ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ

ದಾವಣಗೆರೆ:

       ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 63ನೇ ಕನ್ನಡ ರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಜಿಲ್ಲೆಯ 15 ಜನ ಸಾಧಕರಿಗೆ ಜಿಲ್ಲಾಡಳಿತದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

      ಸಾಹಿತ್ಯ ಕ್ಷೇತ್ರದಿಂದ ಆರ್.ಜಿ.ಹಳ್ಳಿ ನಾಗರಾಜ್, ಕನ್ನಡಪರ ಚಳವಳಿ ಕ್ಷೇತ್ರದಿಂದ ಐಗೂರು ಬಿ.ಕೆ.ಸುರೇಶ್, ಡಿ.ಮಲ್ಲಿಕಾರ್ಜುನ, ಜಾನಪದ ಕ್ಷೇತ್ರದಿಂದ ಕೆ.ಕೊಳ್ಳೆಪ್ಪ, ನಾಟಕ ಕ್ಷೇತ್ರದಿಂದ ಎಸ್.ಎನ್.ರಂಗಸ್ವಾಮಿ, ಶಿಲ್ಪಕಲೆ ಕ್ಷೇತ್ರದಿಂದ ಡಿ.ಎನ್.ವೀರಭದ್ರಾಚಾರಿ, ಸಂಗೀತ ಕ್ಷೇತ್ರದಿಂದ ಎಸ್.ವಿ.ಮಹೇಶ್ವರಪ್ಪ, ವಿಜ್ಞಾನ ಕ್ಷೇತ್ರದಿಂದ ಜ್ಯೋತಿ ಎನ್ ಉಪಾಧ್ಯಾಯ, ದೃಶ್ಯ ಮಾಧ್ಯಮದಿಂದ ಎ.ಎಲ್.ತಾರಾನಾಥ್, ಪತ್ರಿಕಾ ಮಾಧ್ಯಮದಿಂದ ಜಿ.ಎಂ.ಆರ್.ಆರಾಧ್ಯ, ಯಳನಾಡು ಮಂಜುನಾಥ್, ಕ್ರೀಡಾ ಕ್ಷೇತ್ರದಿಂದ ಕೆ.ಗುರುಶಾಂತಪ್ಪ, ಶಿಕ್ಷಣ ಕ್ಷೇತ್ರದಿಂದ ಚಿಕ್ಕೋಳ ಈಶ್ವರಪ್ಪ, ಸಮಾಜ ಸೇವಾ ಕ್ಷೇತ್ರದಿಂದ ದೊಗ್ಗಳ್ಳಿ ಗೌಡ್ರು ಪುಟ್ಟರಾಜು, ಕ್ರೀಡೆ ಕ್ಷೇತ್ರದಿಂದ ಕುಮಾರಿ ರೇವತಿ ಎಂ.ನಾಯಕ ಅವರುಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

         ಈ ಸಂದರ್ಭದಲ್ಲಿ ಶಾಸಕ ಎಸ್.ಎ.ರವೀಂದ್ರನಾಥ, ಜಿ.ಪಂ ಅಧ್ಯಕ್ಷೆ ಕೆ.ಆರ್.ಜಯಶೀಲಾ, ಉಪಾಧ್ಯಕ್ಷೆ ರಶ್ಮಿ ರಾಜಪ್ಪ, ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟೆ, ಸದಸ್ಯ ಆವರಗೆರೆ ಉಮೇಶ್, ಕಾರ್ಮಿಕ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಜಿ ಪಂ ಸಿಇಓ ಎಸ್.ಅಶ್ವತಿ, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ, ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ