ದಾವಣಗೆರೆ:
ಕನ್ನಡ ಸಂಸ್ಕತಿ ಇಲಾಖೆ ಹಾಗೂ ಹೈ-ಟೆಕ್ ಪದವಿ ಪೂರ್ವ ಕಾಲೇಜ್ ಇವರ ಸಂಯುಕ್ತಾಶ್ರಯದಲ್ಲಿ “ಕನ್ನಡ ಉಳಿಸಿ, ಕನ್ನಡ ಬೆಳೆಸಿ” ಕಾರ್ಯಕ್ರಮ ನಡೆಯಿತು.
ಇಲಾಖೆಯ ಸಿದ್ದೇಶ್ವರ ಹಿರೇಮಠ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಜೀವನಕ್ಕೆ ಸಹಬಾಳ್ವೆ, ದಾನ, ಧರ್ಮದಂತ ಗುಣಗಳನ್ನು ಬೆಳಸಿಕೋಳ್ಳಬೇಕೆಂದು ತಿಳಿಸಿದರು. ಪ್ರಪಂಚ ಸಾಹಿತ್ಯದಲ್ಲಿ ಕನ್ನಡ ಸಾಹಿತ್ಯವು ಅತ್ಯಂತ ಪ್ರಾಚೀನ ಮತ್ತು ಪ್ರಬಲವಾದ ಸಾಹಿತ್ಯವೆಂದು ಭಾರತದಲ್ಲಿ ಹಿಂದೆ ಭಾಷೆಯನ್ನು ಹೊರತುಪಡಿಸಿ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಬಸವರಾಜ್ ಸಾಗರ್ ಮಾತನಾಡಿ, ನಾವು ಭಾಷೆಯನ್ನು ಓದಿದರು ಕೂಡ ಎಷ್ಟೆ ದೊಡ್ಡ ಮಟ್ಟಿಕ್ಕೆ ಬೆಳೆದರು ಕೂಡ ನಮ್ಮ ಮಾತೃ ಭಾಷೆಯನ್ನು ಮರೆಯಬಾರದು ನಮ್ಮ ಭಾಷೆಯನ್ನು ಬೆಳಸಿ ಉಳಿಸಬೇಕೆಂದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ರಮೇಶ್ ಉಪಸ್ಥಿತರಿದ್ದರು. ಹರೀಶ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ