ದೇಶಾದ್ಯಂತ ವಿಚಕ್ಷಣಾ ಸಪ್ತಾಹ

ಬೆಂಗಳೂರು

      ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಹಾಗೂ ಸಾರ್ವಜನಿಕ ಜೀವನಮಟ್ಟ ಸುಧಾರಣೆಗಾಗಿ ದೇಶಾದ್ಯಂತ ಇಂದಿನಿಂದ ವಿಚಕ್ಷಣಾ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ.

      ಭ್ರಷ್ಟಾಚಾರ ನಿರ್ಮೂಲನೆ ಹಾಗೂ ನವಭಾರತ ನಿರ್ಮಾಣ ಈ ವರ್ಷದ ಸಪ್ತಾಹ ಆಚರಣೆಯ ಪರಿಕಲ್ಪನೆಯಾಗಿದೆ.ಸರ್ಕಾರದ ಹಲವು ಸಚಿವಾಲಯಗಳು, ಇಲಾಖೆಗಳು, ಸಾರ್ವಜನಿಕ ವಲಯದ ಘಟಕಗಳು, ಬ್ಯಾಂಕುಗಳು ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಇರುವ ನೌಕರರು ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಸಪ್ತಾಹ ಆರಂಭಗೊಂಡಿದೆ.

        ಭ್ರಷ್ಟಾಚಾರದ ವಿರುದ್ಧ ಅರಿವು ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ಈ ಸಪ್ತಾಹದ ಸಂದರ್ಭದಲ್ಲಿ ಆಯೋಜಿಸಲಾಗುತ್ತದೆ. ಸರ್ದಾರ್ ವಲ್ಲಬ್ಭಾಯ್ ಪಟೇಲ್ ಅವರ ಜನ್ಮದಿನವಿರುವ ವಾರದಲ್ಲಿ ಈ ಸಪ್ತಾಹವನ್ನ ಪ್ರತಿವರ್ಷ ಆಚರಿಸಲಾಗುತ್ತದೆ. ಅಕ್ಟೋಬರ್ 31 ಸರ್ದಾರ್ ವಲ್ಲಬ್ಭಾಯ್ ಪಟೇಲ್ ಅವರ ಜನ್ಮದಿನ.

        ಬೆಂಗಳೂರಿನ ವಿಧಾನಸೌಧದಲ್ಲಿ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವ ಕೆ.ಜೆ.ಜಾರ್ಜ್, ಸಚಿವಾಲಯದ ಸಿಬ್ಬಂದಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap