ಹರಿಹರ:
ನಗರದ ಹೊಸಭರಂಪುರ ಬಡಾವಣೆಯ ಶ್ರೀ ಗ್ರಾಮದೇವತೆ ಹಾಗೂ ಭರಂಪುರ ಯುವಕ ಸಂಘದಿಂದ ಪ್ರತಿಷ್ಠಾಪಿಸಿದ ಶ್ರೀ ಮಹಾಗಣಪತಿ ವಿಸರ್ಜನೆಯುನ್ನು ಮೇಳಗಳ ನಡುವೆ ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ಭಾನುವಾರ ರಾತ್ರಿ ಗಣೇಶ ವಿಸರ್ಜನೆ ನೆರವೆರಿತ್ತು.
ನಗರದ ಹೊಸಭರಂಪುರ ಶ್ರೀ ಗ್ರಾಮದೇವತೆ ದೇವಸ್ಥಾನ ಮುಂಭಾಗದಿಂದ ಪ್ರಾರಂಭಗೊಂಡ ಮೆರವಣಿಗೆ ಪ್ರಮುಖ ಬಡಾವಣೆಯ ಮೂಲಕ ಹಳೆ. ಪಿ.ಬಿ.ರಸ್ತೆ, ಗಾಂಧಿ ವೃತ್ತ, ಮುಖ್ಯ ರಸ್ತೆ, ಗಳ ಮುಖಾಂತರ ಸಂಚರಿಸಿ ನಂತರ ಶ್ರೀ ರಾಘವೇಂದ್ರ ಸ್ವಾಮಿ ಮಠದ ಹತ್ತಿರ ತುಂಗಭದ್ರಾ ನದಿಯ ದಡದಲ್ಲಿ ಶ್ರೀ ಗಣೇಶ ಮೂರ್ತಿಗೆ ವಿಶೇಷ ಪೋಜೆಯನ್ನು ಸಲ್ಲಿಸಿ ನಂದಿಯಲ್ಲಿ ವಿಸರ್ಜನೆ ಮಾಡಲಾಯಿತು.
ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಕಲಾ ತಂಡಗಳಾದ ಡೊಳ್ಳು, ಸಮಾಳ, ನಂದಿಕೋಲು, ಜಾಂಜ್ ಮೇಳ ಸೇರಿದಂತೆ ಡಿ.ಜಿ ಸೌಂಡ್ ಸಿಸ್ಟ್‍ಮ್‍ನ ವ್ಯವಸ್ಥೆಯನ್ನು ಮೆರವಣಿಗೆಯಲ್ಲಿ ಮಾಡಲಾಗಿತ್ತು. ಮೆರವಣಿಗೆಯಲ್ಲಿ ಇಂಪಾದ ಸಂಗೀತದ ನೃತ್ಯಕ್ಕೆ ಯುವಕರು ಕುಣಿದು ಕುಪ್ಪಳ್ಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಪೂಜಾರ್ ಈರಣ್ಣ, ಮಜ್ಜಿಗಿ ಪಾಲಾಕ್ಷಪ್ಪ, ಸುರೇಶ್ ಚಂದಾಪೂರ್, ಕೆ.ಬಿ. ರಾಜಶೇಖರ್, ಬೆಣ್ಣಿ ರೇವಣಸಿದ್ದಪ್ಪ, ಚಿದಾನಂದ ಕಂಚಿಕೇರಿ, ಎಂಹೆಚ್‍ಬಿ ಚಂದ್ರಶೇಖರ್, ಅಡಿಕಿ ಕುಮಾರ್, ಬೆಣ್ಣಿ ಸಿದ್ದೇಶ್, ಚಂದ್ರು ಕೆ.ಬಿ. ಕೆಂಚಪ್ಪ, ಚಂದ್ರಪ್ಪ ಮಜ್ಗಿ, ಪ್ರದೀಪ್, ರಾಘವೇಂದ್ರ, ನಾಗರಾಜ್, ಪರಮೇಶ್ವರಪ್ಪ ನಿಲಗುಂದ, ರಾಘು ಚೌಗಲೆ, ಕೆ.ಜಿ. ಸಿದ್ದೇಶ್, ಪೂಜರ್ ಹೇಮಣ್ಣ, ನಿಲಗುಂದ ಜಗದೀಶ್, ಹವನೂರು ವೀರಣ್ಣ, ಅರ್ಚಕ ನಾಗರಾಜ್, ಮುಂತಾದವರು ಉಪಸ್ಥಿತರಿದರು,
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ