ್ಲಿ ಕರ್ನಾಟಕ ರಕ್ಷಣ ವೇದಿಕೆಯ ಕನ್ನಡ ಪರ ಒಕ್ಕೂಟದ ಆಶ್ರಯದಲ್ಲಿ 63ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಹಬ್ಬ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಹೊರ ರಾಜ್ಯದದಿಂದ ಬಂದವರು ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ. ಕನ್ನಡಿಗರಿಗೆ ಹೃದಯ ಶ್ರೀಮಂತಿಕೆ ಇದೆ. ಅನ್ಯರಿಗೆ ಕನ್ನಡ ಭಾಷೆ ಕಲಿಸುವ ಬದಲು ಅವರ ಭಾಷೆಗೆ ಮಾರುಹೋಗುತ್ತಿರುವುದು ವಿಷಾದನೀಯವಾಗಿದೆ ಎಂದರು.

          ಕನ್ನಡಕ್ಕೆ ಧಕ್ಕೆಯಾದಲ್ಲಿ ಕನ್ನಡ ಪರ ಸಂಘಟನೆಗಳು ಬಲ ಪ್ರದರ್ಶನಕ್ಕೆ ಸಿದ್ದ. ರಾಜ್ಯದಲ್ಲಿ ಉದ್ಯೋಗಗಳ ಸೃಷ್ಠಿಗಾಗಿ ಡಾ.ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಬೇಕು. ಶೀಘ್ರವೇ ಬೇಡಿಕೆ ಈಡೇರಿಕೆಗೆ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ರಾಜ್ಯದಲ್ಲಿ ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

        ನೀಲಗುಂದ ಗುಡ್ಡದ ವೀರಕ್ತಮಠದ ಶ್ರೀ ಚನ್ನಬಸವ ಶಿವಯೊಗಿ ಸಾನಿಧ್ಯವಹಿಸಿ ಮಾತನಾಡಿ ಕನ್ನಡ ನಾಡಿನ ಜಲ, ನೆಲ ರಕ್ಷಣೆಗಾಗಿ ನಿತ್ಯ ಕಂಕಣ ಕಟ್ಟಿ ಕೆಲಸ ಮಾಡುವ ಕನ್ನಡ ಪರ ಸಂಘಟನೆಗಳ ಹೋರಾಟ ಶ್ಲಾಘನೀಯ ಎಂದರು.

         ವೃತ್ತ ನೀರಿಕ್ಷಕ ಡಿ.ದುರುಗಪ್ಪ ಮಾತನಾಡಿ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಉಳಿವಿಗೆ ಕನ್ನಡ ಪರ ಸಂಘಟನೆಗಳು ಪ್ರಯತ್ನಿಸುತ್ತಿವೆ. ಕನ್ನಡ ನಾಡು, ನುಡಿ ಸಾಂಸ್ಕøತಿಕವಾಗಿ ಕನ್ನಡಿಗರನ್ನು ಜಾಗೃತಗೊಳಿಸುವ ಕೆಲಸವನ್ನು ಸಂಘಟನೆಗಳು ಮಾಡಲಿ ಇದಕ್ಕೆ ಕರುನಾಡ ಜನತೆ ಸಹಕಾರ ಅಗತ್ಯವಿದೆ ಎಂದು ಹೇಳಿದರು.

        ಕನ್ನಡ ಹಬ್ಬದ ಆಚರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವರಾಜ ಹುಲಿಯಪ್ಪನವರ್ ವಹಿಸಿದ್ದರು.ಈ ಸಂದರ್ಭದಲ್ಲಿ ಜಾನಪದ ಹಾಡುಗಾರ್ತಿ ಬಿ.ಯಲಿಸಮ್ಮ, ಯುವ ಸ್ಪೂರ್ತಿ ರಾಹುಲ್, ಎಚ್.ಎಂ.ರಾಜು, ಬಸವರಾಜ ಭಂಡಾರಿ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

          ಈ ಸಂದರ್ಭದಲ್ಲಿ ಎಚ್.ಎಂ.ಅಶೋಕ, ವಕೀಲ ಮನೋಜ್, ರವೀಂದ್ರ ಅಧಿಕಾರ, ಎಚ್.ಮಲ್ಲಿಕಾರ್ಜುನ, ಮುತ್ತಿಗಿ ವಾಗೀಶ್, ಮಾರುತಿ, ವಿರೇಶ್, ಕಾಶಿನಾಥ, ನಾಗರಾಜ, ಮತ್ತಿತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap