ಮತದಾನದ ಹಕ್ಕನ್ನು ಮತ ಚಲಾಯಿಸುವ ಮೂಲಕ ಸದ್ಬಳಕೆ ಮಾಡಿಕೊಳ್ಳಿ

ಹರಿಹರ:

         ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾಗರೀಕರಿಗೆ ದೊರೆಯುವ ಅಮೂಲ್ಯ ಮತದಾನದ ಹಕ್ಕನ್ನು ಪ್ರತಿಯೊಬ್ಬರೂ ಮತ ಚಲಾಯಿಸುವ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಇಲ್ಲಿನ ಜೆಎಂಎಫ್‍ಸಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಅವಿನಾಶ ಚಿಂದು ಹೆಚ್. ಕರೆ ನೀಡಿದರು.

        ನಗರದ ಮಿನಿ ವಿಧಾನಸೌಧದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ತಾಲೂಕು ಆಡಳಿತದ ಸಂಯುಕ್ತ ಆಶ್ರಯದಲ್ಲಿ ನಡೆದ ಯುವ ದಿನಾಚರಣೆ ಹಾಗೂ ಮತದಾನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಭಾರತದಂಥಹ ಪ್ರಜಾಪ್ರಭುತ್ವ ದೇಶವನ್ನು ಮುನ್ನಡೆಸಲು ಅತ್ಯುತ್ತಮ, ಧಕ್ಷ ಹಾಗೂ ಸಾಮಾಜಿಕ ಕಾಳಜಿ ಹೊಂದಿರುವ ಜನ ನಾಯಕರ ಅವಶ್ಯಕತೆ ಇದೆ. ಮತದಾನದ ಮೂಲಕ ಅಂತಹ ಉತ್ತಮರನ್ನು ಆಯ್ಕೆ ಮಾಡುವ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಪಣ ತೊಡಬೇಕು ಎಂದರು.

        ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ನ್ಯಾಯವಾದಿ ಜಿ.ಹೆಚ್.ಭಾಗೀರಥಿ, ಭಾರತದ ಸಂಸ್ಕತಿ, ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟ ಸ್ವಾಮಿ ವಿವೇಕಾನಂದರ ಜನ್ಮದಿನ ಯುವ ದಿನಾಚರಣೆಯನ್ನೂ, ಭಾರತದ ಚುನಾವಣಾ ಆಯೋಗ ಸ್ಥಾಪನೆಯಾದ ದಿನ ಮತದಾರರ ದಿನಾಚರಣೆಯನ್ನೂ ಆಚರಿಸಲಾಗುತ್ತಿದೆ. ಬಹುಸಂಖ್ಯೆಯ ಮತದಾರರಾಗಿವ ಯವಕರು ತಮ್ಮ ಮತದ ಮೂಲಕ ದೇಶದ ಭವಿಷ್ಯವನ್ನು ನಿರ್ಧರಿಸಬಹುದು ಎಂದರು.

         ಮತ ಜನರ ಬಳಿ ಇರುವ ಅತ್ಯಂತ ಶಕ್ತಿಶಾಲಿ ಹಾಗೂ ಪರಿಣಾಮಕಾರಿ ಅಸ್ತ್ರ. ಸಾಮಾನ್ಯ ವ್ಯಕ್ತಿಯೂ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ, ಖಾಸಗೀ ಕ್ಷೇತ್ರಗಳಲ್ಲಿ ದೇಶದ ಅತ್ಯನ್ನತ ಸ್ಥಾನಕ್ಕೆ ಹೋಗುವ ಅವಕಾಶ ಪ್ರಜತಾಂತ್ರದಲ್ಲಿ ಮಾತ್ರ ಸಾಧ್ಯ. ಇಂತಹ ಸೌಲಭ್ಯಗಳ ಫಲಾನುಭವಿಗಳಾದ ನಾವು ಈ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ತಪ್ಪದೆ ಮತದಾನ ಮಾಡಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ನಾಗರಾಜ ಹಲುವಾಗಲು ಮಾತನಾಡಿ, ಪ್ರತಿಯೊಬ್ಬರಲ್ಲೂ ಅತ್ಯುತ್ತಮ ಪ್ರತಿಭೆಯಿದ್ದು, ಅದನ್ನು ಬೆಳೆಸಿ, ಬಳಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರು ಹೇಳುವಂತೆ ನಾವು ಮಾಡೋ ಯಾವುದೋ ಒಂದು ಕೆಲಸದಲ್ಲಿ 100 ಬಾರಿ ಸೋತರೂ 101ನೇ ಬಾರಿ ಗೆದ್ದೆ ಗೆಲ್ತೇನೆ ಎಂಬ ಆತ್ಮವಿಶ್ವಾಸದಲ್ಲಿ ಮುನ್ನಡೆಯಬೇಕು ಎಂದರು.

       ಕಾರ್ಯಕ್ರಮದಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾದ ಯುವ ಮತದಾರರಿಗೆ ಎಪಿಕ್ ಕಾರ್ಡ್ ವಿತರಿಸಲಾಯಿತು. ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ ಚುನಾವಣಾ ಸಿಬ್ಬಂದಿಗಳಿಗೂ ಸತ್ಕರಿಸಲಾಯಿತು. ತಹಶೀಲ್ದಾರ್ ರೆಹನ್‍ಪಾಷಾ ಅಧ್ಯಕ್ಷತೆ ವಹಿಸಿದ್ದರು. ಬಿಇಒ ಬಸವರಾಜಪ್ಪ, ಪೌರಾಯುಕ್ತೆ ಎಸ್.ಲಕ್ಷ್ಮಿ, ಸಿಪಿಐ ಗುರುನಾಥ, ಎಪಿಪಿ ಷಂಶೀರ್ ಅಲಿಖಾನ್, ವಕೀಲರಾದ ನಾಗರಾಜ್ ಬಿ., ರಿಯಾಜ್ ಅಹ್ಮದ್, ಶಿಕ್ಷಕ ರೇವಣ್ಣ ನಾಯ್ಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link